ಬೆಂಗಳೂರು, ಡಿಸೆಂಬರ್ 05: ದೇಶ ಸೈಬರ್ ಕ್ರೈಂ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಬಹುಶಃ ವಿದ್ಯಾವಂತರೇ ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಾಗುತ್ತಿದ್ದಾರೆ, ಡಿಜಿಟಲ್ ಅರೆಸ್ಟ್ ಮತ್ತು ಟ್ರೇಡಿಂಗ್ ಹೆಸರಿನಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಈ ನಡುವೆ ಕರ್ನಾಟಕದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರೇ ಅಂಕಿ-ಅಂಶ ಬಿಚ್ಚಿಟ್ಟಿದ್ದು, 2025 ರಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಗೆ ದೇಶದಲ್ಲಿಯೇ ಮೊಟ್ಟ ಮೊದಲಬಾರಿಗೆ ಸೈಬರ್ ಕ್ರೈಮ್ ಕರ್ನಾಟಕದಲ್ಲಿ ಡಿಜಿಪಿ ನೇಮಕಗೊಂಡಿತು. ಸೆನ್ ಠಾಣೆಗಳನ್ನು ಮಾಡಿದ ಬಳಿಕ ಆನ್ ವಂಚನೆಗಳ ಬಗ್ಗೆ ದಾಖಲಾಗಿರುವ ಪ್ರಕರಣಗಳು ಹೆಚ್ಚಾಗಿವೆ. ಅಮೆರಿಕದಲ್ಲಿ ಇದ್ದವರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರ ಅಕೌಂಟ್ ನಿಂದ ಹಣ ತೆಗೆಯುತ್ತಿದ್ದ ಡಿಜಿಟಲ್ ವಂಚಕರನ್ನೂ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಪ್ರಸ್ತುತ ವರ್ಷ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು 13,000ಕ್ಕೆ ಇಳಿದಿವೆ ಎಂದು ಗೃಹ ತಜ್ಞರು.
ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ 1930 ನಂಬರ್ ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?
ಯಾವ ವರ್ಷ ಎಷ್ಟು ಪ್ರಕರಣ?
| ವರ್ಷ | ಪ್ರಕರಣ |
| 2022 | 12,550 |
| 2023 | 21,903 |
| 2024 | 21,995 |
| 2025 | 13,000 |
ಕಳೆದ ವರ್ಷಕ್ಕೆ 2025 ರಲ್ಲಿ ಸುಮಾರು 9 ಸಾವಿರದಷ್ಟು ಸೈಬರ್ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ. ಆನ್‌ಲೈನ್ ವಂಚನೆಗೆ ಒಳಗಾದ ಸಂತ್ರಸ್ತರು 1930 ಸಂಖ್ಯೆಗೆ ಸೈಬರ್ ಕ್ರೈಮ್ ದೂರುಗಳನ್ನು ನೀಡಬಹುದು. 66 ಸಿಬ್ಬಂದಿ ಈ ಕರೆಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತಿದ್ದಾರೆ, ಸೈಬರ್ ಕ್ರೈಮ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:17 pm, ಶುಕ್ರ, 5 ಡಿಸೆಂಬರ್ 25