ಬೆಂಗಳೂರು, ಡಿಸೆಂಬರ್ 04: ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ಬುಧವಾರವೂ ಭಾರಿ ವ್ಯತ್ಯಯ ಉಂಟಾಗಿದೆ. ಒಟ್ಟು 142 ಇಂಡಿಗೋ ವಿಮಾನಗಳ ಸಂಚಾರದಲ್ಲಿ ಉಂಟಾಗಿದ್ದು, ಆ ಕೆಲವು ವಿಳಂಬವಾದರೆ ಇನ್ನು ಕೆಲವು ವಿಮಾನಗಳು ರದ್ದಾಗಿವೆ. ಕಳೆದ ತಿಂಗಳಿನಿಂದ ಜಾರಿಯಾಗಿರುವ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೆಡ್ ಹಿನ್ನೆಲೆ ಪೈಲಟ್‌ಗಳು ಮತ್ತು ಸಿಬ್ಬಂದಿ ಡ್ಯೂಟಿಗೆ ಹಾಜರಾಗದಿರುವುದೇ ಹೆಚ್ಚಿನ ವ್ಯತ್ಯಯಗಳಿಗೆ ಕಾರಣ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನ ಮೂಲಗಳ ಪ್ರಕಾರ, ಇಂಡಿಗೋ ಸಂಸ್ಥೆಯ ಒಟ್ಟು 42 ವಿಮಾನಗಳು ರದ್ದುಗೊಂಡಿವೆ. ಬೆಂಗಳೂರಿಗೆ ಬರಬೇಕಾಗಿದ್ದ ಒಂದು ವಿಮಾನದ ಮಾರ್ಗವನ್ನು ಬದಲಾಯಿಸಲಾಗಿದೆ. ಇನ್ನು, ಪೈಲಟ್‌ಗಳು ಕರ್ತವ್ಯಕ್ಕೆ ಹಾಜರಾಗದೆ ಇರುವ ಬಗ್ಗೆ ವರದಿಗಳು ಹರಿದಾಡುತ್ತಿದೆ, ಇಂಡಿಗೋ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ಕ್ಷಮೆಯಾಚಿಸುತ್ತೇವೆ ಎಂದು.
ಇದನ್ನೂ ಓದಿ: ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ಪ್ರಯಾಣಿಕರ ಪರದಾಟ
ಅನಿರೀಕ್ಷಿತ ಕಾರ್ಯಾಚರಣಾ ಸವಾಲುಗಳು, ಸಣ್ಣ ತಾಂತ್ರಿಕ ದೋಷ, ಚಳಿಗಾಲದ ಬದಲಾವಣೆ, ಹವಾಮಾನ ವೈಪರೀತ್ಯ, ವಿಮಾನಯಾನ ವ್ಯವಸ್ಥೆಯ ಹೆಚ್ಚಿದ ವಾಹನ ದಟ್ಟಣೆ ಮತ್ತು ನವೀಕರಿಸಿದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೆಡ್ ಜಾರಿ ಸೇರಿದಂತೆ ಕೆಲವು ವಿಷಯಗಳು ನಮ್ಮ ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುತ್ತವೆ. ಅರ್ಹ ಪ್ರಯಾಣಿಕರಿಗೆ ಹಣ ಮರುಪಾವತಿಯಾಗುವುದಿಲ್ಲ ಅಥವಾ ಪರ್ಯಾಯ ವಿಮಾನಗಳನ್ನು ಒದಗಿಸುವುದಿಲ್ಲ ಎಂದು ಸಂಸ್ಥೆಯು.
ಏರ್ ಇಂಡಿಯಾ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಮಾಹಿತಿ ಪ್ರಕಾರ, ಬುಧವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನ 38 ವಿಮಾನಗಳ ಹಾರಾಟವೂ ವ್ಯತ್ಯಯವಾಗಿದೆ. ವಿಮಾನದಲ್ಲಿ ಕೆಲ ಸಿಬ್ಬಂದಿಯನ್ನು ಗುರುತಿಸಿದ ಕಾರಣ ಮಂಗಳವಾರ ಮೂರು ವಿಮಾನಗಳು ಒಂದು ಗಂಟೆಗೂ ಹೆಚ್ಚು ತಡವಾಗಿ ಸಂಚರಿಸುತ್ತಿದ್ದವು. ವಿಮಾನಗಳನ್ನು ಗೇಟ್‌ಗೆ ಹಿಂದಕ್ಕೆ ಕರೆಸಿ ನಿರ್ವಹಣಾ ಸಿಬ್ಬಂದಿ ಪರಿಶೀಲನೆ ನಡೆಸಿ, ಬಳಿಕ ಸಂಚಾರಕ್ಕೆ ಅನುಮತಿ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:36 am, ಗುರು, 4 ಡಿಸೆಂಬರ್ 25