ಡಿಸೆಂಬರ್ 5 ರಂದು ಒಂದಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ’ (ಧುರಂಧರ)ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ (ಅಖಂಡ 2) ಸಿನಿಮಾಗಳು ಪ್ರಮುಖವಾಗಿವೆ. ಇವುಗಳ ಜೊತೆ ಬೇರೆ ಬೇರೆ ಭಾಷೆಯ ಒಂದಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಶುಕ್ರವಾರದಂದು ಈ ಶುಕ್ರವಾರ ಕೂಡ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಜೋರಾಗುತ್ತಿದೆ. ‘ಧುರಂಧರ’ ಮೂಲಕ ರಣವೀರ್ ಸಿಂಗ್ ಅವರು ಗೆಲ್ಲುವ ಭರವಸೆ ಇದೆ. ಕನ್ನಡದ ‘ಧರ್ಮಂ’ ಸಿನಿಮಾ ಕೂಡ ಡಿಸೆಂಬರ್ 5 ರಂದು ಬಿಡುಗಡೆ ಆಗುತ್ತಿದೆ.
ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿರುವ ‘ಧುರಂಧರ’ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಬಿಡುಗಡೆಗೂ ಮೊದಲೇ ಈ ಸಿನಿಮಾ ಕೆಲವು ವಿವಾದಗಳನ್ನು ಮಾಡಿಕೊಂಡಿದೆ. ಹುತಾತ್ಮ ಮೇಜರ್ ಮೋಹಿತ್ ಶರ್ಮಾ ಅವರ ಮೇಲೆ ಈ ಸಿನಿಮಾ ಸಿದ್ಧವಾಗಿದೆ. ಇಲ್ಲ ಅವರ ಕುಟುಂಬದವರು ತಕರಾರು ತೆಗೆದಿದ್ದಾರೆ. ವಿವಾದ ಆದ ಬಳಿಕ ‘ಈ ಸಿನಿಮಾಗೂ ಮೋಹಿತ್ ಶರ್ಮಾ ಅವರ ಜೀವನಕ್ಕೂ ಸಂಬಂಧವಿಲ್ಲ’ ಎಂದು ಚಿತ್ರತಂಡ ಹೇಳಿದೆ. ನೋಡಲು ಕುತೂಹಲವಿದೆ.
‘ಅಖಂಡ 2’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅವರ ಸಿನಿಮಾಗಳ ಶೈಲಿಯೇ ಬೇರೆ. ಅವರ ಸಿನಿಮಾಗಳಲ್ಲಿ ಲಾಜಿಕ್ ಅಂದರೆ ಏನು ಅಂತ ಹುಡುಕಲು ಸಾಧ್ಯವೇ ಇಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಇಷ್ಟಪಡುತ್ತಾರೆ. ‘ಅಖಂಡ 2’ ಸಿನಿಮಾ ನೋಡಲು ಬಾಲಯ್ಯ ಅಭಿಮಾನಿಗಳು ಕಾತರರಾಗಿದ್ದಾರೆ.
ಕನ್ನಡದ ‘ಧರ್ಮಂ’ ಸಿನಿಮಾಗೆ ನಾಗಮುಖ ಅವರು ನಿರ್ದೇಶನ ಮಾಡಿದ್ದಾರೆ. ಈ ಕಥಾಹಂದರ ಏನು ಎಂದು ಟ್ರೇಲರ್ನಲ್ಲಿ ತಿಳಿಸಲಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ ನಿರ್ದೇಶಕ ನಾಗಮುಖ ಅವರು ಈ ಸಿನಿಮಾ ಮಾಡಿದ್ದಾರೆ. ಸಾಯಿ ಶಶಿಕುಮಾರ್, ವಿರಾನಿಕಾ ಶೆಟ್ಟಿ, ಅಶೋಕ್ ಹೆಗ್ಡೆ, ಭೀಷ್ಮ ರಾಮಯ್ಯ, ಎಸ್.ಕೆ. ರಾಮಕೃಷ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಅಖಂಡ 2’ ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…
ಮಮ್ಮೂಟ್ಟಿ ಅಭಿನಯದ ‘ಕಲಂ ಕಾವಲ್’ ಸಿನಿಮಾ ಸಹ ಡಿಸೆಂಬರ್ 5 ರಂದು ರಿಲೀಸ್ ಆಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿ ಇದೆ. ಜಿತಿನ್ ಕೆ. ಜೋಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮಮ್ಮೂಟ್ಟಿ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಈ ಎಲ್ಲ ಸಿನಿಮಾಗಳ ಜೊತೆ ಕನ್ನಡದಲ್ಲಿ ‘ಚಿತ್ರಲಹರಿ’, ‘ಕೆಂಪು ಹಳದಿ ಹಸಿರು’ ಸಿನಿಮಾಗಳು ಕೂಡ ತೆರೆಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.