ಬೆಂಗಳೂರು, ಡಿಸೆಂಬರ್ 5: ಬೆಂಗಳೂರು (ಬೆಂಗಳೂರು) ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳು (ಇಂಡಿಗೋ ವಿಮಾನಗಳು) ಸಂಚಾರದಲ್ಲಿ ವ್ಯತ್ಯಯವಾಗಿ ಸತತ ಮೂರನೇ ದಿನವೂ ಪ್ರಯಾಣಿಕರು ಪರದಾಡಿದ್ದಾರೆ. ಗುರುವಾರ ಒಂದೇ ದಿನ ಬರೋಬ್ಬರಿ 550 ವಿಮಾನಗಳ ಸಂಚಾರ ರದ್ದಾಗಿದೆ. ಸಿಬ್ಬಂದಿಯ ಕೊರತೆಯಿಂದಾಗಿ ಇಂಡಿಗೋ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಒಂದರಲ್ಲೇ ಒಟ್ಟು 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಕಳೆದ 3 ದಿನಗಳಿಂದ ಈ ಸಮಸ್ಯೆ ಆಗುತ್ತಿದೆ, ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.
ಚಂಡೀಗಢದಲ್ಲಿ ಕನ್ನಡಿಗರ ಪರದಾಟ
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬವಾದ ಚಂಡೀಗದ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದರು. ಬೆಂಗಳೂರಿಗೆ ಬರಲಾಗದೇ 20 ಕನ್ನಡಿಗರು ಒದ್ದಾಡುವಂತಾಯಿತು. ಗಂಟೆಗಟ್ಟಲೇ ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯಗಳು ಕಂಡುಬಂದಿವೆ.
ವಿಮಾನದೊಳಗೆ ಪ್ರಯಾಣಿಕರು ಲಾಕ್! ಆಕ್ರೋಶ
ಅನೇಕ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿಕೊಂಡ ನಂತರ ವಿಪರೀತ ವಿಳಂಬ ಮಾಡಿದ ಘಟನೆಯು ಪ್ರಯಾಣ, ವಿಮಾನದೊಳಗೆ ಲಾಕ್ ಆದ ಪ್ರಯಾಣಿಕರು, ಇಂಡಿಗೋ ವಿಮಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಹೇಳಿ ನಮ್ಮ ಸಮಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ, ತಾವು ಪ್ರಯಾಣಿಸಬೇಕಿದ್ದ ವಿಮಾನ ರದ್ದಾದ ಬಗ್ಗೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಮಹಿಳಾ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನಗಳು ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಖನೌ ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿದ್ದಾರೆ. ಪುಣೆ, ದೆಹಲಿ ಸೇರಿದಂತೆ ಅನೇಕ ಕಡೆ ಪ್ರಯಾಣಿಕರು ಏರ್ಲೈನ್ಸ್ ವಿರುದ್ಧ ಪ್ರತಿಭಟಿಸಿದ್ದಾರೆ.
ಇಂಡಿಗೋ ವಿಮಾನಗಳ ಸಂಚಾರಕ್ಕೆ ಕಾರಣವೇನು?
ಇಂಡಿಗೋ ವಿಮಾನಗಳು ರದ್ದಾಗಲು ಮುಖ್ಯ ಕಾರಣ, ಏರ್ಲೈನ್ ಸಂಸ್ಥೆಯು ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದೆ. ಜೊತೆಗೆ, ಅನೇಕ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಎದುರಿಸುತ್ತಿರುವುದರಿಂದಲೂ ಹಾರಾಟ ವಿಳಂಬವಾಗುತ್ತಿದೆ.
ದಿಢೀರ್ ಪೈಲಟ್ ಕೊರತೆ ಆಗಿದ್ದೇಕೆ?
ನಾಗರಿಕ ವಿಮಾನಯಾನ ನಿರ್ದೇಶನಾಲಯವು ನವೆಂಬರ್ 1 ರಂದು ವಿಮಾನ ಕರ್ತವ್ಯ ಸಮಯದ ಮಿತಿಗೆ ಸಂಬಂಧಿಸಿದ ಪರಿಷ್ಕೃತ ಸ್ಥಳಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ, ಪೈಲಟ್ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯವನ್ನು ನೀಡುವುದು ಕಡ್ಡಾಯವಾಗಿದೆ. ಜೊತೆಗೆ, ಪೈಟಲ್ಗಳ ಆಯಾಸವನ್ನು ಕಡಿಮೆ ಮಾಡಿ ಸುರಕ್ಷತೆ, ದಕ್ಷತೆಯನ್ನು ಸುಧಾರಿಸಲು ರಾತ್ರಿಯ ಕಾರ್ಯಾಚರಣೆಗಳನ್ನು (ಉದಾಹರಣೆಗೆ. ರಾತ್ರಿ ಲ್ಯಾಂಡಿಂಗ್ ಅನ್ನು ಎರಡಕ್ಕೆ ಸೀಮಿತಗೊಳಿಸುವುದು) ಮಿತಿಗೊಳಿಸಬೇಕಾಗಿದೆ. ಸಮರ್ಥ ಏಕಾಏಕಿ ಪೈಲಟ್ ಕೊರತೆ ಎದುರಿಸುವಂಥ ಅನಿವಾರ್ಯತೆ ಸೃಷ್ಟಿಯಾಯಿತು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ