Video: ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆ

Video: ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆ


ಆನೆಗಳ (ಆನೆ) ಆಟ ತುಂಟಾಟಗಳನ್ನು ನೋಡುವುದೇ ಚಂದ. ತನ್ನ ಮೇಲೆ ಕಾಳಜಿ ವಹಿಸುವ ಜೊತೆಗೆ ಮಗು ಆಗುತ್ತದೆ. ನಡೆ ನುಡಿಯಿಂದಲೇ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಈ ವಿಡಿಯೋ ನಿಷ್ಕಲ್ಮಶ ಪ್ರೀತಿಗೆ ಸಾಕ್ಷಿಯಾಗಿದೆ. ಶಾಲೆಗೆ ಹೊರಟು ನಿಂತ ಪುಟ್ಟ ಹುಡುಗಿಯ ಹಿಂದೆಯೇ ನಡೆದು ಹೋಗುತ್ತಿರುವ ಆನೆಯ ಮುದ್ದಾದ ವಿಡಿಯೋ ವೈರಲ್ ಆಗಿದೆ. ಪುಟ್ಟ ಹುಡುಗಿಯನ್ನು ಕಾಳಜಿ ವಹಿಸುತ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆಯ ಪರಿಶುದ್ಧ ಪ್ರೀತಿಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

friendly_gaints_conversation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯು ಶಾಲೆಗೆ ಹೋಗಲು ರೆಡಿ ಆಕೆಯ ಹಿಂದೆಯೇ ಆನೆಯೊಂದು ಹೋಗುತ್ತಿರುವುದನ್ನು ಕಾಣಬಹುದು. ಈ ದೃಶ್ಯವು ಆನೆಯು ಈ ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟಂತಿದೆ. ಈ ಪುಟಾಣಿಯೂ ಆನೆಯ ಜೊತೆಗೆ ಹೋಗುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಓಡ್ಬೇಡ ಕಂದಮ್ಮ, ಬಿದ್ದೋಗ್ತೀಯಾ; ಪುಟ್ಟ ಪುಟ್ಟ ಹೆಜ್ಜೆ ಓಡುತ್ತಿರುವ ಕಂದನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಇದುವರೆಗೆ ಅರವತ್ತೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮುಗ್ಧ ಪ್ರಾಣಿಗಳ ಜೊತೆಗಿನ ಸ್ನೇಹವೇ ಸುಂದರ ಆಶ್ರಮ. ಮುದ್ದಾಗಿದೆ, ದಯವಿಟ್ಟು ಅದಕ್ಕೆ ಆಹಾರ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನನಗೂ ಕೂಡ ಈ ಆನೆಯೊಂದಿಗೆ ಸ್ನೇಹ ಬೆಳೆಸಬೇಕೆನಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *