
100 ಮಿ.ಲೀ. ಕೊಬ್ಬರಿ ಎಣ್ಣೆಲಿ 2 ಟೀಸ್ಪೂನ್ ಮೆಂತ್ಯ ಕಾಳು, ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಿ. ಸ್ಟವ್ ನಿಂದ ಎಣ್ಣೆ ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಎಣ್ಣೆ ಸೋಸಿ ಒಂದು ಬಾಟಲಿಗೆ ಹಾಕಿ. ಈ ಎಣ್ಣೆಯನ್ನ ವಾರಕ್ಕೆ ಎರಡು ಸಲ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿ ಹಚ್ಚಿ.. ಬೆಳಿಗ್ಗೆ ತಲೆಸ್ನಾನ ಮಾಡಿದ್ರೆ ಸಾಕು.
ಈ ಎಣ್ಣೆ ಹಚ್ಚೋದ್ರಿಂದ ಆಗೋ ಲಾಭಗಳು…
ಕೂದಲು ಒಣಗೋದನ್ನ ಕಡಿಮೆ ಮಾಡುತ್ತೆ
ಒಣ ಕೂದಲು ಒಣಗೋದನ್ನ ಕಡಿಮೆ ಮಾಡೋಕೆ, ಕೊಬ್ಬರಿ ಎಣ್ಣೆ ,ಮೆಂತ್ಯ ಕಾಳಿಂದ ತಯಾರಿಸಿದ ಈ ಎಣ್ಣೆಯನ್ನ ತಲೆಗೆ ಹಚ್ಚಬಹುದು. ಇದು ನೆತ್ತಿಗೆ ಪೋಷಣೆ ಕೊಡುತ್ತೆ. ಕೂದಲಿಗೆ ಪೋಷಕಾಂಶಗಳು ಸಿಗೋದ್ರಿಂದ, ಅದು ಮೃದುವಾಗಿ, ಗಟ್ಟಿ ಕೂಡ ಆಗುತ್ತೆ.