ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (ಪುಷ್ಪಾ 2) ಸಿನಿಮಾ ಕಳೆದ ವರ್ಷ ಡಿಸೆಂಬರ್ 4 ರಂದು ರಿಲೀಸ್ ಆಯಿತು. ಅಂದರೆ ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಈ ಚಿತ್ರ ತೆರೆಗೆ ಬಂದು ದಾಖಲೆಗಳ ಮೇಲೆ ದಾಖಲೆ ಬರೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದ್ದು ಗೊತ್ತೇ ಇದೆ. ಈಗ ಈ ಸಿನಿಮಾ ಮತ್ತೆ ತೆರೆ ಕಾಣಲು ರೆಡಿ ಆಗಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಾದರೆ, ಈ ಚಿತ್ರ ಮತ್ತೆ ಕಾಣಲು ಕಾರಣ ಏನು? ಅಂದಹಾಗೆ ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ಚಿತ್ರ ತೆರೆಗೆ ಬರುತ್ತಿರುವುದು ಜಪಾನ್ ಅಲ್ಲಿ.
ಜಪಾನ್ ಅಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ. ‘ಬಾಹುಬಲಿ’, ‘ಬಾಹುಬಲಿ 2’, ‘ಕೆಜಿಎಫ್ 2’ ‘ಆರ್‌ಆರ್‌ಆರ್’ ಅಂತಹ ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ಯಶಸ್ಸು ಕಂಡವು. ‘ಪುಷ್ಪ’ ಸಿನಿಮಾ ಕೂಡ ಈ ಮೊದಲು ಜಪಾನ್ ಅಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಈಗ ‘ಪುಷ್ಪ 2’ ಚಿತ್ರದ ಸರದಿ.
ಮುಂದಿನ ವರ್ಷ ಜನವರಿ 16ರಂದು ‘ಪುಷ್ಪ 2’ ಚಿತ್ರ ಜಪಾನ್‌ನಲ್ಲಿ ತೆರೆಗೆ ಬರಲಿದೆಯಂತೆ. ‘ಪುಷ್ಪ’ ಚಿತ್ರದ ಕಥೆಗೆ ಜಪಾನ್ ಲಿಂಕ್ ಇತ್ತು. ಎರಡನೇ ಭಾಗ ಆರಂಭ ಆಗೋದು ಕೂಡ ಜಪಾನ್ ಕಥೆಯೊಂದಿಗೆ. ಕಥಾ ನಾಯಕ ಜಪಾನ್‌ಗೆ ತೆರಳುತ್ತಾನೆ ಮತ್ತು ಅಲ್ಲಿ ಫೈಟ್ ನಡೆಯುತ್ತಿದೆ. ಹೀಗಾಗಿ ಜಪಾನ್ ಜನರಿಗೆ ಸಿನಿಮಾ ಮತ್ತಷ್ಟು ಇಷ್ಟ ಆಗಬಹುದು ಎಂಬ ಆಲೋಚನೆಯಲ್ಲಿ ತಂಡವಿದೆ.
‘ಪುಷ್ಪ’ ಸಿನಿಮಾ ಜಪಾನ್ ಅಲ್ಲಿ ತೆರೆಗೆ ಬಂದು ಯಶಸ್ಸು ಕಂಡಿತ್ತು. ಈಗ ಸೀಕ್ವೆಲ್ನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.
ಇದನ್ನೂ ಓದಿ: ‘ಪುಷ್ಪ 3’ ಅಲ್ಲ, ಅಲ್ಲ ಅರ್ಜುನ್ ಬದಲಿಗೆ ಬೇರೊಬ್ಬ ಸ್ಟಾರ್ ಜೊತೆ ಕೈ ಜೋಡಿಸಿದ ಸುಕುಮಾರ್
ಸುಕುಮಾರ್ ಅವರು ‘ಪುಷ್ಪ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮೂರನೇ ಭಾಗ ಇನ್ನಷ್ಟೇ ಬರಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.