Headlines

Bollywood Accidents: ಸಾವಿನ ದವಡೆಯಿಂದ ಪವಾಡಸದೃಶವಾಗಿ ಪಾರಾದ ಬಾಲಿವುಡ್ ತಾರೆಯರು ಇವರೇ ನೋಡಿ! | Celebrities List Who Survived Life Threatening Accidents In Bollywood Actors

ಸಾವಿನ ದವಡೆಯಿಂದ ಪವಾಡಸದೃಶವಾಗಿ ಪಾರಾದ ಬಾಲಿವುಡ್ ತಾರೆಯರು!

ಸಿನಿಮಾ ತಾರೆಯರ ಬದುಕು ಎಂದರೆ ಕೇವಲ ಗ್ಲಾಮರ್, ಹಣ ಮತ್ತು ಪ್ರಚಾರ ಎಂದು ನಾವು ಅಂದುಕೊಳ್ಳುತ್ತೇವೆ. ಬೆಳ್ಳಿತೆರೆಯ ಮೇಲೆ ನೂರು ಜನ ವಿಲನ್‌ಗಳನ್ನು ಹೊಡೆದುರುಳಿಸುವ ಹೀರೋಗಳು, ನಿಜಜೀವನದಲ್ಲಿ ಕೆಲವೊಮ್ಮೆ ವಿಧಿಯಾಟದ ಮುಂದೆ ಮಂಕಾಗುತ್ತಾರೆ. ಹೌದು, ಬಾಲಿವುಡ್‌ನ ದಿಗ್ಗಜ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಂದ ಹಿಡಿದು ಇತ್ತೀಚಿನ ನಟಿ ಮೌನಿ ರಾಯ್ ವರೆಗೆ, ಅನೇಕ ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಿ ಪ್ರಾಣಾಂತಿಕ ಅಪಘಾತಗಳನ್ನು ಎದುರಿಸಿ, ಸಾವಿನ ಅಂಚಿನಿಂದ ಮರಳಿ ಬಂದಿದ್ದಾರೆ. ಅಂತಹ ಕೆಲವು ಮೈನವಿರೇಳಿಸುವ ಘಟನೆಗಳ ಬಗ್ಗೆ ಇಲ್ಲಿವೆ ನೋಡಿ.

1. ಅಮಿತಾಭ್ ಬಚ್ಚನ್: ಕೂಲಿ ಸೆಟ್‌ನಲ್ಲಿ ‘ಮರುಜನ್ಮ’

1982 ರಲ್ಲಿ ‘ಕೂಲಿ’ ಚಿತ್ರದ ಚಿತ್ರೀಕರಣದ ವೇಳೆ ನಡೆದ ಆ ದುರ್ಘಟನೆ ಇಂದಿಗೂ ಬಾಲಿವುಡ್‌ನ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ನಟ ಪುನೀತ್ ಇಸ್ಸಾರ್ ಅವರೊಂದಿಗಿನ ಸಾಹಸ ದೃಶ್ಯವೊಂದರಲ್ಲಿ ಅಮಿತಾಭ್ ಅವರು ಜಿಗಿಯುವಾಗ ಆದ ಸಣ್ಣ ಎಡವಟ್ಟು, ಅವರ ಪ್ರಾಣಕ್ಕೆ ಕುತ್ತು ತಂದಿತ್ತು. ಅವರ ಕರುಳಿಗೆ ಬಲವಾದ ಪೆಟ್ಟು ಬಿದ್ದು ಆಂತರಿಕ ರಕ್ತಸ್ರಾವವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾದ ಬಿಗ್ ಬಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಇಡೀ ಭಾರತವೇ ಉಸಿರು ಬಿಗಿಹಿಡಿದು ಕಾಯುತ್ತಿತ್ತು. ಅಭಿಮಾನಿಗಳು ಬರಿಗಾಲಲ್ಲಿ ದೇವಸ್ಥಾನಗಳಿಗೆ ನಡೆದು, ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಅಂತಿಮವಾಗಿ ಸಾವು ಗೆದ್ದು ಬಂದ ಅಮಿತಾಭ್, ಈ ಘಟನೆಯನ್ನು ತಮ್ಮ ‘ಮರುಜನ್ಮ’ ಎಂದೇ ಬಣ್ಣಿಸುತ್ತಾರೆ. ಇದು ಅವರ ಬದುಕಿನ ದೃಷ್ಟಿಕೋನವನ್ನೇ ಬದಲಿಸಿತು.

Source link

Leave a Reply

Your email address will not be published. Required fields are marked *