ಹೆಚ್ಚಿನವರು ವಿದೇಶಿ ಜೀವನ (ವಿದೇಶಿ ಜೀವನ) ಇಷ್ಟ ಪಡ್ತಾರೆ. ಹೀಗೆ ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುತ್ತಾರೆ. ವಿದೇಶದಲ್ಲಿ ಉದ್ಯೋಗ ಸಿಕ್ಕರೆ ಲೈಫ್ ಸೆಟ್ ಆದಂತೆ ಅಂದುಕೊಳ್ತಾರೆ. ಆದರೆ ಅಲ್ಲಿಂದ ಅವರಿಗೆ ಮಾತ್ರ ಕಷ್ಟ ಗೊತ್ತು. ಕೆನಾಡದಲ್ಲಿ (ಕೆನಡಾ) ನೆಲೆಸಿರುವ ಅನಿವಾಸಿ ಭಾರತೀಯರಿಗೆ ಇಲ್ಲಿ ಬದುಕೋಕೆ ಆಗಲ್ಲ, ಹೀಗಾಗಿ ತಮ್ಮ ಐದು ವರ್ಷಗಳ ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಹೌದು, ಸಾಮಾಜಿಕ ಪ್ರತ್ಯೇಕತೆ, ರಚನಾತ್ಮಕ ವಿದೇಶಿ ಜೀವನಶೈಲಿಯಲ್ಲಿ ಸ್ವಾತಂತ್ರ್ಯದ ಕೊರತೆಯನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ತಾಯ್ನಾಡು ನಮಗೆ ಚಂದ ವಾತಾವರಣ.
r/returnToIndia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಕೆನಡಾದಲ್ಲಿ 5 ವರ್ಷ ವಾಸಿಸಿದ ನಂತರ ನನಗೆ ಇಲ್ಲಿ ಎಲ್ಲವನ್ನು ಸಹಿಸಲು ಸಾಧ್ಯವಾಗಲಿಲ್ಲ. ಸಾಮಾಜಿಕ ಪ್ರತ್ಯೇಕತೆಯಿದೆ. ನನಗೆ ಇಲ್ಲಿ ಸ್ನೇಹಿತರಿದ್ದು, ಆದರೆ ವಿದೇಶದಲ್ಲಿ ಜೀವನವು ರೋಬೋಟಿಕ್ ಅನಿಸಿತು. ಡ್ರೈವಿಂಗ್ ಕೂಡ ತುಂಬಾ ರಚನಾತ್ಮಕ ಮತ್ತು ರೋಬೋಟಿಕ್ ಆಗಿದೆ. ಹೀಗಾಗಿ ನಾನು ಮನುಷ್ಯ ಎಂದು ಭಾವಿಸುವುದನ್ನು ನಿಲ್ಲಿಸಿದೆ. ಇಲ್ಲಿ ಎಲ್ಲವನ್ನೂ ಯೋಜಿಸಬೇಕು. ಮತ್ತೊಂದೆಡೆ, ಭಾರತದಲ್ಲಿ ಸಂಘಟಿತ ವ್ಯವಸ್ಥೆ ಇದೆ, ಅದನ್ನು ನಾನು ತುಂಬಾ ಮಿಸ್ ಮಾಡಿಕೊಳ್ತೇನೆ. ಇಡೀ ದಿನವನ್ನು ಖರ್ಚು ಮಾಡದ ಯಾದೃಚ್ಛಿಕ ಮುಖಾಮುಖಿಗಳು ಮತ್ತು ಸ್ವಯಂಪ್ರೇರಿತ ಯೋಜನೆಗಳಿಂದ ನಾನು ತಪ್ಪಿಸಿಕೊಂಡಿದ್ದೇನೆ ಎಂದು ಹೇಳಿದರು.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ನಾನು ಅದನ್ನು ಮಾಡಿದೆ. ನಾನು ಇಂದು ನನ್ನ ಕೆಲಸವನ್ನು ತೊರೆದಿದ್ದೇನೆ ಮತ್ತು ಮುಂದಿನ ಭಾನುವಾರ ಮನೆಗೆ ಹಿಂತಿರುಗಲು ನನ್ನ ವಿಮಾನವನ್ನು ಬುಕ್ ಮಾಡಿದ್ದೇನೆ byu/Automatic-Funny-8842 inreturnToIndia
ಡೇಟಿಂಗ್ ಜೀವನ ಇಲ್ಲಿಯೂ ಸಹ ನೀರಸವಾಗಿದೆ. ಎಲ್ಲರೂ ಮನೆಯೊಳಗೆ ಸಮಯ ಕಳೆಯುತ್ತಿರುವಾಗ ಈ ಚಳಿಗಾಲದಲ್ಲಿ ಯಾರನ್ನಾದರೂ ಹೊಂದುವುದು ಅದೃಷ್ಟ. ನಾನು ಭವಿಷ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಕೊಳಕು ಮತ್ತು ನಾಗರಿಕ ಉತ್ಪನ್ನ ಇಲ್ಲದ ಭಾರತವನ್ನು ನಾನು ದ್ವೇಷಿಸುತ್ತೇನೆ, ಆದರೆ ಅದರ ಎಲ್ಲಾ ನ್ಯೂನತೆಗಳನ್ನು ನಾನು ಸಹಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದೇನೆ.
ಇದನ್ನೂ ಓದಿ:ಸೀರೆಯುಟ್ಟ ಭಾರತೀಯ ನಾರಿಯೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡ ವಿದೇಶಿಗರು
ಈ ಪೋಸ್ಟ್ ವೈರಲ್ ಆಗಿರುವುದರಿಂದ ಒಬ್ಬ ಬಳಕೆದಾರ, ನಿಮಗೆ ಸಂತೋಷವಾಗುತ್ತದೆಯೋ ಅಲ್ಲಿಯೇ ಇರಿ. ಇತರರು, ನೀವು ಧೈರ್ಯಶಾಲಿಯಾಗಿ ಮಾಡಲು ಏನು ಮುಂದಾಗಿದ್ದೀರಿ ಅದನ್ನೇ ಮುಂದುವರಿಸಿ. ನಿಮ್ಮ ನಿರ್ಧಾರ ಖುಷಿ ಕೊಟ್ಟರೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ