Headlines

RBI campaign: ಜ. 1ರಿಂದ ಬ್ಯಾಂಕ್ ಗ್ರಾಹಕರ ದೂರುಗಳ ಶೀಘ್ರ ವಿಲೇವಾರಿಗೆ ಎರಡು ತಿಂಗಳ ಅಭಿಯಾನ

RBI campaign: ಜ. 1ರಿಂದ ಬ್ಯಾಂಕ್ ಗ್ರಾಹಕರ ದೂರುಗಳ ಶೀಘ್ರ ವಿಲೇವಾರಿಗೆ ಎರಡು ತಿಂಗಳ ಅಭಿಯಾನ


ನವೆಂಬರ್, ಡಿಸೆಂಬರ್ 5: ಆರ್ಬಿಐ ಈಗ ಗ್ರಾಹಕರ ಸೇವೆಗೆ ಅತಿಹೆಚ್ಚು ಅದ್ಯತೆ ಕೊಡಲು ನಿರ್ಧರಿಸಲಾಗಿದೆ. ಆರ್ಬಿಐ ಒಂಬುಡ್ಸ್ ಮೆನ್ (ಆರ್‌ಬಿಐ ಒಂಬುಡ್ಸ್‌ಮನ್) ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿರುವ ಎಲ್ಲಾ ದೂರುಗಳನ್ನು (ಕುಂದುಕೊರತೆಗಳು) ಶೀಘ್ರವಾಗಿ ಇತ್ಯರ್ಥ ಪಡಿಸಲು ಎರಡು ತಿಂಗಳ ಅಭಿಯಾನ (ಅಭಿಯಾನ) ನಡೆಯಲಿದೆ. 2026ರ ಜನವರಿಯಿಂದ ಫೆಬ್ರುವರಿವರೆಗೆ ಎರಡು ತಿಂಗಳ ಕಾಲ ಈ ಅಭಿಯಾನ ಇರುತ್ತದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ (RBI MPC Meet) ನಿರ್ಧಾರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ನಾವು ಗ್ರಾಹಕ ಸೇವೆಗಳನ್ನು ಸುಧಾರಿಸಲು ಗಮನ ಹರಿಸಿದ್ದೇವೆ. ಈ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮರು ಕೆವೈಸಿ, ಹಣಕಾಸು ಒಳಗೊಳ್ಳುವಿಕೆ ಮತ್ತು ನಿಮ್ಮ ಹಣ ನಿಮ್ಮ ಅಧಿಕಾರ ಅಭಿಯಾನಗಳು ಇಂಥ ಕೆಲ ಕ್ರಮ. ಈ ವರ್ಷದ ಆರಂಭದಲ್ಲಿ ನಮ್ಮ ಸಿಟಿಜನ್ ಚಾರ್ಟರ್ ಅನ್ನು ಪರಾಮರ್ಶಿಸಿದ್ದೇವೆ. ನಮ್ಮ ಎಲ್ಲಾ ಸೇವೆಗಳಿಗೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನೀಡಿದ್ದೇವೆ. ಸಮಸ್ಯೆ ಇತ್ಯರ್ಥಪಡಿಸಲಾಗುವುದರ ವಿವರವನ್ನು ಪ್ರತೀ ತಿಂಗಳು ನೀಡಬೇಕಾಗಿದೆ. ಬಾಕಿ ಉಳಿದಿರುವ ಅರ್ಜಿಗಳನ್ನು ಪ್ರತೀ ತಿಂಗಳ ಮೊದಲ ತಾರೀಖಿನಿಂದ ಪ್ರಕಟಿಸಲಾಗುವುದು’ ಎಂದು ಸಂಜಯ್ ಮಲ್ಹೋತ್ರಾ ಅವರು ಆರ್ ಬಿಐನಿಂದ ತೆಗೆದುಕೊಳ್ಳಲಾದ ಗ್ರಾಹಕ ಕೇಂದ್ರದ ಕ್ರಮಗಳ ವಿವರಗಳನ್ನು ನೀಡಿದ್ದಾರೆ

ಇದನ್ನೂ ಓದಿ: ಆರ್ಬಿಐನಿಂದ ಲಕ್ಷ ಕೋಟಿ ರೂ ಒಎಂಒ ಖರೀದಿ; 5 ಬಿಲಿಯನ್ ಡಾಲರ್ ಕರೆನ್ಸಿ ಖರೀದಿಗೆ ನಿರ್ಧಾರ; ಏನಿದರ ಮಹತ್ವ

ಎರಡು ತಿಂಗಳ ಅಭಿಯಾನ

‘ಆರ್ ನೀತಿ ಬಿಐ ನಿಯಂತ್ರಿತವಾಗಿರುವ ಎಲ್ಲಾ ಹಣಕಾಸು ಸಂಸ್ಥೆಗಳೂ ಕೂಡ ತಮ್ಮ ಮತ್ತು ಕಾರ್ಯಾಚರಣೆಗಳಲ್ಲಿ ಗ್ರಾಹಕರಿಗೆ ಆದ್ಯತೆ ಕೊಡಬೇಕು. ಗ್ರಾಹಕ ಸೇವೆ ಸುಧಾರಿಸಬೇಕು ಮತ್ತು ಸಮಸ್ಯೆಗಳನ್ನು ಕಡಿಮೆಗೊಳಿಸಬೇಕು. ಮುಂದಿನ ವರ್ಷದ ಜನವರಿ 1 ರಿಂದ ಎರಡು ತಿಂಗಳ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಆರ್ಬಿಐ ಒಂಬುಡ್ಸ್ ಮೆನ್ (ಸಾರ್ವಜನಿಕ ತನಿಖಾಧಿಕಾರಿ) ಬಳಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಈ ಎಲ್ಲಾ ಸಂಸ್ಥೆಗಳೂ ಸಹಕರಿಸಬೇಕು ಎಂದು ನಿರೀಕ್ಷಿಸುತ್ತೇನೆ’ ಎಂದು ಬಿಐ ಗವರ್ನರ್ ಹೇಳಿದ್ದಾರೆ.

ಆರ್ಬಿಐ ಒಂಬುಡ್ಸ್ಮನ್ ಎಂಬುದು ಬ್ಯಾಂಕ್ ಗ್ರಾಹಕರು ನೀಡುವ ದೂರುಗಳನ್ನು ತನಿಖೆ ನಡೆಸಿ ನ್ಯಾಯ ಕೊಡಿಸಲು ಇರುವ ಒಂದು ನ್ಯಾಯವ್ಯವಸ್ಥೆ. ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಅಥವಾ ಬ್ಯಾಂಕ್ ಕ್ರಮದಿಂದ ಸಮಾಧಾನ ಸಿಗದ ಗ್ರಾಹಕರು ಆರ್ ಬಿಐನ ಒಂಬುಡ್ಸ್‌ಮನ್‌ಗೆ ದೂರು ಕೊಡುವ ಅವಕಾಶ ಇರುತ್ತದೆ. ಈ ಒಂಬುಡ್ಸ್ಮನ್ಗೆ ಸ್ವಾಯತ್ತ ಅಧಿಕಾರ ಇರುತ್ತದೆ. ಬ್ಯಾಂಕುಗಳ ವಿರುದ್ಧ ಗ್ರಾಹಕರು ನೀಡುವ ದೂರನ್ನು ಪರಿಶೀಲಿಸಿ, ನ್ಯಾಯಯುತವಾಗಿ ವ್ಯಾಜ್ಯಕ್ಕೆ ಪರಿಹಾರ ಕೊಡಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *