‘ಕಲ್ಕಿ 2898 ಎಡಿ’ (ಕಲ್ಕಿ 2898 AD) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು ಮತ್ತು ಅವರು ಈ ಚಿತ್ರದ ಸೀಕ್ವೆಲ್ ನಲ್ಲಿ ಇರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮಾತ್ರ ಅಲ್ಲ ಈ ಚಿತ್ರದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಕೂಡ ಈ ವಿಷಯವನ್ನು ಖಚಿಪಡಿಸಿತ್ತು.ಈಗ ಸೀಕ್ವೆಲ್‌ಗೆ ಪ್ರಿಯಾಂಕಾ ಚೋಪ್ರಾ ಅವರನ್ನ ಪರಿಣಿಸುವ ಬಗ್ಗೆ ತಂಡದವರು ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಟಾಲಿವುಡ್ ನಗರದಲ್ಲಿ ಈ ರೀತಿಯ ಸುದ್ದಿ ಹರಿದಾಡುತ್ತಾ ಇದೆ.
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಥೆ ಪೂರ್ಣಗೊಡಿಲ್ಲ. ಈ ಚಿತ್ರದ ಕೊನೆಯಲ್ಲಿ ದೀಪಿಕಾ ಪಾತ್ರ ಕಿಡ್ನ್ಯಾಪ್ ಆಗುತ್ತದೆ. ಹೀಗಾಗಿ, ಭಾಗ 2 ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಈ ನಿರ್ದೇಕ ನಾಗ್ ಅಶ್ವಿನ್ ಅವರು ಸಿನಿಮಾಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಹೊಸ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಪರಿಗಣಿಸಲಾಗಿದೆ.
ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ ನ ಮದುವೆ ಆದ ಬಳಿಕ ವಿದಶಕ್ಕೆ ಹಾರಿದರು. ಹಾಲಿವುಡ್ ಚಿತ್ರಗಳನ್ನು ಮಾಡುವಂತೆ. ಆದರೆ, ಈಗ ಅವರು ಮತ್ತೆ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ದೊಡ್ಡ ಸಂಭಾವನೆ ಕೊಟ್ಟಿದ್ದಕ್ಕೆ ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಿಯಾಂಕಾ ನಾಯಕಿ ಆಗಿ ಮಿಂಚಲಿದ್ದಾರೆ, ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:’ವಾರಣಾಸಿ’ ಸಿನಿಮಾ ಇವೆಂಟ್‌ನಲ್ಲಿ ಸಖತ್ ಆಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ
ಈಗ ಪ್ರಿಯಾಂಕಾ ಅವರನ್ನು ಸಂಪರ್ಕಿಸಲು ತಂಡದವರು ರೆಡಿ ಆಗಿದ್ದಾರೆ. ಅವರು ಒಪ್ಪಿಗೆ ಕೊಟ್ಟರ ತಂಡ ಕೂಡ ಖುಷಿ ಪಡಲಿದೆ. ‘ಕಲ್ಕಿ 2898 ಎಡಿ’ ಸೀಕ್ವೆಲ್ ಆಗಿರುವ ಶೂಟ್ ಸ್ಟುಡಿಯೋದಲ್ಲಿ. ಈ ವಿಷಯವನ್ನು ಪ್ರಿಯಾಂಕಾಗೆ ಮನದಟ್ಟು ಮಾಡಲು ತಂಡ ನಿರ್ಧರಿಸಿದೆ. ಈ ಸಿನಿಮಾ ಶೂಟ್‌ಗೆ ಅವರು ಹೈದರಾಬಾದ್‌ಗೆ ಬರುತ್ತಾರೆ.
ದೀಪಿಕಾ ಪಡುಕೋಣೆ ಅವರು ಮೊದಲು ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರ ಹೋದರು. ಆ ಬಳಿಕ ‘ಕಲ್ಕಿ 2898 ಎಡಿ’ ಸೀಕ್ವೆಲ್‌ನನಿಂದ ಹೊರಕ್ಕೆ ಬಂದರು. ಇದಕ್ಕೆಲ್ಲ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆದಿದೆ. ದೀಪಿಕಾ ಅವರು ಕೇವಲ 8 ಗಂಟೆ ಮಾತ್ರ ಶೂಟ್ ಮಾಡೋದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ, ಬಂದ ಲಾಭದಲ್ಲಿ ಅರು ಪಾಲು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣದಿಂದ ಅವರನ್ನು ಹೊರಕ್ಕೆ ಇಡಲಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದರೆ ಉತ್ತಮ ಎಂಬುದು ಅಭಿಮಾನಿಗಳ ಅಭಿಪ್ರಾಯ ಕೂಡ ಹೌದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ