Headlines

ಬೆಂಗಳೂರಿಗರೇ ಎಚ್ಚರ ಎಚ್ಚರ: ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ

ಬೆಂಗಳೂರಿಗರೇ ಎಚ್ಚರ ಎಚ್ಚರ: ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ


ಬೆಂಗಳೂರು, ಡಿಸೆಂಬರ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯೋಗಸ್ಥರು. ಹೀಗಾಗಿ ಇಲ್ಲಿರುವ ಯಾವುದೇ ಕೆಲಸ ಯಾವುದಕ್ಕೂ ಸಮಯವಿಲ್ಲ. ಆಫೀಸ್ ಟೈಂ ಹೊರತಾಗಿ ಟ್ರಾಫಿಕ್ ಸಮಸ್ಯೆಯ ಕಾರಣಕ್ಕೆ ಅಧಿಕ ಸಮಯ ಮಾರ್ಗದಲ್ಲೇ ಕಳೆಯಬೇಕಾದ ಸ್ಥಿತಿ ಹಲವರದ್ದು. ಹೀಗಾಗಿಯೇ ಕಡಿಮೆ ನಿದ್ದೆ, ಬೆಳಗ್ಗಿನ ಉಪಹಾರವನ್ನು ಸೇವಿಸದೇ ಇರೋದು ಅನೇಕರ ಜೀವನಶೈಲಿಯಾಗಿ ಹೋಗಿದೆ. ಆದರೆ ಇತ್ತೀಚಿನ ಅಂಕಿ ಅಂಶವೊಂದು ಇಂಥವರಿಗೆ ಎಚ್ಚರಿಕೆಯ ಗಂಟೆ ಎಂಬಂತಿದೆ.

ಕಡಿಮೆ ನಿದ್ದೆಯ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಕಚೇರಿಯಲ್ಲಿ ಮುಖಮಾಡುವವರ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುತ್ತದೆ. ಅದರಲ್ಲೂ ಯುವ ಜನತೆಯೇ ಇವರಲ್ಲಿ ಹೆಚ್ಚು ಆಸಕ್ತಿಕರ ವಿಷಯ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳುವವರ ಸಂಖ್ಯೆ ನಮ್ಮ ಮೆಟ್ರೋದಲ್ಲೇ 300ರ ಗಡಿ ದಾಟಿದೆ. ಇದು ಕಳೆದ ಮೂರು ತಿಂಗಳ ಅವಧಿಯ ಅಂಕಿ-ಅಂಶವಾಗಿದ್ದು, ಬಸ್ ಸೇರಿದಂತೆ ಇತರ ವಾಹನಗಳಲ್ಲಿ ಸಂಚರಿಸುವ ವೇಳೆ ಈ ರೀತಿಯ ಘಟನೆಗಳು ನಡೆದಿವೆ.

ಇದನ್ನೂ ಓದಿ: ಈ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ 5 ನಿಮಿಷಗಳಲ್ಲಿ ಕಡಿಮೆ

ತಲೆಸುತ್ತು ಸಮಸ್ಯೆಯನ್ನು ತಡೆಯುವುದು ಹೇಗೆ?

  • ಕಡಿಮೆ ನಿದ್ರೆ ಮಾಡೋದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೇಡ
  • ಪ್ರಯಾಣಕ್ಕೂ ಮುನ್ನ ಕಡ್ಡಾಯವಾಗಿ ಬ್ರೇಕ್ ಫಾಸ್ಟ್ ಸೇವಿಸಿ
  • ಮನೆಯಿಂದ ಹೊರಡುವ ವೇಳೆಗ ಕನಿಷ್ಠ ಬಾಳೆಹಣ್ಣು, ಡ್ರೈಫೂಟ್ಸ್, ಕಾಳುಗಳನ್ನು ಸೇವಿಸಿ
  • ಉಸಿರುಗಟ್ಟಿಸುವಂತಹ ಉಡುಪಗಳನ್ನು ಸಾಧ್ಯವಾದಷ್ಟು ಧರಿಸಬೇಡಿ

ಇನ್ನು ನಿದ್ದೆಗೆಟ್ಟು ಖಾಲಿ ಹೊಟ್ಟೆಯಲ್ಲಿ ಆಫೀಸ್ ಗಳಿಗೆ ತೆರಳುವ ಮಂದಿಗೆ ವೈದ್ಯರ ಸೂಚನೆ. ನಿದ್ದೆ ಮತ್ತು ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕಂಡು ಬರುತ್ತದೆ. ಇದರ ಜೊತೆಗೆ ನಿಂತುಕೊಂಡು ಪ್ರಯಾಣ ಮಾಡಿದರೆ ಆಯಾಸಗೊಂಡು, ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕನಿಷ್ಠ 6 ಗಂಟೆಯಾದರೂ ನಿದ್ದೆಯ ಜೊತೆಗೆ ಸರಿಯಾದ ಸಮಯಕ್ಕೆ ಬೆಳಗ್ಗಿನ ಉಪಹಾರ ಸೇವಿಸುವಂತೆ ಡಾ. ದೇವಿಂದ್ರಪ್ಪ ಸಲಹೆ ಸೂಚನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:19 pm, ಬುಧವಾರ, 3 ಡಿಸೆಂಬರ್ 25



Source link

Leave a Reply

Your email address will not be published. Required fields are marked *