ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳು (ಇಂಡಿಗೋ ವಿಮಾನಗಳು) ಸಂಚಾರದಲ್ಲಿ ವ್ಯತ್ಯಯವಾಗಿ ಸತತ ಮೂರನೇ ದಿನವೂ ಪ್ರಯಾಣಿಕರು ಪರದಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 600ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿದ್ದು, ಈ ಬಗ್ಗೆ ವಿಮಾನಯಾನ ಸಂಸ್ಥೆಯು ಮೊದಲೇ ಮಾಹಿತಿ ನೀಡಿಲ್ಲ. ಇದೀಗ ಪ್ರಯಾಣಿಕರ ಸಹಾಯಕ್ಕೂ ಬಂದಿಲ್ಲ. ಇದರ ನಡುವೆ ದೆಹಲಿಯಿಂದ ಕೊಚ್ಚಿಗೆ ಬೆಳೆದ ಮಹಿಳೆಯೊಬ್ಬರು ತಾವು ಅನುಭವಿಸಿದ ತೊಂದರೆಗೆ ಒಳಗಾಗಿದ್ದಾರೆ. ಈ ಮಹಿಳೆ ದೆಹಲಿಯಿಂದ ಕೊಚ್ಚಿಗೆ ಬಂದಿದ್ದಾರೆ. ಆದರೆ ಅವರ ಬ್ಯಾಗ್, ಸೂಟ್ಕೇಸ್ ಮಾತ್ರ ಬಂದಿಲ್ಲ, ಈ ಬಗ್ಗೆ ವಿಮಾನ ನಿಲ್ದಾಣಗಳನ್ನು ಕೇಳಿದ್ರೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಲವು ಪ್ರಯಾಣಿಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಮಹಿಳೆ ವಿಮಾನ ನಿಲ್ದಾಣದಲ್ಲಿ ಬಂದು ಇಳಿದ್ರೂ ಅವರ ಬ್ಯಾಗ್ ಮಾತ್ರ ಬಂದಿಲ್ಲ. ಅದು ಎಲ್ಲಿದೆ ಎಂಬ ಮಾಹಿತಿ ಕೂಡ ಇಲ್ಲ. ಈ ಬಗ್ಗೆ ಅವರ ಗಂಡ ಹೀಗೆ ಹೇಳಿದ್ದಾರೆ. “ನನ್ನ ಪತ್ನಿ ಮದುವೆಗಾಗಿ ಕೊಚ್ಚಿಗೆ ಬಂದಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಆಕೆಯ ಬ್ಯಾಗ್ ಬಂದಿಲ್ಲ. ಅದರ ಬೆಲೆಬಾಳುವ ವಸ್ತುಗಳು ಇತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು. ಈ ಸಂಭಾಷಣೆಯ ಸ್ಕ್ರೀನ್ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ಗಂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಧು ವರರ ಕುರ್ಚಿಯಲ್ಲಿ ಕುಳಿತ ತಂದೆ ತಾಯಿ! ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ಆರತಕ್ಷತೆ: ಇಂಡಿಗೋ ವಿಮಾನ ರದ್ದು ಕಾರಣ
ವಿಮಾನ ವಿಳಂಬ, ರದ್ದತಿ ಕುರಿತು ಇಂಡಿಗೋ ಹೇಳಿಕೆ:
ನವೆಂಬರ್ 4 ರಂದು ಹಂಚಿಕೊಂಡ ಟ್ವೀಟ್ನಲ್ಲಿ, ವಿಮಾನ ರದ್ದತಿ ಮತ್ತು ವಿಳಂಬದ ಸಮಸ್ಯೆಗಳನ್ನು ವಿಮಾನಯಾನ ಸಂಸ್ಥೆಯು ಪರಿಹರಿಸಿದೆ. ಜೊತೆಗೆ ಪ್ರಯಾಣಿಕ ಕ್ಷಮೆಯಾಚಿಸಿದೆ. ಕಳೆದ ಎರಡು ದಿನಗಳಿಂದ ಇಂಡಿಗೋದ ನೆಟ್ವರ್ಕ್ ಮತ್ತು ಕಾರ್ಯಾಚರಣೆಗಳಲ್ಲಿ ವ್ಯಾಪಕ ಉಂಟಾಗಿದೆ. ಯಾವುದೇ ವಿಮಾನ ನಿಲ್ದಾಣದ ಹಾಗೂ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ್ದಾರೆ. ಇಂಡಿಗೋ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ಸಮಸ್ಯೆ ಪರಿಹಾರವನ್ನು ಮಾಡಲು MOCA, DGCA, BCAS, AAI ಮತ್ತು ವಿಮಾನ ನಿಲ್ದಾಣ ನಿರ್ವಾಹಕರ ಸಹಾಯವಿದೆ. ಎಂದು ಇಂಡಿಗೋ ಹೇಳಿಕೆಯಲ್ಲಿ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ