Headlines

ಬಿಗ್ ಬಾಸ್ ಮನೆಯಲ್ಲಿ ಅಳುತ್ತಾ ಕುಳಿತ ಸ್ಪಂದನಾ: ಸಮಾಧಾನ ಮಾಡಲು ಗಂಡ್ಮಕ್ಕಳ ಡ್ಯಾನ್ಸ್

ಬಿಗ್ ಬಾಸ್ ಮನೆಯಲ್ಲಿ ಅಳುತ್ತಾ ಕುಳಿತ ಸ್ಪಂದನಾ: ಸಮಾಧಾನ ಮಾಡಲು ಗಂಡ್ಮಕ್ಕಳ ಡ್ಯಾನ್ಸ್


ಕಿರುತೆರೆ ನಟಿ ಸ್ಪಂದನಾ ಸೋಮಣ್ಣ (ಸ್ಪಂದನಾ ಸೋಮಣ್ಣ) ಅವರು ಬಿಗ್ ಬಾಸ್ ಮನೆಯಲ್ಲಿ ಅಳುತ್ತಾ ಕುಳಿತಿದ್ದಾರೆ. ಅವರಿಗೆ ಸಮಾಧಾನ ಮಾಡಲು ಧನುಷ್, ಅಭಿಷೇಕ್ ಹಾಗೂ ಸೂರಜ್ ಸಿಂಗ್ (ಸೂರಜ್ ಸಿಂಗ್) ಅವರು ಪ್ರಯತ್ನಿಸಿದ್ದಾರೆ. ಮಾತಿನಲ್ಲಿ ಎಷ್ಟು ಸಮಾಧಾನ ಮಾಡಿದರೂ ಸ್ಪಂದನಾ ಅವರು ಅಳು ನಿಲ್ಲಿಸಿಲ್ಲ. ಬಳಿಕ ಅಭಿಷೇಕ್, ಸೂರಜ್ ಸಿಂಗ್ ಮತ್ತು ಧನುಷ್ ಅವರು ಡ್ಯಾನ್ಸ್ ಮಾಡಿದರು. ‘ಜಿಂಕೆ ಮರಿನಾ..’ ಹಾಡಿಗೆ ಈ ಮೂವರು ಹೆಜ್ಜೆ ಹಾಕಿದ್ದಾರೆ. ಅವರ ಡ್ಯಾನ್ಸ್ ನೋಡಿ ಸ್ಪಂದನಾ ಅವರು ನಕ್ಕಿದ್ದಾರೆ. ಡಿಸೆಂಬರ್ 3 ರ ಸಂಚಿಕೆಯ ಕಾರ್ಯಕ್ರಮವನ್ನು ‘ಕಲರ್ಸ್ ಕನ್ನಡ’ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್ ಒಟಿಟಿ ಮೂಲಕ ಎಪಿಸೋಡ್ ಪ್ರಸಾರ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ) ಶೋನಲ್ಲಿ 65 ದಿನಗಳು ಕಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *