Headlines

ಚಿನ್ನಸ್ವಾಮಿಯಲ್ಲಿ ವಿರಾಟ್‌ ಕೊಹ್ಲಿ ಆಟ ನೋಡಲು ಫ್ಯಾನ್ಸ್‌ಗೆ ಅನುಮತಿ? ಇಲ್ಲಿದೆ ಮಹತ್ವದ ಅಪ್‌ಡೇಟ್ | Virat Kohli Likely To Play Vijay Hazare Trophy In Bengaluru Kvn

ಚಿನ್ನಸ್ವಾಮಿಯಲ್ಲಿ ವಿರಾಟ್‌ ಕೊಹ್ಲಿ ಆಟ ನೋಡಲು ಫ್ಯಾನ್ಸ್‌ಗೆ ಅನುಮತಿ? ಇಲ್ಲಿದೆ ಮಹತ್ವದ ಅಪ್‌ಡೇಟ್ | Virat Kohli Likely To Play Vijay Hazare Trophy In Bengaluru Kvn


18

ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ

Image Credit : X/@INDCricketGuide

ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ

ಇದೇ ಡಿಸೆಂಬರ್ 24ರಿಂದ ಆರಂಭಗೊಳ್ಳಲಿರುವ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಡೆಲ್ಲಿ ತಂಡದ ಪರ ಆಡುವ ನಿರೀಕ್ಷೆಯಿದೆ.

28

ಡೆಲ್ಲಿಯ 7 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

Image Credit : Instagram/indiancricketteam

ಡೆಲ್ಲಿಯ 7 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಡೆಲ್ಲಿ ತಂಡದ 7 ಪಂದ್ಯಗಳು ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಆಲೂರಿನಲ್ಲಿ 5 ಹಾಗೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2 ಪಂದ್ಯಗಳು ನಡೆಯಲಿವೆ.

38

ಬೆಂಗಳೂರಿನಲ್ಲಿ ಕೊಹ್ಲಿ ಕೆಲ ಪಂದ್ಯವಾಡುವ ಸಾಧ್ಯತೆ

Image Credit : ANI

ಬೆಂಗಳೂರಿನಲ್ಲಿ ಕೊಹ್ಲಿ ಕೆಲ ಪಂದ್ಯವಾಡುವ ಸಾಧ್ಯತೆ

ವಿರಾಟ್ ಕೊಹ್ಲಿ ಕೆಲ ಪಂದ್ಯಗಳನ್ನಾದರೂ ಆಡುವ ಸಾಧ್ಯತೆಯಿದೆ. ಒಂದು ವೇಳೆ ಅವರು ಕಣಕ್ಕಿಳಿದರೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಆಗಮಿಸಲಿದ್ದಾರೆ.

48

ಅಭಿಮಾನಿಗಳಿಗೆ ಗುಡ್‌ ನ್ಯೂಸ್?

Image Credit : Facebook/Indian Cricket Team

ಅಭಿಮಾನಿಗಳಿಗೆ ಗುಡ್‌ ನ್ಯೂಸ್?

ಹೀಗಾಗಿ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶ ಇದೆಯೇ ಎಂಬ ಕುತೂಹಲವಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಹಂಗಾಮಿ ಕಾರ್ಯದರ್ಶಿ ಎಂ.ಎಸ್‌.ವಿನಯ್‌ ಅವರು ‘ಕನ್ನಡಪ್ರಭ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

58

ಫ್ಯಾನ್ಸ್‌ಗೆ ನಿಷೇಧ ಹೇರಿಲ್ಲ!

Image Credit : ANI

ಫ್ಯಾನ್ಸ್‌ಗೆ ನಿಷೇಧ ಹೇರಿಲ್ಲ!

‘ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಭಿಮಾನಿಗಳಿಗೆ ಪ್ರವೇಶವಿದೆ. ಅವರಿಗೆ ನಿಷೇಧ ಹೇರಲಾಗಿಲ್ಲ. ವಿರಾಟ್‌ ಕೊಹ್ಲಿ ಆಡಿದರೆ ಹೆಚ್ಚಿನ ಜನರು ಆಗಮಿಸಬಹುದು. ಇದರ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸಿ, ಪೊಲೀಸ್‌ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಿದ್ದೇವೆ. ಎಷ್ಟು ಜನರಿಗೆ ಪ್ರವೇಶ ನೀಡಬಹುದು ಎಂಬುದರ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

68

ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣ

Image Credit : X Handle

ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣ

ಜೂನ್‌ 04ರಂದು ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇನ್ನು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

78

ಸರ್ಕಾರದಿಂದ ಬಿಗಿ ನಿಲುವು

Image Credit : Asianet News

ಸರ್ಕಾರದಿಂದ ಬಿಗಿ ನಿಲುವು

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದಾದ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯ ನಡೆಸಲು ಅವಕಾಶ ನೀಡಿರಲಿಲ್ಲ.

88

ಚಿನ್ನಸ್ವಾಮಿಯಿಂದ ಮಹತ್ವದ ಪಂದ್ಯಗಳು ಎತ್ತಂಗಡಿ

Image Credit : RCB\Instagram

ಚಿನ್ನಸ್ವಾಮಿಯಿಂದ ಮಹತ್ವದ ಪಂದ್ಯಗಳು ಎತ್ತಂಗಡಿ

ಇದೇ ಕಾರಣಕ್ಕೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಎಂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದವು. ಮುಂಬರುವ ಐಪಿಎಲ್ ಆಯೋಜನೆಯ ಕುರಿತಂತೆಯೂ ಇದುವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *