Headlines

‘ಅಖಂಡ 2’ ರಿಲೀಸ್ ರದ್ದಾಗಲು ನಿಜ ಕಾರಣವೇನು?

‘ಅಖಂಡ 2’ ರಿಲೀಸ್ ರದ್ದಾಗಲು ನಿಜ ಕಾರಣವೇನು?


ನಂದಮೂರಿ ಬಾಲಕೃಷ್ಣ (ನಂದಮೂರಿ ಬಾಲಕೃಷ್ಣ) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಅಖಂಡ 2’ ಇಂದು (ಡಿಸೆಂಬರ್ 05) ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬಿಡುಗಡೆ ಆಗಲಿಲ್ಲ. ಬಾಲಕೃಷ್ಣ ಅಂಥಾ ಸೂಪರ್ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಇಂಥಹ ಪರಿಸ್ಥಿತಿ ಬಂದಿದ್ದು ಅವರ ವೈಯಕ್ತಿಕ ವರ್ಚಸ್ಸಿಗೆ ಪೆಟ್ಟು ಬಿದ್ದಂತಾಗಿದೆ. ಅದು ಮಾತ್ರವೇ ಅಲ್ಲದೆ, ಸಿನಿಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ‘ಅನಿವಾರ್ಯ’ ಕಾರಣದಿಂದ ಹೀಗಾಗಿದೆ ಎಂದಾದರೆ ನಿಜವಾದ ಕಾರಣ ಬೇರೆಯೇ ಇದೆ.

‘ಅಖಂಡ 2’ ಸಿನಿಮಾವನ್ನು 14 ರೀಲ್ ಪ್ಲಸ್ ಎಂಟರ್ಟೈನ್ ಮೆಂಟ್ ಹೆಸರಿನ ಸಂಸ್ಥೆ ನಿರ್ಮಾಣ ಮಾಡಿತ್ತು. ಪುನೀತ್ ರಾಜ್‌ಕುಮಾರ್ ನಟಿಸಿದ್ದ ಕನ್ನಡದ ಸಿನಿಮಾ ‘ಪವರ್’ ಸೇರಿದಂತೆ ಹಲವು ತೆಲುಗು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದೆ. ಈ ನಿರ್ಮಾಣ ಸಂಸ್ಥೆಯ ಕೆಲ ಸಿನಿಮಾಗಳು ಹಿಟ್ ಆದರೆ ಕೆಲವು ಫ್ಲಾಪ್ ಆಗಿವೆ. ಇದೀಗ ‘ಅಖಂಡ 2’ ಸಿನಿಮಾ ರದ್ದಾಗಲು ಈ ನಿರ್ಮಾಣ ಸಂಸ್ಥೆ ಉಳಿಸಿಕೊಂಡಿದ್ದ ಹಳೆಯ ಬಾಕಿ ಕಾರಣ ಎನ್ನಲಾಗುತ್ತಿದೆ.

14 ರೀಲ್ ಪ್ಲಸ್ ಎಂಟರ್ಟೈನ್ ಮೆಂಟ್ ಸಂಸ್ಥೆ 10 ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿದ್ದರ ಪ್ರಭಾವ ಈಗ ‘ಅಖಂಡ 2’ ಮೇಲೆ ಆಗಿದೆ. 2014 ರಲ್ಲಿ ಬಿಡುಗಡೆ ಆಗಿದ್ದ ಮಹೇಶ್ ಬಾಬು ನಟನೆಯ ‘ನೇನೊಕ್ಕಡಿನೆ’ ಮತ್ತು ‘ಆಗಡು’ ಸಿನಿಮಾಗಳು ಇದೇ 16 ರೀಲ್ ಪ್ಲಸ್ ಎಂಟರ್ಟೈನ್ ಮೆಂಟ್ ನಿರ್ಮಾಣವಾಗಿತ್ತು. ಆ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಫ್ ಆಗಿದ್ದವು.

ಇದನ್ನೂ ಓದಿ:ಕೊನೆ ಕ್ಷಣದಲ್ಲಿ ರದ್ದಾಯ್ತು ಬಾಲಕೃಷ್ಣ ನಟನೆಯ ‘ಅಖಂಡ 2’ ರಿಲೀಸ್: ಕಾರಣ?

ಆ ಸಿನಿಮಾಗಳನ್ನು ಎರೋಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿತರಣೆ ಮಾಡಿತ್ತು. ಆಗ ಎರಡೂ ಸಂಸ್ಥೆಗಳು ಸಿನಿಮಾ ವಿಷಯವಾಗಿ ಒಪ್ಪಂದ ಮಾಡಿಕೊಂಡಿವೆ. ಸಿನಿಮಾ ಫ್ಲಾಫ್ ಆಗುತ್ತಲೆ 14 ರೀಲ್ಸ್ ಸಂಸ್ಥೆ ಒಪ್ಪಂದ ಮುರಿಯಿತು. ಬಳಿಕ ಎರೋಸ್ ಎಂಟರ್ಟೈನ್ ಮೆಂಟ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತು. 2019ರಲ್ಲಿ ಪ್ರಕರಣದ ತೀರ್ಪು ಹೊರಬಿದ್ದು, 14 ರೀಲ್ಸ್ ಸಂಸ್ಥೆ ಬಡ್ಡಿ ಸಮೇತ 11 ಕೋಟಿ ರೂಪಾಯಿ ಹಣವನ್ನು ಎರೋಸ್ ಎಂಟರ್ಟೈನ್ ಮೆಂಟ್ ಸಂಸ್ಥೆಗೆ ಹಾಗೂ ‘ನೇನೊಕ್ಕಿಡಿನೆ’ ಮತ್ತು ‘ಆಗಡು’ ಸಿನಿಮಾದ ಎಲ್ಲ ಹಕ್ಕು ಎರೋಸ್‌ಗೆ ಸಿಕ್ಕಿದೆ. ಬಳಿಕ ಮದ್ರಾಸ್ ಸಹ ಇದೆ ಆದೇಶವನ್ನು ಎತ್ತಿ ಹಿಡಿಯಿತು. ಬಳಿಕ 2021 ರಲ್ಲಿ ಪ್ರಸ್ತಾಪ ಸಹ ಇದನ್ನೇ ಹೇಳಿತು. ಬಾಕಿ ತೀರುವವರೆಗೆ ಹೊಸ ಸಿನಿಮಾ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಹ ಹೇಳಲಾಗಿದೆ.

ಆದರೆ 14 ರೀಲ್ಸ್ ಸಂಸ್ಥೆ ಬಾಕಿ ತೀರಿಸಲಿಲ್ಲ. ಈಗ ಬಡ್ಡಿ ಎಲ್ಲ ಬೆಳೆದು 28 ಕೋಟಿ ರೂಪಾಯಿಯಾಗಿದೆ. ಆದರೆ 14 ರೀಲ್ಸ್ ಸಂಸ್ಥೆ, 14 ರೀಲ್ಸ್ ಪಿಪಿಎಲ್ ಹೆಸರಿನ ಮತ್ತೊಂದು ಸಂಸ್ಥೆಯ ಅಡಿಯಲ್ಲಿ ‘ಅಖಂಡ 2’ ಸಿನಿಮಾ ನಿರ್ಮಿಸಿ ಬಿಡುಗಡೆಗೆ ಸಜ್ಜಾಗಿತ್ತು. ಇದನ್ನು ಮನಗಂಡ ಎರೋಸ್, ಆಗಸ್ಟ್ ತಿಂಗಳಿನಲ್ಲಿ ನೋಟೀಸ್ ನೀಡಿತು. ಮದ್ರಾಸ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆದು ‘ಅಖಂಡ 2’ ಸಿನಿಮಾದ ಬಿಡುಗಡೆಗೆ ಅನುಮತಿ ನೀಡಲಾಗಿದೆ. ಆದರೆ ಡಿವಿಷನ್ ಬೆಂಚ್, ಭಿನ್ನ ನಿಲುವು ತಳೆದು, ಈ ಪ್ರಕರಣವನ್ನು ಮತ್ತೆ ಪರಿಪೂರ್ಣವಾಗಿ ವಿಚಾರಣೆ ಮಾಡುವಂತೆ ಮನವಿ ಮಾಡದೆ, ಆವರೆಗೆ ‘ಅಖಂಡ 2’ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆಯುವಂತೆ ಆದೇಶ ನೀಡಿತು. ಅದೇ ಕಾರಣಕ್ಕೆ ಈಗ ‘ಅಖಂಡ 2’ ಸಿನಿಮಾ ಬಿಡುಗಡೆ ರದ್ದಾಯ್ತು.

ಈಗ ಎರೋಸ್ ಮತ್ತು 14 ರೀಲ್ಸ್ ನಡುವಿನ ಹಣಕಾಸು ವಿವಾದ ಸಂಪೂರ್ಣವಾಗಿ ವಿಚಾರಣೆಗೆ ಒಳಪಡುವುದಿಲ್ಲ, ‘ಅಖಂಡ 2’ ಸಿನಿಮಾ ಬಿಡುಗಡೆ ಆಗುವುದು ಅನುಮಾನ. ಒಂದೊಮ್ಮೆ 14 ರೀಲ್ಸ್ ಸಂಸ್ಥೆ ಹಳೆಯ ಬಾಕಿಯನ್ನು ಚುಕ್ತಾ ಮಾಡಿದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *