ಬೆಂಗಳೂರು, (ಡಿಸೆಂಬರ್ 05): ದೇಶಾದ್ಯಂತ ಇಂಡಿಯೋ ಏರ್ಲೈನ್ಸ್ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಬ್ರೇಕ್ ಬಿದ್ದಿದೆ. ವಿಮಾನಗಳ ದಿಢೀರ್ ರದ್ದತಿಯಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಇಲ್ಲದೆ ಪರದಾಡ್ತಿದ್ದಾರೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು, ವೃದ್ಧರು, ಮಕ್ಕಳು ಪಡಂತೂ ಹೇಳ ತೀರದಾಗಿದೆ. ಇನ್ನು ಕೆಲವರ ಅವಿಸ್ಮರಣೀಯ ಕ್ಷಣವನ್ನು ಇಂಡಿಗೋ ವಿಮಾನ ಸಂಸ್ಥೆ ಕಿತ್ತುಕೊಂಡಿದೆ.. ಹೌದು..ಮಗ ಹುಟ್ಟಿದ ಖುಷಿಯಲ್ಲಿದ್ದ ತಂದೆಯೊಬ್ಬರು ನಾಮಕರಣ ಕಾರ್ಯಕ್ರಮಕ್ಕೆ ಹೋಗದೆ ಪತಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಲಾದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಗನ ನಾಮಕರಣಕ್ಕೆ ಒಬ್ಬ ವ್ಯಕ್ತಿ ಬೆಂಗಳೂರಿನಿಂದ ಜೈಪುರಕ್ಕೆ ಹೋಗಲು ಇಂಡಿಯೊ ವಿಮಾನ ಬುಕ್ ಮಾಡಿದ್ದು, ಅದರಂತೆ ಇಂದು (ಡಿಸೆಂಬರ್ 05) ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದರೆ, ವಿಮಾನ ರದ್ದಾಗಿದೆ ಎಂಬ ವಿಷಯ ತಿಳಿದು ಶಾಕ್ ಆಗಿದ್ದಾರೆ.
ಇನ್ನು ಈ ಬಗ್ಗೆ ಕಾಣಿಸಿಕೊಂಡಿರುವ ಪ್ರಯಾಣಿಕ, ಮಗನ ನಾಮಕರಣಕ್ಕೆ ಕುಟುಂಬ ಸಮೇತ ಟಿಕೆಟ್ ಬುಕ್ ಮಾಡಲಾಗಿದೆ. ಆದರೆ ಕೊನೆ ಇಂಡಿಗೋ ವಿಮಾನಗಳ ರದ್ದಿನಿಂದ ಹೋಗಲಾಗದ ಸ್ಥಿತಿ ಬಂದಿದೆ. ಇಂಡಿಗೋ ಏರ್ಲೈನ್ಸ್ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಕಿತ್ತುಕೊಂಡಿದೆ. ಅವರಿಗೆ ನನ್ನ ಹಣ ವಾಪಸ್ ಕೊಡಬಹುದು. ಆದರೆ ಮಗನ ನಾಮಕರಣ ಕ್ಷಣವನ್ನು ವಾಪಸ್ ಕೊಡುತ್ತಾರಾ? ಇಂಡಿಗೋ ಏರ್ಲೈನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.