ಬೆಳಗಾವಿ, ಡಿಸೆಂಬರ್ 4: ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ (ಬೆಳಗಾವಿ) ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇದಕ್ಕೆ ಬೇಕಾದ ಸಿದ್ದತೆಗೆ ಲಭ್ಯವಿರುವ ಸಜ್ಜಾಗಿದೆ. ಸಚಿವರು, ಶಾಸಕರು, ಸಚಿವಾಲಯದ ಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ 12ಸಾವಿರಕ್ಕೂ ಅಧಿಕ ಸಿಬ್ಬಂದಿ ಅಧಿವೇಶನ ಕಾರ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗೆ ಅಧಿವೇಶನಕ್ಕೆ ಬರುವವರಿಗೆ 3 ಸಾವಿರ ರೂಂಗಳು ಬುಕ್ ಆಗಿದ್ದು, ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಮತ್ತೊಂದೆಡೆ, ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ.
ಅಧಿವೇಶನದಲ್ಲಿ ಅನಾಹುತ ಆಗಬಾರದೆಂಬ ಕಾರಣಕ್ಕೆ, ಬಾರಿಗೆ ಮೂರು ಸಾವಿರ ಬದಲಾಗಿ ಏಳು ಸಾವಿರ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುತ್ತಿದೆ. ನಿತ್ಯ ಹತ್ತರಿಂದ ಹದಿನೈದು ಸಂಘಟನೆಗಳು ಸುವರ್ಣ ವಿಧಾನಸೌಧದ ಪಕ್ಕದಲ್ಲಿ ಪ್ರತಿಭಟನೆ ನಡೆಯಲಿವೆ.
ಸದ್ಯ ಅಧಿವೇಶನಕ್ಕೆ ತಯಾರಿ ಒಂದೆಡೆಯಾದರೆ ಸಿಸಿ ಕ್ಯಾಮರಾ, ಡ್ರೋನ್ ಬಳಕೆ, ಹೆಚ್ಚು ಸಿಬ್ಬಂದಿ ಬಳಕೆ ಮಾಡಿಕೊಂಡು ಸಸೂತ್ರವಾಗಿ ಅಧಿವೇಶನ ನಡೆಸಲು ಕುಂದಾನಗರಿ ಸಜ್ಜಾಗಿದೆ. ಈ ಬಾರಿಯ ರೈತರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಮೀಸಲಾತಿಗಾಗಿ ಸಮುದಾಯಗಳು ಬೃಹತ್ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದು, ಹೀಗಾಗಿ ಹೆಚ್ಚಿನ ಎಚ್ಚರಿಕೆಯನ್ನು ಮಾಡಿಕೊಳ್ಳಲಾಗಿದೆ.
ದ್ವೇಷ ಭಾಷಣದ ವಿರುದ್ಧ ವಿಧೇಯಕ ಮಂಡನೆಗೆ ಸರ್ಕಾರದ ಸಿದ್ಧತೆ
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ವಿಧೇಯಕ-2025 ರ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ನಡೆಯಲಿದ್ದು, ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ನಂತರ ಸಂಪುಟ ಅನುಮೋದನೆ ಪಡೆದು, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಕಟ್ಟೆಚ್ಚರಕ್ಕೆ ಸೂಚಿಸಿದ ಕೇಂದ್ರ ಗುಪ್ತಚರ ಇಲಾಖೆ, ಅಧಿಕಾರಿಗಳು ಹೈ ಅಲರ್ಟ್
ಚಳಿಗಾಲದ ಅಧಿವೇಶನ ಪೂರ್ವಭಾವಿಯಾಗಿ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ