ದೇವನಹಳ್ಳಿ, ಡಿಸೆಂಬರ್ 04: ಇಂದು ಇಡೀ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನಲೆ ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ 3 ದಿನದಲ್ಲಿ ಇಂಡಿಗೋ ವಿಮಾನಗಳು 205 ಸಂಚಾರ ರದ್ದಾಗಿದೆ. ವಿಮಾನಗಳು ನಿಂತಲ್ಲೇ ನಿಂತಿದ್ರೆ, ಪ್ರಯಾಣಿಕರು ಡಿಪಾರ್ಚರ್ ಗೇಟ್ ಬಳಿ ಕೂರಲು ಜಾಗವಿಲ್ಲದೆ ದಿಕ್ಕೆಟ್ಟಿದ್ದರು. ಯಾವುದೇ ಮಾಹಿತಿ ಕೊಡುತ್ತಿಲ್ಲ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.