ಬೆಂಗಳೂರು, ಡಿಸೆಂಬರ್ 05: ಆ ಏರಿಯಾದ ಜನರು ಕಳೆದ ಎರಡು ವಾರಗಳಿಂದ ದುರ್ವಾಸನೆಗೆ ಬೇಸತ್ತಿದ್ದರು. ಹೆಗ್ಗಣ್ಣ ಸತ್ತಿರಬಹುದೆಂದು ಹಾದಿ ಬದಿಯ ಚರಂಡಿಗೆ ನೀರು ಸುರಿಯಲು. ಆದರೆ ಇಂದು (ಪೊಲೀಸ್) ಎಂಟ್ರಿಕೊಟ್ಟಾಗ ಬೆಚ್ಚಿಬಿದ್ದಿದ್ದರು. ದುರ್ವಾಸನೆ ಜಾಡು ಹಿಡಿದ ಪೊಲೀಸರಿಗೆ ಕೊಳೆತ ಶವ (ಮೃತ ದೇಹ) ಸಿಕ್ಕಿತ್ತು. ಇಂದು ಬಸವೇಶ್ವರ ನಗರ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯೊಳಗೆ ಕೊಳೆತು ನಾರುತ್ತಿತ್ತು ಶವ
ಬೆಂಗಳೂರಿನ ಮಂಜುನಾಥ್ ನಗರದ 3ನೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಕಳೆದ ಹದಿನೈದು ದಿನಗಳಿಂದ ಶವ ಕೊಳೆತು ನಾರುತ್ತಿತ್ತು. ಮುಖಕ್ಕೆ ಮಾಸ್ಕ್ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಏರಿಯಾದ ಜನರು ಮಾತ್ರ ಅಟ್ಟದ ಮೇಲೆಲ್ಲೋ, ಮೋರಿಯಲ್ಲೋ, ಹೆಗ್ಗಣ ಸತ್ತು ಬಿದ್ದಿರುತ್ತಿದ್ದ ದಿನವೂ ಮೋರಿಗೆ ನೀರು ಸುರಿಯುತ್ತಿದ್ದರಂತೆ.
ಇದನ್ನೂ ಓದಿ: ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?
ಬಳಿಕ ಮನೆಯೊಂದರಿಂದ ದುರ್ವಾಸನೆ ಬರ್ತಿದೆ ಎಂದು ಗಮನಿಸಿದ ಸ್ಥಳೀಯರು, ಮನೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯ ಬಂದು ನೋಡಿದ ಪೊಲೀಸರಿಗೆ ಹಾಸಿಗೆ ಪಡೆದು ಮೇಲೆ ಟೆಕ್ಕಿ ದೇಹ ಕೊಳೆತ ಸ್ಥಿತಿಯಲ್ಲಿದೆ.
ಇದನ್ನೂ ಓದಿ: ಡೆತ್‌ನೋಟ್ ಬರೆದಿಟ್ಟು ತಾಯಿ ಆತ್ಮಹತ್ಯೆ: 6 ತಿಂಗಳ ಹಿಂದಷ್ಟೇ 2ನೇ ಮದ್ವೆಯಾಗಿದ್ದ ಮಗ ಸಹ ಸಾವು
ಸ್ಥಳಕ್ಕೆ ಕೊಳೆತು ದಯರ್ವಾಸನೆ ಬರುತ್ತಿದ್ದ ವ್ಯಕ್ತಿ ಹೆಸರು ಯುವರಾಜ್ (48). ಮೃತ ಯುವರಾಜ್ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಆಗಾಗ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ತಾಯಿಯೊಂದಿಗೆ ಕಳೆದ ಹದಿನೈದು ವರ್ಷಗಳಿಂದ ಇದೆ ಏರಿಯಾದಲ್ಲಿ ವಾಸವಾಗಿದ್ದರಂತೆ. ನೆರೆಹೊರೆಯವ ಜೊತೆಗಾಗಲಿ, ಗೆಳೆಯರ ಜೊತೆಗಾಗಲಿ ಹೆಚ್ಚಿಗೆ ಮಾತನಾಡಿದ್ದೇ ನೋಡಿಲ್ಲವಂತೆ.
ಅನುಮಾನಗಳಿಗೆ ಎದೆಮಾಡಿದ ಸಾವು
ವಿವಾಹಿತರಾದ ಟೆಕ್ಕಿ, ಸಾವು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಅನುಮಾನಾಸ್ಪದ ಸಾವಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಮೃತ ಯುವರಾಜ್ ಸೋದರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.