Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ! | Brahmagantu Roopa Came To Know About Disha And Deepas Truth Suc

Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ! | Brahmagantu Roopa Came To Know About Disha And Deepas Truth Suc


17

ಭಾರಿ ಟ್ವಿಸ್ಟ್​

Image Credit : Instagram

ಭಾರಿ ಟ್ವಿಸ್ಟ್​

ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ದೀಪಾ ದಿಶಾ ಆಗಿ ಬದಲಾಗಿದ್ದೇನೋ ನಿಜ. ಆದರೆ ಆಕೆಯ ರೂಪ ಒಂದು ಬದಲಾಗಿದ್ದು ಬಿಟ್ಟರೆ ಆಕೆಯ ಹಾವ ಭಾವ, ಆಕೆಯ ಸ್ಟೈಲ್​ , ಮಾತನಾಡುವ ರೀತಿ ಯಾವುದೂ ಚೇಂಜ್​ ಆಗಿಲ್ಲ. ಹಾಗಿದ್ದರೂ ಯಾರೊಬ್ಬರಿಗೂ ಅವಳ ಮೇಲೆ ಡೌಟ್​ ಬರುವುದಿಲ್ಲ!

27

ಸೀರಿಯಲ್​ನಲ್ಲಿ ಸಾಧ್ಯ

Image Credit : Instagram

ಸೀರಿಯಲ್​ನಲ್ಲಿ ಸಾಧ್ಯ

ಪೆದ್ದು ಪೆದ್ದಾಗಿರೋ ದೀಪಾ ಹೈ ಫೈ ಇಂಗ್ಲಿಷ್​ ಅನ್ನು ಕೆಲವೇ ದಿನಗಳಲ್ಲಿ ಕಲಿತು, ಕೆಲವೇ ದಿನಗಳಲ್ಲಿ ಮಾಡೆಲ್​ ರೀತಿ ವರ್ತಿಸಿರೋದು ಕೂಡ ಆಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​ ಆಗಿತ್ತು. ಆದರೆ ಸೀರಿಯಲ್​ನಲ್ಲಿ ಎಲ್ಲವೂ ಸಾಧ್ಯ ಎಂದು ಸುಮ್ಮನಾಗಿದ್ದರು.

37

ದೀಪಾಳ ಗುಟ್ಟು ಗುಟ್ಟಾಗಿಯೇ ಇದೆ!

Image Credit : Instagram

ದೀಪಾಳ ಗುಟ್ಟು ಗುಟ್ಟಾಗಿಯೇ ಇದೆ!

ದೀಪಾ ಹೈಫೈ ಇಂಗ್ಲಿಷ್​ನಲ್ಲಿ ಮಾತನಾಡಲು ಸಾಧ್ಯವಿಲ್ಲದ ಕಾರಣ ಯಾರೊಬ್ಬರೂ ಅವಳೇ ದೀಪಾ ಎಂದು ಗುರುತಿಸುವುದು ಕಷ್ಟವೇ ಆಗಿರಬಹುದು. ಆದರೆ ಅದೆಷ್ಟೋ ಸಂದರ್ಭಗಳಲ್ಲಿ ದಿಶಾ ಆಗಿದ್ದವಳು ಎಡವಟ್ಟು ಮಾಡಿಕೊಂಡಾಗಲೂ ಆಕೆನೇ ದೀಪಾ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ.

47

ಯಾರಿಗೂ ಡೌಟ್ ಬಂದಿಲ್ಲ!

Image Credit : Asianet News

ಯಾರಿಗೂ ಡೌಟ್ ಬಂದಿಲ್ಲ!

ಅತ್ಯಂತ ಬುದ್ಧಿವಂತ ಎನ್ನಿಸಿರುವ ಸೌಂದರ್ಯನಿಗಾಗಲೀ, ಖುದ್ದು ಗಂಡ ಚಿರುಗೆ ಆಗಲಿ ಯಾರಿಗೂ ಇವಳು ದೀಪಾ ಅನ್ನುವ ಸಂದೇಹವೇ ಬರದೇ ಇರುವುದು ಮಾತ್ರ ಜಗತ್ತಿನ 8ನೇ ಅದ್ಭುತ ಎಂದು ಸೋಷಿಯಲ್​ ಮೀಡಿಯಾದಲ್ಲಿ ತಮಾಷೆ ಮಾಡುತ್ತಲೇ ಸೀರಿಯಲ್​ ಎಂಜಾಯ್​ ಮಾಡುತ್ತಿದ್ದಾರೆ.

57

ಗೊತ್ತಾಗೋಯ್ತು ಸತ್ಯ

Image Credit : Asianet News

ಗೊತ್ತಾಗೋಯ್ತು ಸತ್ಯ

ಆದರೆ ಇದೀಗ ರೂಪಾಗೆ ದಿಶಾ ಅಸಲಿಯತ್ತು ಗೊತ್ತಾಗಿಬಿಟ್ಟಿದೆ. ಅರಿಶಿಣದ ರೆಮಿಡಿ ಹೇಳಿದ್ದ ದಿಶಾ ಬಗ್ಗೆ ಡೌಟ್​ ಹುಟ್ಟಿ ಆಕೆಯ ಬ್ಯಾಗ್​ ಕೂಡ ಚೆಕ್​ ಮಾಡಿದ್ದಾಳೆ ದಿಶಾ. ಅಲ್ಲಿ ಕನ್ನಡಕದ ಖಾಲಿ ಡಬ್ಬ, ಹಲ್ಲಿನ ಕ್ಲಿಪ್​ ಖಾಲಿ ಬಾಕ್ಸ್​ ಸಿಕ್ಕಿದೆ. ಆದರೆ ಅವಳೇ ದೀಪಾ ಎನ್ನುವ ಸಂದೇಹ ಬರಲಿಲ್ಲ.

67

ಅಸಲಿಯತ್ತು ಬಯಲು

Image Credit : Asianet News

ಅಸಲಿಯತ್ತು ಬಯಲು

ಬಳಿಕ ಅವಳಿಗೆ ಡೌಟ್​ ಬರಲು ಶುರುವಾಗಿದೆ. ತನ್ನನ್ನು ದಿಶಾ ಅಕ್ಕ ಎಂದ ಪರಿ, ತನ್ನನ್ನು ಹಲವಾರು ಸಮಯ ಸೇವ್​ ಮಾಡಿರುವುದನ್ನೆಲ್ಲಾ ನೆನಪಿಸಿಕೊಂಡ ಅವಳಿಗೆ ದಿಶಾನೇ ದೀಪಾ ಎನ್ನುವ ಡೌಟೇ ಇಲ್ಲ. ಅದಕ್ಕಾಗಿ ಕಂಪ್ಯೂಟರ್​ನಲ್ಲಿ ಎಐ ಮೂಲಕ ದೀಪಾಳ ಮಾಡರ್ನ್​ ಲುಕ್​ ಮಾಡಿದ್ದಾಳೆ. ಆಗ ಅವಳೇ ದಿಶಾ ಎನ್ನುವುದು ಗೊತ್ತಾಗಿದೆ.

77

ತಲೆ ಇರುವವಳು ಒಬ್ಬಳೇ

Image Credit : Asianet News

ತಲೆ ಇರುವವಳು ಒಬ್ಬಳೇ

ಇದೀಗ ತನ್ನ ಆಟ ಶುರುವಿಟ್ಟುಕೊಂಡಿದ್ದಾಳೆ ರೂಪಾ. ದೀಪಾಳಿಗೆ ಬುದ್ಧಿ ಕಲಿಸುತ್ತೇನೆ ಎಂದಿದ್ದಾರೆ. ಇಷ್ಟೆಲ್ಲಾ ಹೆಲ್ಪ್​ ಮಾಡಿರೋ ತಂಗಿ ವಿರುದ್ಧನೇ ಸೇಡು ತೀರಿಸಿಕೊಳ್ಳುವ ರೂಪಾ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದರೂ, ಸುಲಭದಲ್ಲಿ ದೀಪಾ ಮತ್ತು ದಿಶಾ ಒಂದೇ ಎಂದು ಅರ್ಥ ಮಾಡಿಕೊಂಡದ್ದಕ್ಕೆ ಇವಳೊಬ್ಬಳೇ ಸೀರಿಯಲ್​​ನಲ್ಲಿ ತಲೆ ಇರುವವಳು ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *