Headlines

ಗಿಲ್ಲಿ ನಿಜವಾದ ಎಂಟರ್​ಟೇನರ್​; ಬಾಯ್ತುಂಬ ಹೊಗಳಿದ ಶಿವಣ್ಣನ ವಿಡಿಯೋ ವೈರಲ್

ಗಿಲ್ಲಿ ನಿಜವಾದ ಎಂಟರ್​ಟೇನರ್​; ಬಾಯ್ತುಂಬ ಹೊಗಳಿದ ಶಿವಣ್ಣನ ವಿಡಿಯೋ ವೈರಲ್


ಗಿಲ್ಲಿ ನಟ (ಗಿಲ್ಲಿ ನಾಟಾ) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಆಗಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿರುವುದನ್ನು ಕಾಣಬಹುದಾಗಿದೆ. ಅವರು ಈ ಸೀಸನ್ ವಿನ್ನರ್ ಎಂದು ಅವರ ಅಭಿಮಾನಿಗಳು ಭಾವಿಸಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಮನರಂಜನೆ ಕೂಡ ನೀಡುತ್ತಿದ್ದಾರೆ ಎರಡು ಮಾತಿಲ್ಲ. ಗಿಲ್ಲಿ ನಿಜವಾದ ಎಂಟರ್‌ಟೇನರ್ ಎಂದು ಶಿವರಾಜ್‌ಕುಮಾರ್ ಅವರು ಬಾಯ್ತುಂಬ ಹೊಗಳಿದ ಹಳೆಯ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಗಿಲ್ಲಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆ ಬರುವುದಕ್ಕೂ ಮೊದಲು ಹಲವು ರಿಯಾಲಿಟಿ ಶೋಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಜೀ ಕನ್ನಡದಲ್ಲಿ ಪ್ರಸಾರ ಕಂಡ ಡ್ಯಾನ್ಸ್ ಕರ್ನಾಟಕ ನೃತ್ಯ. ಈ ವೇದಿಕೆಯ ಮೇಲೆ ಗಿಲ್ಲಿ ನಟ ಅವರು ಮಿಂಚಿದ್ದರು. ಅವರು ವೇದಿಕೆ ಏರಿದ್ದಾಗ ಶಿವಣ್ಣ ಹೇಳಿದ್ದು ಸಾಕಷ್ಟು ವೈರಲ್ ಆಗುತ್ತಾ ಇದೆ.

‘ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಒಳ್ಳೆಯವರನ್ನು ನೆನಪಿಸಿಕೊಳ್ಳಬೇಕು’ ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ. ಆ ಬಳಿಕ ರಕ್ಷಿತಾ ಕೂಡಿದೆ. ‘ಈ ವೇದಿಕೆಯಿಂದ ಗಿಲ್ಲಿ ಸಾಕಷ್ಟು ಹೆಸರು ಮಾಡಬೇಕು. ಅವರು ದಿ ಡಿಕೆಡಿ’ ಎಂದಿದ್ದರು ರಕ್ಷಿತಾ. ಆಗ ಶಿವಣ್ಣ ಅದರ ಅರ್ಥ ವಿವರಿಸಿದರು. ‘ದಿ ಡಿಕೆಡಿ ಎಂದರೆ ನಿಜವಾದ ಎಂಟರ್ ಟೇನರ್ ಎಂದರ್ಥ’ ಎಂದು ಶಿವಣ್ಣ ಹೇಳಿದರು. ಇದನ್ನು ಕೇಳಿ ಗಿಲ್ಲಿ ಖುಷಿಪಟ್ಟಿದ್ದರು. ‘ನಮ್ಮ ಗಿಲ್ಲಿ ಅಂದರೆ ಇದು’ ಎಂದು ಕೆಲವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ ಕಾವ್ಯ

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಗಿಲ್ಲಿಗೆ ಯಾರೂ ದೊಡ್ಡ ಪ್ರತಿಸ್ಪರ್ಧಿ ಇಲ್ಲ ಎಂಬಂತಾಗಿದೆ. ಅವರು ಪ್ರತಿ ಹಂತದಲ್ಲೂ ಮನರಂಜನೆ ನೀಡುತ್ತಿದ್ದಾರೆ. ಅವರು ಸಾಕಷ್ಟು ನಗಿಸುತ್ತಿದ್ದಾರೆ. ಅವರ ಜೊತೆ ಮಾತಿಗೆ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆ ರೀತಿಯಲ್ಲಿ ಅವರು ಮಾತನಾಡುತ್ತಾ ಇದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದರ್ಶನ್ ಹೀರೋ. ಈ ಚಿತ್ರ ಡಿಸೆಂಬರ್ 11 ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *