Headlines

ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ | Popcorn Remedy For Cockroach Rat Lizard Ect Step By Step Inform Here Suc

ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ | Popcorn Remedy For Cockroach Rat Lizard Ect Step By Step Inform Here Suc


16

ಜಿರಳೆ ಎನ್ನುವ ಸಮಸ್ಯೆ

Image Credit : South China Morning Post

ಜಿರಳೆ ಎನ್ನುವ ಸಮಸ್ಯೆ

ಮನುಷ್ಯರು ಹುಟ್ಟುವ ಮೊದಲೇ ಹುಟ್ಟಿದ್ದು ಜಿರಳೆ ಎನ್ನುವುದು ಅಧ್ಯಯನದಿಂದ ಸಾಬೀತು ಆಗುತ್ತದೆ. ಹೊಸ ಮನೆ ಕಟ್ಟಿಸಿದರೂ ಅದ್ಯಾವುದೋ ಮಾಯೆಯಿಂದ, ಎಷ್ಟೇ ಮನೆ ಸ್ವಚ್ಛ ಇಟ್ಟರೂ ಜಿರಳೆ ಕಾಟವಂತೂ ಇದ್ದೇ ಇದೆ.

26

ರಾಸಾಯನಿಕದ ಸಮಸ್ಯೆ

Image Credit : pinterest

ರಾಸಾಯನಿಕದ ಸಮಸ್ಯೆ

ಅದರ ಜೊತೆಗೇನೇ ಹಲ್ಲಿಗಳು ಕೂಡ ಕಾಣಿಸಿಕೊಳ್ಳುವುದು ಸಾಮಾನ್ಯ. ಜಿರಳೆಗಳನ್ನು ಸಾಯಿಸಲು ಹಲವಾರು ರಾಸಾಯನಿಕ ಸಿಂಪಡಣೆಗಳು ಮಾರುಕಟ್ಟೆಯಲ್ಲಿ ಸಿಕ್ಕರೂ, ಅವು ಆರೋಗ್ಯಕ್ಕೆ ಅಷ್ಟೇ ಡೇಂಜರಸ್​, ಅವುಗಳಿಂದ ಭಯಾನಕ ರೋಗಗಳು ಬರುತ್ತವೆ ಎನ್ನುವುದು ಇದಾಗಲೇ ಸಾಬೀತು ಆಗಿದೆ.

36

ಸುಲಭದ ಉಪಾಯ

Image Credit : quicktipcorner Instagram

ಸುಲಭದ ಉಪಾಯ

ಇನ್ನು ಹಲ್ಲಿಗಳನ್ನು ಸಾಯಿಸಲು ಕೆಲವರು ಇಷ್ಟಪಡುವುದಿಲ್ಲ. ಅದರ ಜೊತೆ ಇಲಿಗಳ ಕಾಟವಿದ್ದರಂತೂ ದೇವರೇ ಗತಿ ಎನ್ನುವ ಸ್ಥಿತಿ ಇರುತ್ತದೆ. ಆದರೆ ಇವೆಲ್ಲವುಗಳನ್ನೂ ಹಲವರಿಗೆ ಇಷ್ಟವಾಗುವ ಪಾಪ್​ಕಾರ್ನ್​ನಿಂದ ಓಡಿಸಬಹುದು ಎನ್ನುವುದು ನಿಮಗೆ ಗೊತ್ತೆ?

46

ಪಾಪ್​ಕಾರ್ನ್​

Image Credit : quicktipcorner Instagram

ಪಾಪ್​ಕಾರ್ನ್​

ಕ್ವಿಕ್​ಟಿಪ್​ ಕಾರ್ನರ್​ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಪಾಪ್​ಕಾರ್ನ್​ ರೆಡಿಮೇಡ್​ ಆಗಿರಬಹುದು, ಇಲ್ಲವೇ ಅದನ್ನು ಮನೆಯಲ್ಲಿಯೇ ಐದು ನಿಮಿಷದಲ್ಲಿ ಸಿದ್ಧಪಡಿಸಲು ಇರುವ ಕಾರ್ನ್​ ಆಗಿರಬಹುದು. ಒಟ್ಟಿನಲ್ಲಿ ಪಾಪ್​ಕಾರ್ನ್​ ಅನ್ನು ಮೊದಲಿಗೆ ಪುಡಿ ಮಾಡಿಕೊಳ್ಳಬೇಕು.

56

ಸ್ನಾನದ ಸೋಪ್​

Image Credit : quicktipcorner Instagram

ಸ್ನಾನದ ಸೋಪ್​

ಪುಡಿಯಾಗಿರುವ ಪಾಪ್​ಕಾರ್ನ್​ ಅನ್ನು ಒಂದು ಕಂಟೇನರ್​ಗೆ ಹಾಕಿಕೊಳ್ಳಬೇಕು. ಬಳಿಕ ನೀವು ಉಪಯೋಗಿಸುವ ಯಾವುದೇ ಒಂದು ಸ್ನಾನದ ಸಾಬೂನನ್ನು ತುರಿದು ಅದರ ಪುಡಿಯನ್ನು ಅದೇ ಕಂಟೇನರ್​ನಲ್ಲಿ ಮಿಕ್ಸ್ ಮಾಡಬೇಕು.

66

ಹತ್ತಿರ ಸುಳಿಯುವುದಿಲ್ಲ

Image Credit : quicktipcorner Instagram

ಹತ್ತಿರ ಸುಳಿಯುವುದಿಲ್ಲ

ಅದಕ್ಕೆ ಬೇಕಿಂಗ್​ ಪೌಡರ್​ ಅನ್ನು ಮಿಕ್ಸ್​ ಮಾಡಬೇಕು. ಕಾಲು ಟೀ ಚಮಚ ಸಾಕಾಗುತ್ತದೆ. ಅದನ್ನು ಚೆನ್ನಾಗಿ ಮಿಕ್ಸ್​ ಮಾಡಬೇಕು. ಎಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಅದನ್ನು ಚಿಕ್ಕ ಡಬ್ಬದಲ್ಲಿ, ಇಲ್ಲವೇ ಪಾತ್ರೆಯಲ್ಲಿ ಜಿರಳೆ, ಹಲ್ಲಿ, ಇರುವೆ… ಇಂಥ ಜಾಗಗಳಲ್ಲಿ ಇಡಬೇಕು. ಪಾಪ್​ಕಾರ್ನ್​ ವಾಸನೆಗೆ ಇವು ಯಾವುದೂ ಹತ್ತಿರ ಸುಳಿಯುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *