Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 5ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 5ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 5ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಹೊಸ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವ ಯೋಗ ಇದೆ. ಅಥವಾ ಇನ್ನು ಮುಂದೆ ಹೋಗಬೇಕು ಎಂದುಕೊಂಡಂಥ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಗೃಹಿಣಿಯರ ಮನೆ ಬಜೆಟ್ ವಿಚಾರದಲ್ಲಿನ ನಿರ್ಧಾರಗಳು ಕುಟುಂಬಸ್ಥರ ಮೆಚ್ಚುಗೆಯನ್ನು ಪಡೆಯಲಿವೆ. ಇಷ್ಟು ಸಮಯ ಕಾಡ ದ್ವಂದ್ವ- ಗೊಂದಲಗಳು ನಿವಾರಣೆ ಆಗಲಿವೆ. ಅದರಲ್ಲೂ ಮದುವೆ, ಪ್ರೀತಿ- ಪ್ರೇಮ, ಸಂಬಂಧಗಳ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ. ಬೇಳೆ- ಕಾಳುಗಳ ಹೋಲ್ ಸೇಲ್ ವ್ಯಾಪಾರ ಮಾಡುತ್ತಾ ಇರುವವರು ವ್ಯವಹಾರ ವಿಸ್ತರಣೆಗೆ ಯೋಜನೆ ರೂಪಿಸುತ್ತೀರಿ. ಅದಕ್ಕೆ ಬೇಕಾದ ಹಣದ ಹೊಂದಾಣಿಕೆ ಮಾಡಲು ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಪ್ರಯತ್ನ ಮಾಡಿದೆ. ಕೃಷಿಕರು ರಾಸುಗಳನ್ನು ಖರೀದಿಸಿದ್ದಾರೆ. ಇದರ ಜೊತೆಗೆ ಕೊಟ್ಟಿಗೆ ನಿರ್ಮಾಣ ಅಥವಾ ಈಗ ಇರುವಂಥದ್ದರ ನವೀಕರಣಕ್ಕೆ ಮುಂದಾಗಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಯಾವುದಾದರೂ ನಿಮ್ಮನ್ನು ಹಗುರವಾಗಿ ಕಾಣುತ್ತಿದೆ ಎಂಬ ಭಾವನೆ ಮನಸ್ಸಿನಲ್ಲಿ ಸುಳಿದಾಡಲಿದೆ. ಈ ದಿನ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಅನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಕಡೆಗೆ ಹೆಚ್ಚು ಮನಸ್ಸಿಟ್ಟು ಕೆಲಸ ಮಾಡಿ. ಪರಿಸ್ಥಿತಿ ನಿಮ್ಮ ವಿರುದ್ಧ ಆಗುತ್ತಿದೆ ಎಂಬ ವಿಶ್ವಾಸವನ್ನು ಕುಗ್ಗಿಸದಂತೆ ನೋಡಿಕೊಳ್ಳಿ. ನಿಮ್ಮ ಮಾಹಿತಿಯ ಮೂಲದ ವಿಶ್ವಾಸಾರ್ಹತೆ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಪರಿಶೀಲಿಸಿಕೊಳ್ಳಿ. ನಿಯಂತ್ರಣವನ್ನು ಮೀರಿದ ವಿಚಾರಗಳು, ಇದರಲ್ಲಿ ಯಾವುದೇ ಬದಲಾವಣೆ ನಿಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದೆನಿಸಿದ ಕೆಲಸ- ಕಾರ್ಯ, ವಿಚಾರಕ್ಕೆ ಶ್ರಮ ಹಾಕಬೇಡಿ. ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ ಎಂದೆನಿಸಿದ ಸ್ಥಳಕ್ಕೆ ಹೋಗಿ, ಸ್ವಲ್ಪ ಸಮಯ ಅಲ್ಲಿ ಕಳೆಯಿರಿ. ವಕೀಲ ವೃತ್ತಿಯಲ್ಲಿ ಇರುವವರಿಗೆ ಸಂಜೆಯ ನಂತರ ಒಳ್ಳೆ ಬೆಳವಣಿಗೆಗಳು ನಡೆಯಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನೀವು ಅಂದುಕೊಂಡಿದ್ದು, ಅಂದಾಜು ಮಾಡಿದ್ದು ಯಥಾವತ್ ನಿಜ ಆಗುವುದಕ್ಕೆ ಆರಂಭ ಆಗಲಿದೆ. ಫೈನಾನ್ಷಿಯಲ್ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೊಸ ಕ್ಲೈಂಟ್ ಗಳು ದೊರೆಯಲಿದ್ದಾರೆ. ವ್ಯವಹಾರ- ವ್ಯಾಪಾರದಲ್ಲಿ ತೊಡಗಿರುವವರಿಗೆ ಸಂಗಾತಿಯ ನೆರವು ಸಿಗಲಿದೆ. ಸಂಬಂಧಗಳಲ್ಲಿ ಅಭಿಪ್ರಾಯ ಭೇದ- ಮನಸ್ತಾಪ ಕಾಣಿಸಿಕೊಂಡಿದ್ದಲ್ಲಿ ಅದರ ನಿವಾರಣೆ ಮಾಡಿಕೊಳ್ಳಲಾಗಿದೆ. ಪ್ರೀತಿಯಲ್ಲಿ ಇರುವವರು ಮನೆಯಲ್ಲಿ ಮದುವೆ ಪ್ರಸ್ತಾವವನ್ನು ಮಾಡಿದ್ದಾರೆ. ವಿದೇಶದಲ್ಲಿಯೇ ನೆಲೆಗೊಳ್ಳಬೇಕು ಎಂಬ ಆಲೋಚನೆ ಇರುವವರಿಗೆ ಅದಕ್ಕೆ ಪೂರಕವಾದ ಅವಕಾಶವೊಂದು ಗೋಚರಿಸಲಿದೆ. ಬೆನ್ನು ನೋವಿನ ಸಮಸ್ಯೆ ಅನುಭವಿಸುತ್ತಿದ್ದೀರಿ ಎಂದು ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಹಿರಿಯರ ಸಲಹೆಯನ್ನು ಅನುಸರಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಮುಂದೆ ಏನು ಮಾಡಬೇಕು ಎಂಬುದು ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗಿದೆ. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಅನಿಶ್ಚಿತತೆ ಕಾಡಲು ಶುರುವಾಗುತ್ತದೆ. ಮೊದಲಿನ ಉತ್ಸಾಹ ಯಾರಿಗೂ ಇರುವುದಿಲ್ಲ. ಕೆಲವರನ್ನು ಭೇಟಿ ಮಾಡುವುದನ್ನು ಅಥವಾ ಫೋನ್ ನಲ್ಲಿ ಮಾತನಾಡುವುದನ್ನು ಬೇಕಂತಲೇ ನೀವಾಗಿಯೇ ತಪ್ಪಿಸಿಕೊಳ್ಳುತ್ತೀರಿ. ಈ ದಿನ ಎಷ್ಟು ಸಾಧ್ಯವೋ ಅಷ್ಟು ಉತ್ಸಾಹ ಹಾಗೂ ಆಸಕ್ತಿ ಉಳಿಸಿಕೊಳ್ಳುವುದು ತುಂಬ ಮುಖ್ಯ ಎನಿಸುತ್ತದೆ. ಸೆಕೆಂಡ್ ಹ್ಯಾಂಡ್ ಆಟೋ ಅಥವಾ ಕಾರು ಖರೀದಿ-ಮಾರಾಟದಲ್ಲಿ ತೊಡಗಿರುವವರು ಕಾಗದ- ಪತ್ರ, ದಾಖಲಾತಿಗಳ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಸ್ನೇಹಿತರ ಮಾತಿಗೆ ಕಟ್ಟುಬಿದ್ದೋ ಅಥವಾ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಕಾರಣಕ್ಕೋ ಹೀಗೆ ಮಾಡಿದರೆ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ಬಂದೊದಗುತ್ತದೆ, ಜಾಗ್ರತೆ ವಹಿಸುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈ ದಿನ ನಿಮ್ಮ ಕಮ್ಯುನಿಕೇಷನ್ ಬಹಳ ಪರಿಣಾಮಕಾರಿಯಾಗಿರಲಿದೆ. ಅದೆಂಥ ಕಷ್ಟ ಎನಿಸುವ ಕ್ಲೈಂಟ್ ಆದರೂ ಅಥವಾ ನಿಮ್ಮ ಉದ್ಯೋಗ, ವ್ಯಾಪಾರ- ವ್ಯವಹಾರ ಯಾವುದರಲ್ಲೇ ಕಷ್ಟವಾಗಲಿ ಬೇಡಿಕೆಯನ್ನು ನಿಭಾಯಿಸುವುದು ಎನಿಸಿದವರನ್ನು ನೀವು ಚೆನ್ನಾಗಿ ಸಂಭಾಳಿಸಲಿದ್ದೀರಿ. ಯುವತಿಯರು ಫ್ಯಾಷನ್ ದಿರಿಸುಗಳನ್ನು ಖರೀದಿಸುವ ಯೋಗ ಇದೆ. ಪತ್ರಿಕೆಗಳಲ್ಲಿ ಗಾಸಿಪ್ ಕಾಲಂಗಳನ್ನು ನಿರ್ವಹಿಸುವವರಿಗೆ ದೊಡ್ಡ ಮಾಹಿತಿ ಸಿಗಲಿದೆ, ಎಟ್ ಬೆರಗಿನಿಂದ ನೋಡುವಂತೆ ಆಗಲಿದೆ. ವೃತ್ತಿನಿರತರು ನೀಡಿರುವ ಅಪಾಯಿಂಟ್ ಮೆಂಟ್ ಸಮಯಕ್ಕೆ ಆ ಸ್ಥಳದಲ್ಲಿ ಇರುವುದಕ್ಕೆ ಆದ್ಯತೆ ನೀಡಿ. ನಿಮ್ಮ ಕಷ್ಟದ ಕಾಲದಲ್ಲಿ ನೆರವಿಗೆ ನಿಂತಂಥ ವ್ಯಕ್ತಿಗಳಿಗೆ ಈಗ ಸಹಾಯ ಮಾಡದಿರುವುದು ಗಮನಕ್ಕೆ ಬರಲಿದೆ. ನಿಮ್ಮಿಂದ ಸಾಧ್ಯವಾದ ಗರಿಷ್ಠ ಮಟ್ಟದ ಸಹಾಯವನ್ನು ನಿಮಗೆ ಮಾಡಿ ಋಣ ಸಂದಾಯ ಸಮಾಧಾನವನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕಾರಣವೇ ಇಲ್ಲದೆ ಯಾರಾದರೂ ಹೊಗಳುತ್ತಾ ಇದ್ದಾರೆ ಅಂತಾ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಗೊತ್ತಿರುವ ಕೆಲಸವನ್ನು ನೀಡಲು ಹೋಗಬೇಡಿ. ಸಂಬಂಧಿಗಳ ಮನೆಯಲ್ಲಿನ ಸಮಾರಂಭಗಳಿಗೆ ತೆರಳುವವರು ಅಲ್ಲಿ ಹಣಕಾಸಿನ ಪರಿಸ್ಥಿತಿ ಬಗ್ಗೆ ಚರ್ಚೆ ಬಾರದಂತೆ ನೋಡಿಕೊಳ್ಳಿ. ಅಥವಾ ಹಾಗೊಂದು ವೇಳೆ ಮಾತನಾಡುತ್ತಿದ್ದಾರೆ ಅಂತಾ ನಿಮ್ಮ ಅಭಿಪ್ರಾಯ ಹೇಳುವುದಕ್ಕೆ ಹೋಗಬೇಡಿ. ಮನೆಗೆ ಮಂಚ, ಹಾಸಿಗೆ, ದಿಂಬು, ಹೊದಿಕೆ ಇಂಥವುಗಳನ್ನು ಖರೀದಿಸುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಅದರಲ್ಲೂ ತಂದೆ- ತಾಯಿಗೆ ಬೇಕಾದಂಥ ಅನುಕೂಲಗಳನ್ನು ಮಾಡಿಕೊಡಲು ಆದ್ಯತೆ ನೀಡುತ್ತೀರಿ. ಸೋದರ ಸಂಬಂಧಿಗಳ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದ್ದು, ಕಿರು ಪ್ರವಾಸವನ್ನಾದರೂ ನಡೆಸುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ವೃತ್ತಿಜೀವನ ಹೇಗಿರಲಿದೆ ತಿಳಿಯಿರಿ

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಏಕಾಏಕಿ ನಿಮ್ಮ ಆಲೋಚನೆಯಲ್ಲಿ ದೊಡ್ಡ ಬದಲಾವಣೆ ಕಾಣಿಸುತ್ತದೆ. ಈಗ ಬರುತ್ತಿರುವ ಆದಾಯದ ಗಣನೀಯವಾಗಿ ಜಾಸ್ತಿ ಮಾಡಿಕೊಳ್ಳಬೇಕು ಯೋಜನೆ ರೂಪಿಸುತ್ತೀರಿ. ಇಷ್ಟು ಸಮಯ ಕಂಫರ್ಟ್ ಝೋನ್ ನಲ್ಲಿ ಇದ್ದೆ ಎಂದೆನಿಸಲು ಶುರು ಆಗಲಿದೆ. ಮಾಡಿದ ಕೆಲಸಕ್ಕೆ ಇಂತಿಷ್ಟು ಹಣ ಎಂದು ಬಾಯಿ ಬಿಟ್ಟು ಕೇಳಲು ಕಾಡುತ್ತಿದ್ದ ಸಂಕೋಚದಿಂದ ಹೊರಗೆ ಬರುತ್ತೀರಿ. ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಆಹಾರ ಪಥ್ಯದಲ್ಲಿ ಕಠಿಣ ಮಾರ್ಗಗಳನ್ನು ಅನುಸರಿಸಲು ಪ್ರಾರಂಭಿಸುತ್ತೀರಿ. ದಿನಗೂಲಿ ನೌಕರರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಯಾವುದಕ್ಕೂ ತುಂಬ ಒಳ್ಳೆ ಹುದ್ದೆಯಲ್ಲಿ ಇರುವವರು ನೆರವಾಗಲಿದ್ದಾರೆ. ನಿಮಗೆ ಎಷ್ಟು ಆಪ್ತರಾದರೂ ಮಾತನಾಡುವಾಗ ಬಳಸುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಬೇಕು.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪುಟ್ಟ ಪ್ರಾಜೆಕ್ಟ್ ಗಳು ನಿಮ್ಮ ಪಾಲಿಗೆ ದೊರೆಯಲಿವೆ. ಹಣದ ದೃಷ್ಟಿಯಿಂದ ನೋಡದೆ ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಆಲೋಚನೆಯನ್ನು ಮಾಡಿ, ಇದರಿಂದ ಭವಿಷ್ಯದಲ್ಲಿ ದೊಡ್ಡ ಅನುಕೂಲ ಒದಗಿ ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಕ್ಕ ಸೌಲಭ್ಯದಲ್ಲಿ ಎಷ್ಟು ಅತ್ಯುತ್ತಮವಾದುದನ್ನು ನೀಡುವುದಕ್ಕೆ ಸಾಧ್ಯವಿರುವದಕ್ಕೆ ಗಮನ ಕೊಡಿ. ಇತರರ ಕಣ್ಣಿಗೆ ನಿಮ್ಮ ನಿರ್ಧಾರಗಳು ಸ್ವಾರ್ಥದಿಂದ ಕೂಡಿವೆ ಎಂದೆನಿಸಬಹುದು. ಆದರೆ ಫಲಿತಾಂಶ ಮತ್ತು ಅದರ ಅನುಕೂಲ ಎಲ್ಲರಿಗೂ ದೊರೆಯುತ್ತದೆ ಎಂದು ಖಾತ್ರಿಪಡಿಸಿ. ಸಮಸ್ಯೆಗಳನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯದ ಗರಿಷ್ಠ ಪ್ರಮಾಣದ ಬಳಕೆಯನ್ನು ಈ ದಿನ ಮಾಡಿಕೊಳ್ಳಿ. ಹೆಚ್ಚು ಸಮಯ ಒಂದೇ ಕಡೆ ನಿಂತು ಕೆಲಸ ಮಾಡುವವರು ಅದರ ಆರೋಗ್ಯದ ಪರಿಣಾಮಗಳ ಬಗ್ಗೆ ಲಕ್ಷ್ಯವಿದೆ. ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾ ಮನೆದೇವರ ಸ್ಮರಣೆಯನ್ನು ಮಾಡಿಕೊಂಡು, ಹೊರಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಹೆಚ್ಚು ಶ್ರಮದಾಯಕ ಅಲ್ಲದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಿ, ಅವರಿಗೆ ಪೂರ್ತಿ ಮಾಡುವ ಲಕ್ಷ್ಯವನ್ನು ನೀಡುತ್ತದೆ. ಪ್ರಾಮುಖ್ಯದ ಆಧಾರದಲ್ಲಿ ವ್ಯಕ್ತಿಗಳ ಭೇಟಿ, ಖರ್ಚಿನ ಲೆಕ್ಕಾಚಾರ, ಆರೋಗ್ಯ ಪರೀಕ್ಷೆ ಹೀಗೆ ಒಂದು ಕ್ರಮವನ್ನು ಅಳವಡಿಸಿಕೊಳ್ಳಿ. ಪ್ಲಾನಿಂಗ್ ಗೆ ಹೆಚ್ಚು ಸಮಯವನ್ನು ನೀಡುವುದು ದೊಡ್ಡ ಮಟ್ಟದಲ್ಲಿ ನಿಮ್ಮ ಯಶಸ್ಸಿಗೆ ಸಹಾಯ ಮಾಡುವುದು. ನಿಮ್ಮ ಬಗ್ಗೆ ಆಡುವ ಪ್ರಶಂಸೆಯ ಮಾತನ್ನು ತಲೆಗೆ ತೆಗೆದುಕೊಳ್ಳಬೇಡಿ. ಸವಾಲು ಎನಿಸಿದ ಕಾರ್ಯಗಳನ್ನು ಒಪ್ಪಿಕೊಳ್ಳುವಾಗ ಅದನ್ನು ಪೂರೈಸುವುದಕ್ಕೆ ಇರುವಂತಹ ಸಂಪನ್ಮೂಲಗಳು ಅಳೆದು- ತೂಗಿ ನೋಡಿಕೊಳ್ಳಿ. ಆರೋಗ್ಯ ವಿಚಾರಕ್ಕೆ ಬಂದರೆ ಚಮತ್ಕಾರ ಎನಿಸುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಇನ್ನೂ ನಿಮ್ಮ ಕೈ ಸೇರದ ಹಣಕ್ಕೆ ಮೊದಲೇ ಯಾವುದೇ ಕಮಿಟ್ ಮೆಂಟ್ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *