ಬೆಂಗಳೂರು, (ಡಿಸೆಂಬರ್ 03): ಕರ್ನಾಟಕದಲ್ಲಿ ಇಂದಿನಿಂದ ಚಾಲನಾ ಪರವಾನಗಿ(ಡಿಎಲ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ಮತ್ತಷ್ಟು ಸ್ಮಾರ್ಟ್ ಆಗಲಿದೆ. ಹೌದು…ಸಾರಿಗೆ ಇಲಾಖೆಯಿಂದ ಇಂದು (ಡಿಸೆಂಬರ್ 03) ಜಾರಿಯಲ್ಲಿದೆ ಆರ್ಸಿ ಹೊಸ ಸ್ಮಾರ್ಟ್ ಕಾರ್ಡ್ ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದವರಿಗೆ ಹೊಸ ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಹೊಸ ಕಾರ್ಡ್ ಕ್ಯೂಆರ್ ಕೋಡ್ ಅಳವಡಿಕೆ ಮಾಡಿರುವುದು. ಸ್ಕ್ಯಾನ್ ಮಾಡಿ ಕಾರ್ಡ್ ಮಾಹಿತಿ ಪಡೆಯಬಹುದು. ಒಂದು ಕಾರ್ಡ್ ಗೆ 200 ರೂ ಶುಲ್ಕ ನಿಗದಿಪಡಿಸಲಾಗಿದೆ, 135 ರೂ ಸರ್ಕಾರಕ್ಕೆ 64.46.ಸೇವಾದಾರರ ಪಾಲು ಎಂದು ಮಾಹಿತಿ ನೀಡಲಾಗಿದೆ.
ಒಂದು ಗಂಟೆಗೆ 500 ರಿಂದ 600 ಕಾರ್ಡ್ ಪ್ರಿಂಟಿಂಗ್ ಆಗುತ್ತಿದೆ, ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗುತ್ತಿದೆ. ಪ್ರತಿದಿನ ಹದಿನೈದು ಸಾವಿರ ಕಾರ್ಡ್ ಗಳು ಪ್ರಿಂಟ್ ಆಗಲಿದೆ. ಇಟಲಿ ಮೂಲದ ಎರಡು ಪ್ರಿಂಟಿಂಗ್ ಮಿಷನ್ ನಿಂದ ಸ್ನಾರ್ಟ್ ಕಾರ್ಡ್ ಪ್ರಿಂಟ್ ಮಾಡಲಾಗುತ್ತಿದೆ, ಶಾಂತಿನಗರದಿಂದ ಕೇಂದ್ರ ಕಚೇರಿಯಿಂದ ಸ್ಮಾರ್ಟ್ ಕಾರ್ಡ್ಗಳು ಎಲ್ಲಾ ಜಿಲ್ಲೆಗಳಿಗೆ ರವಾನೆಯಾಗಲಿವೆ. ಇನ್ನು ಹಳೆ ಕಾರ್ಡ್ ಗಳು ಎಂದಿನಂತೆ ಚಲಾವಣೆಯಲ್ಲಿರುತ್ತೆ ಎಂದು ಹೇಳಿದರು.
ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಸಿಗಲಿರುವ ಹೊಸ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತೆ. ಎಲ್ಲ ಕಾರ್ಡ್ ಇರುವವರು ಹೊಸ ಸ್ಮಾರ್ಟ್ ಕಾರ್ಡ್ ಬಯಸಿದ್ದಲ್ಲಿ 200 ರೂ. ಪಡೆಯಬೇಕು. ಡಿಸೆಂಬರ್ 15 ರಿಂದ ಹೊಸ ಡಿಎಲ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತೆ. ರೋಸ್ ಸ್ಮಾರ್ಟ್ ಸಂಸ್ಥೆ 5 ವರ್ಷಗಳ ಕಾಲ ಯೋಜನೆ ಟೆಂಡರ್ ಪಡೆದಿದೆ ಎಂದು ಪ್ರಕಟಿಸಿದೆ.