Headlines

ತುಂಬಿ ತುಳುಕುತ್ತಿರುವ ಬೆಂಗಳೂರು ಏರ್​ಪೋರ್ಟ್​ ಟರ್ಮಿನಲ್ 1: ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ಪ್ರಯಾಣಿಕರ ಪರದಾಟ

ತುಂಬಿ ತುಳುಕುತ್ತಿರುವ ಬೆಂಗಳೂರು ಏರ್​ಪೋರ್ಟ್​ ಟರ್ಮಿನಲ್ 1: ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ಪ್ರಯಾಣಿಕರ ಪರದಾಟ


ಬೆಂಗಳೂರು, ಡಿಸೆಂಬರ್ 4: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಳೆದ ಎರಡು ದಿನಗಳಿಂದ ಇಂಡಿಗೋ ಏರ್‌ಲೈನ್ಸ್ ಸಂಚಾರದಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದೆ, ಪ್ರಯಾಣಿಕರು ಪರದಾಡುತ್ತಿದ್ದಾರೆ. ಇಂಡಿಗೋ ವಿಮಾನಗಳಲ್ಲಿ ಪೈಲಟ್ ಮತ್ತು ಸಿಬ್ಬಂದಿ ಕೊರತೆ ಕಂಡುಬಂದಿರುವುದೇ ಈ ಸ್ಥಿತಿಗೆ ಪ್ರಮುಖ ಕಾರಣ. ಹಲವು ವಿಮಾನಗಳ ಡಿಪಾರ್ಚರ್ ವರದಿಯಲ್ಲಿ ಅನಿಯಮಿತ ಬದಲಾವಣೆ, ಗಂಟೆಗಟ್ಟಲೆ ವಿಳಂಬ, ಕೆಲವು ಸಂದರ್ಭಗಳಲ್ಲಿ ಬೋರ್ಡಿಂಗ್ ಪ್ರಕ್ರಿಯೆಗೆ ತೊಂದರೆಯಾದ ಘಟನೆಗಳು. ಟರ್ಮಿನಲ್ 1ರಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಡಿಪಾರ್ಚರ್ ಗೇಟ್‌ ಬಳಿ ಪ್ರಯಾಣಿಕರು ಕುಳಿತುಕೊಳ್ಳಲು ಜಾಗವೇ ಸಿಗುವಷ್ಟು ಇಕ್ಕಟ್ಟು ಉಂಟಾಯಿತು. ಗೇಟ್‌ಗಳ ಬಳಿ ಜನಸಂದಣಿ ಹೆಚ್ಚಾದ ಕಾರಣ, ಪ್ರಯಾಣಿಕರು ನೆಲದಲ್ಲೇ ಕೂತು ವಿಶ್ರಾಂತಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು.

ವಿಮಾನ ವಿಳಂಬದಿಂದ ವಿಮಾನ ನಿಲ್ದಾಣದಲ್ಲಿ ಅತಿಯಾದ ಪ್ರಯಾಣಿಕರ ದಟ್ಟಣೆ ಉಂಟಾಗಿದೆ, ವಿಮಾನ ನಿಲ್ದಾಣ ಸಿಬ್ಬಂದಿಗೂ ನಿಯಂತ್ರಣ ಕಷ್ಟವಾಗಿದೆ. ಪ್ರಯಾಣಿಕರು ಇಂಡಿಗೋ ಏರ್‌ಲೈನ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗಂಟೆಗಟ್ಟಲೇ ಕಾಯಿದೆ, ಯಾವುದೇ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ, ಇದು ಏರ್‌ಲೈನ್‌ನ ನಿರ್ಲಕ್ಷ್ಯ’ ಎಂದು ಹಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ವಿಮಾನ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಹಿಡಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *