Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ

Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ


ಬೋಧಗಯಾ, ಡಿಸೆಂಬರ್ 04: ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವರ ಹಾಗೂ ವಧುವಿನ ಕುಟುಂಬದ ನಡುವೆ ಒಂದೋ ವರದಕ್ಷಿಣೆ ವಿಚಾರಕ್ಕೆ ಇಲ್ಲವೋ ಊಟದ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಬಿಹಾರದ ಬೋಧ್ ಗಯಾದ ಹೋಟೆಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಸಗುಲ್ಲಾ ಕಡಿಮೆಯಾಯ್ತೆಂದು ವರನ ಕಡೆಯವರು ಕುರ್ಚಿಗಳನ್ನು ಮುರಿದು ರಾದ್ದಾಂತ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆಯ ನಂತರ ಮದುವೆಯನ್ನೇ ರದ್ದುಗೊಳಿಸಲಾಯಿತು. ಈ ಘಟನೆ ನವೆಂಬರ್ 29 ರಂದು ನಡೆದಿತ್ತು. ವಧುವಿನ ಕುಟುಂಬವು ಅದೇ ಹೋಟೆಲ್‌ನಲ್ಲಿ ತಂಗಿತ್ತು. ಆರಂಭಿಕ ಆಚರಣೆಗಳನ್ನು ಮಾಡಿದ ನಂತರ, ವಧು-ವರರು ಸಪ್ತಪದಿ ತುಳಿಯಲೆಂದು ಮಂಟಪಕ್ಕೆ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ.ವಧುವಿನ ಕುಟುಂಬವು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *