ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅರ್ಚಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮದುವೆ ಮಾಡಿಸಿದ ಅರ್ಚಕರು ಸಾಕ್ಷಿ ಹೇಳಲು ಬೇರೆ ರಾಜ್ಯಗಳ ಕೋರ್ಟ್‌ಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ. ಹಲಸೂರು ಸೋಮೇಶ್ವರ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆ ಬರುವ ದೇವಸ್ಥಾನಗಳಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ಪ್ರಸ್ತುತ, ತಹಶೀಲ್ದಾರ್ ಸಮ್ಮುಖದಲ್ಲಿ ನೋಂದಣಿ ನಂತರ ಹಾರ ಬದಲಾವಣೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ ಹಲಸೂರಿನ ಮುಜರಾಯಿ ದೇವಸ್ಥಾನದಲ್ಲಿ ಮದುವೆ ಯಾಕೆ? ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ
ಈ ಹಿನ್ನೆಲೆ ಅರ್ಚಕ ರಾಮ ಮುಜರಾಯಿ ಸಚಿವಲಿಂಗ ರೆಡ್ಡಿ ಗಂಭೀರ ಮನವಿ ಮಾಡಿಕೊಂಡಿದ್ದು, ದೇವಸ್ತಾನದಲ್ಲಿ ಮದುವೆಯಾದ ದಂಪತಿ ವಿಚ್ಛೇದನ ಅಥವಾ ಇತರ ಸಮಸ್ಯೆಗಳಿಗೆ ಒಳಗಾದಾಗ ಮದುವೆ ಮಾಡಿಸಿದ ಅರ್ಚಕರನ್ನು ಕೋರ್ಟ್ ಮೆಟ್ಟಿಲೇರಿಸುತ್ತಾರೆ. ಆದರೆ ವಿವಿಧೆಡೆಯ ಹಲವು ಭಕ್ತಾದಿಗಳು ಇದೆ ದೇವಸ್ಥಾನದಲ್ಲಿ ಮದುವೆಯಾಗುವ ಹರಕೆ ಹೊತ್ತಿರುತ್ತಾರೆ. ಹೀಗಾಗಿ ಅರ್ಚಕರಿಗೆ ತೊಂಡೆರೆಯಾಗದಂತೆ ಮುಜರಾಯಿ ಇಲಾಖೆ ಕೆಲ ಶರತ್ತುಗಳನ್ನು ಒಡ್ಡಿ, ದೇವಸ್ಥಾನಗಳಲ್ಲಿ ಮದುವೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.