Headlines

ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?

ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?


ಚಿಕ್ಕಮಗಳೂರು, ಡಿಸೆಂಬರ್ 04: ತನ್ನಿಂದ ದೂರವಾದ ಸಿಟ್ಟಿಗೆ ಅತ್ತೆ ಮಗಳನ್ನೇ ಹತ್ಯೆ (ಕೊಲೆ) ಮಾಡಿ ಪರಾರಿ ಹಂತಕನನ್ನು ಎರಡು ದಿನದ ಬಳಿಕ ಬಂಧಿಸಿ (ಬಂಧನ) ಜೈಲಿಗಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ವಾಟೇಖಾನ್ ಗ್ರಾಮದ ನಿವಾಸಿ ಜನಾರ್ಧನ್ (38) ಬಂಧಿತ ಆರೋಪಿ. ಜನಾರ್ಧನ್ ಗೆ ಹೆಂಡತಿ ಇದ್ದರೂ ಗಂಡನನ್ನ ಬಿಟ್ಟಿದ್ದ ಅತ್ತೆ ಮಗಳು ಸಂಧ್ಯಾ ಮೇಲೆ ಪ್ರೀತಿ ಇತ್ತು. ತನ್ನೊಂದಿಗೆ ಬಂದವಳು ಮನೆಗೆ ತೆರಳಿದ್ದಕ್ಕೆ ಆಕ್ರೋಶಗೊಂಡು ಕೊಲೆಗೈದಿದ್ದ.

ನಡೆದದ್ದೇನು?

ಡಿಸೆಂಬರ್ 1 ರಂದು ಬೆಳಿಗ್ಗೆ ಅರೇನೂರು ಗ್ರಾಮದ ಸಂಧ್ಯಾ ಎಂಬ ಮಹಿಳೆಯನ್ನ ಮನೆಯ ಹಿಂಭಾಗದಲ್ಲಿ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಹಂತಕ ಎಸ್ಕೇಪ್ ಆಗಿದ್ದ. ಎರಡು ದಿನಗಳ ನಂತರ ಸಂಧ್ಯಾಳನ್ನ ಬರ್ಬರವಾಗಿ ಹತ್ಯೆಗೈದ ಹಂತಕನನ್ನ ಪೊಲೀಸರು ಬಂಧಿಸಿದ್ದಾರೆ. ಅತ್ತೆ ಮಗನಿಂದಲೇ ಸಂಧ್ಯಾ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು, ಅನೈತಿಕ ಸಂಬಂಧ.

ಇದನ್ನೂ ಓದಿ: ಮೂವರು ಮಕ್ಕಳ ತಾಯಿಯ ಡೆಡ್ಲಿ ಮರ್ಡರ್ : ಪ್ರಾಣಕ್ಕೆ ಸಂಚು ತಂತಾ ಲವ್ವಿಡವ್ವಿ?

ಜನಾರ್ಧನ್ ಸಂಧ್ಯಾಳ ಅತ್ತೆ ಮಗ. ಸಂಧ್ಯಾಳ ಹತ್ಯೆ ಮಾಡಿ ವಾಟೆಖಾನ್ ಕಾಡು ಸೇರಿದ್ದ ಆತನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಸಂಧ್ಯಾ ಹತ್ಯೆಯಾದ ದಿನವೇ ಆಲ್ದೂರು ಪೊಲೀಸರಿಗೆ ಜನಾರ್ಧನ್ ಮೇಲೆ ಅನುಮಾನ ಮೂಡಿತ್ತು. ಆ ಅನುಮಾನಕ್ಕೆ ಕಾರಣವಾಗಿದ್ದು ಸಂಧ್ಯಾ ಮತ್ತು ಜನಾರ್ಧನ್ ನಡುವಿನ ಲವ್ ಸ್ಟೋರಿ. ಹತ್ಯೆಯಾದ ಹಿಂದಿನ ದಿನ ವಾಟೆಖಾನ್ ಗ್ರಾಮದಿಂದ ಅರೇನೂರು ಗ್ರಾಮಕ್ಕೆ ವಾಪಸ್ ಬಂದಿದ್ದ ಸಂಧ್ಯಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಒಂದು ಕಡೆ ಹೆಂಡತಿ ಕಾಟ, ಮತ್ತೊಂದು ಕಡೆ ಅತ್ತೆ ಮಗಳ ಲವ್ ಟಾರ್ಚರ್.

ಕಳೆದ ಒಂದು ತಿಂಗಳ ಹಿಂದೆ ಸಂಧ್ಯಾ ಅರೇನೂರು ಗ್ರಾಮದ ತನ್ನ ತಾಯಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬದವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು. ಸಂಧ್ಯಾಳಿಗಾಗಿ ಶೋಧ ನಡೆಸಿದ ಪೊಲೀಸರು, ಸಂಧ್ಯಾ ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದ ತನ್ನ ಮನೆಯಲ್ಲಿ ಇರುವುದು ಗೊತ್ತಾಗಿತ್ತು. ಆದರೆ ನವೆಂಬರ್ 30ರ ಸಂಜೆ ಸಂಧ್ಯಾ ಅರೇನೂರು ಗ್ರಾಮದ ಮನೆಗೆ ಬಂದಿದ್ದು, ಬೆಳಗ್ಗೆ ಮನೆಯ ಹಿಂಭಾಗದಲ್ಲಿ ಹೆಣವಾಯಿತು.

ತನ್ನ ಅತ್ತೆ ಮಗ ಜನಾರ್ಧನ್ ಜೊತೆ ಸಂಧ್ಯಾಳಿಗೆ ಬಾಲ್ಯದಿಂದಲೇ ಸಲಿಗೆ ಬೆಳೆದಿತ್ತು. ಇದೆ ಸಲುಗೆ ಪ್ರೇಮವಾಗಿತ್ತು. ಆದರೆ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿದ ಹಿನ್ನೆಲೆ ಸಂಧ್ಯಾಳನ್ನ ಬಾಳೆಹೊನ್ನೂರು ಸಮೀಪದ ಶಿರಗೋಳ ಗ್ರಾಮದ ರವಿ ಜೊತೆ ಮದುವೆ ಮಾಡಲಾಯಿತು. ಜನಾರ್ಧನ್ ಕೂಡ ಮೂಡಿಗೆರೆ ಮೂಲದ ಯುವತಿ ಜೊತೆ ವಿವಾಹವಾಗಿದ್ದರು. ಆದರೆ ಸಂಧ್ಯಾ ಮತ್ತು ಜನಾರ್ಧನ್ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು. ಇದೆ ವಿಚಾರಕ್ಕೆ ಸಂಧ್ಯಾ ಮತ್ತು ಪತಿ ರವಿ ಜೊತೆ ಗಲಾಟೆಯಾಗಿ ಸಂಧ್ಯಾ ಮೂರು ವರ್ಷದ ಹಿಂದೆ ತನ್ನ ಮೂವರು ಮಕ್ಕಳ ಜೊತೆ ಅರೆನೂರು ಗ್ರಾಮದ ತಾಯಿ ಮನೆ ಸೇರಿದ್ದಳು.

ಇದನ್ನೂ ಓದಿ: ಮಹಿಳೆ ಜತೆ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು

ಜನಾರ್ಧನ್ ಮತ್ತು ಸಂಧ್ಯಾಳ ಆತ್ಮೀಯತೆ ಇನ್ನೂ ಹೆಚ್ಚಾಗಿತ್ತು. ಇದೇ ವಿಷಯಕ್ಕೆ ಜನಾರ್ಧನ್ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋದವರು ಮನೆ ಸೇರಿದ್ದಳು. ಜನಾರ್ಧನ್ ಪತ್ನಿ ತವರುಮನೆ ಸೇರುತ್ತಿದ್ದಂತೆ ಸಂಧ್ಯಾ ಮದುವೆಯಾಗುವಂತೆ ಪೀಡಿಸಿದ್ದಾಳೆ. ಯಾರಿಗೂ ಹೇಳದ ವಾಟೆಖಾನ್ ಗ್ರಾಮದಲ್ಲಿರುವ ಜನಾರ್ಧನ ಮನೆಗೆ ಹೋಗಿ ಅಲ್ಲೇ ವಾಸವಾಗಿದ್ದಳು. ಈ ವಿಷಯ ಪೊಲೀಸ್ ಠಾಣೆಯವರೆಗೂ ಹೋದ ನಂತರ ಮನೆಗೆ ಬಂದಿದ್ದಳು. ಮನೆಯವರಿಗೆ ಹೇಳಿ ತನ್ನನ್ನು ಕರೆದುಕೊಂಡು ಹೋಗುವಂತೆ ಡಿಸೆಂಬರ್ 1 ರಂದು ಬೆಳಗ್ಗೆ ಜನಾರ್ಧನ್ ಗೆ ಫೋನ್ ಮಾಡಿದ್ದಳು. ಒಂದು ಕಡೆ ಹೆಂಡತಿ ಕಾಟ ಮತ್ತೊಂದು ಕಡೆ ಅತ್ತೆ ಮಗಳ ಕಾಟಕ್ಕೆ ಆಕ್ರೋಶಗೊಂಡ ಜನಾರ್ಧನ್, ಸಂಧ್ಯಾಳ ಕುತ್ತಿಗೆಯನ್ನ ತಾನು ತಂದಿದ್ದ ಚಾಕುವಿನಿಂದ ಕೊಯ್ದು ತನ್ನ ವಾಟೆಖಾನ್ ಗ್ರಾಮದ ಮನೆಯ ಹಿಂಭಾಗದ ಕಾಡು ಸೇರಿದ್ದ.

ಸದ್ಯ ತನ್ನ ಪ್ರೇಯಸಿ ಅತ್ತೆ ಮಗಳನ್ನೇ ಕೊಂದ ಜನಾರ್ಧನ್ ಜೈಲು ಸೇರಿದ್ದಾನೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ನಾಲ್ಕು ಕುಟುಂಬಗಳು ಕಣ್ಣೀರು ಹಾಕಿದರೆ, ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ತಮ್ಮನ್ನ ಸಾಕಿ ಬೆಳೆಸಬೇಕಿದ್ದ ಅಪ್ಪ ಜೈಲು ಸೇರಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *