ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!


ತುಮಕೂರು, ಡಿಸೆಂಬರ್ 5: ಜಿಲ್ಲೆಯ ಮಧುಗಿರಿಯ ಪುರವಾರ ಗ್ರಾಮದಲ್ಲಿ ಕಳ್ಳರ ಗ್ಯಾಂಗ್ ಎಟಿಎಂ ಮಷಿನ್ ಕಡಿಯಲು ಯತ್ನಿಸಿದ ಘಟನೆ ತುಮಕೂರು ಬೆಳಕಿಗೆ ಬಂದಿದೆ. ತಡರಾತ್ರಿ ಪ್ಲ್ಯಾನ್ ಮಾಡಿಕೊಂಡು ಎಟಿಎಂ ಸೆಂಟರ್‌ಗೆ ನುಗ್ಗಿದ ಕಳ್ಳರು, ಗ್ರೌಂಡಿಂಗ್ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಕಳುವಿಗೆ ಮುಂದಾಗಿದ್ದರು. ಆದರೆ ಎಟಿಎಂ ಮಷಿನ್ ತುಂಬಾ ಭಾರವಾಗಿರುವುದರಿಂದ ಹೊತ್ತುಕೊಂಡು ಹೋಗಲು ಸಾಧ್ಯವಾಗದೆ, ಮಧ್ಯದಲ್ಲೇ ಕಸದ ಬುಟ್ಟಿ ಬಳಿ ಬಿಟ್ಟು ಪರಾರಿಯಾದರು. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಂತರ ಎಟಿಎಂ ಸೆಂಟರ್ ಪರಿಶೀಲಿಸಿದ ವೇಳೆ, ಆರ್‌ಬಿಐ ಭದ್ರತಾ ನಿಯಮಗಳು ಪಾಲನೆಯಾಗದೇ ಇರುವುದು ಬಹಿರಂಗವಾಗಿದೆ. ಎಟಿಎಂ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳಲ್ಲಿ ಅನೇಕ ಸಂಭವಿಸಿದೆ, ತಕ್ಷಣವೇ ಎಟಿಎಂ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆರ್‌ಬಿಐ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ ನಂತರವೇ ಮರು ಕಾರ್ಯಾಚರಣೆ ಆರಂಭಿಸುವಂತೆ ಪೊಲೀಸರು ಎಟಿಎಂ ನಿರ್ವಹಣೆ ಸಂಸ್ಥೆಗೆ ಸೂಚಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *