ರತನ್ ಟಾಟಾ ಮಲತಾಯಿ ಸಿಮೋನ್ ವಿಧಿವಶ; ಲ್ಯಾಕ್ಮೆ, ವೆಸ್ಟ್​ಸೈಡ್​ನಂತಹ ಬ್ರ್ಯಾಂಡ್ ಕಟ್ಟಿದ್ದ ಚಾಣಾಕ್ಷ್ಯೆ ಅವರು

ರತನ್ ಟಾಟಾ ಮಲತಾಯಿ ಸಿಮೋನ್ ವಿಧಿವಶ; ಲ್ಯಾಕ್ಮೆ, ವೆಸ್ಟ್​ಸೈಡ್​ನಂತಹ ಬ್ರ್ಯಾಂಡ್ ಕಟ್ಟಿದ್ದ ಚಾಣಾಕ್ಷ್ಯೆ ಅವರು


ಮುಂಬೈ, ಡಿಸೆಂಬರ್ 5: ದಿವಂಗತ ರತನ್ ಟಾಟಾ ಅವರ ಮಲತಾಯಿಯಾಗಿದ್ದ ಸಿಮೋನ್ ಟಾಟಾ (ಸೈಮೋನ್ ಟಾಟಾ) ನಿಧನರಾಗಿದ್ದಾರೆ. ಅವರಿಗೆ 9 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಸಿಮೋನ್ ಅವರ ಆರೋಗ್ಯ ಸ್ಥಿತಿ ಆಗಸ್ಟ್ನಲ್ಲಿ ಗಂಭೀರವಾಗಿದೆ. ದುಬೈನಿಂದ ಮುಂಬೈಗೆ ಅವರನ್ನು ಕರೆತಂದು ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಡಾ. ಫಾರೂಕ್ ಉಡವಾಡಿಯಾ ಅವರ ಕಣ್ಗಾವಲಿನಲ್ಲಿ ಸಿಮೋನ್ ಅವರಿಗೆ ಚಿಕಿತ್ಸೆ ನೀಡಲಾಗುವುದು. ಆದರೆ, ಇವತ್ತು ಶುಕ್ರವಾರ ಆಸ್ಪತ್ರೆಯಲ್ಲಿ 95 ವರ್ಷದ ವೃದ್ಧೆಯ ಪ್ರಾಣಪಕ್ಷಿ ಹಾರಿ ಹೋಗಿದೆ.

ಸಿಮೋನ್ ಟಾಟಾ ಅವರು ಭಾರತ ಸಂಜಾತೆಯಲ್ಲ. ಸ್ವಿಟ್ಜರ್ ಲೆಂಟಿನ ಜಿನಿವಾದದಲ್ಲಿ ಹುಟ್ಟಿದವರು. ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಅವರನ್ನು 1953 ರಲ್ಲಿ ಸಿಮೋನ್ ಭೇಟಿಯಾಗಿದ್ದರು. ಭಾರತಕ್ಕೆ ಪ್ರವಾಸಿಗಳಾಗಿ ಬಂದಿದ್ದ ಸಿಮೋನ್ ಅವರು ನಾವಲ್ ಟಾಟಾ ಅವರನ್ನು ಭೇಟಿಯಾದಾಗ ಅವರ 23 ವರ್ಷಗಳು. ಅದಾಗಲೇ ವಿಚ್ಛೇದನಗೊಂಡಿದ್ದ ನಾವಲ್ ಅವರು ಸಿಮೋನ್ ಅವರಿಗಿಂತ 26 ವರ್ಷ ಹಿರಿಯರು. 1955ರಲ್ಲಿ ಇಬ್ಬರೂ ಮದುವೆಯಾಗಿದೆ. ಅದಾದ ಬಳಿಕ ಸಿಮೋನ್ ಅವರು ಖಾಯಂ ಆಗಿ ಮುಂಬೈನಲ್ಲೇ ವಾಸವಿದ್ದರು.

ಇದನ್ನೂ ಓದಿ: ಭಾರತ-ರಶ್ಯ ಬ್ಯೂಸಿನೆಸ್ ಫೋರೆಂಜ್ ಮುನ್ನ ವಿಷನ್ 2030 ಒಪ್ಪಂದಕ್ಕೆ ಸಹಿ

ನಾವಲ್ ಟಾಟಾ ಅವರ ಮೊದಲ ಪತ್ನಿಯ ಮಗ ರತನ್ ಟಾಟಾ. ರತನ್ ಅವರ ತಾಯಿ ಬೇರೊಂದು ವಿವಾಹವಾದರು. ರತನ್ ಅವರು ಟಾಟಾ ಕುಟುಂಬದಲ್ಲೇ ಉಳಿದುಕೊಂಡರು. ಇವರ ಮಲತಾಯಿಯಾದ ಸಿಮೋನ್ ಅವರು ಚಾಣಾಕ್ಷ್ಯ ಉದ್ಯಮಿ ಎನಿಸಿದ್ದರು. ಟ್ರೆಂಟ್, ಲ್ಯಾಕ್ಮೆ ಮೊದಲಾದ ಹಲವು ಸುಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಕಟ್ಟಿ ಬೆಳೆಸಿದ ಚಾಣಾಕ್ಷ್ಯ ಆಕೆ.

ಎಂಬತ್ತರ ಕಾರ್ಯದಲ್ಲಿ ಟಾಟಾ ಒಡೆತನದ ಲ್ಯಾಕ್ಮೆ ಕಂಪನಿಯ ಛೇರ್ಮನ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. 1996ರಲ್ಲಿ ಲ್ಯಾಕ್ಮೆ ಉತ್ತಮ ಬ್ರ್ಯಾಂಡ್ ಆಗಿದ್ದಾಗಲೇ ಹಿಂದೂಸ್ತಾನ್ ಯುನಿಲಿವರ್‌ಗೆ ಮಾರಕವಾಯಿತು.

ನಂತರ ಟ್ರೆಂಟ್ ಅನ್ನು ಸೈಮನ್ ಮುನ್ನಡೆಸಿದರು. ಲ್ಯಾಕ್ಮೆ ಮಾರಾಟದಿಂದ ಬಂದ ಆದಾಯ ಬಳಸಿ ವೆಸ್ಟ್ಸೈಡ್ ಬ್ರ್ಯಾಂಡ್ ಕಟ್ಟಿದರು. ಲ್ಯಾಕ್ಮೆ ಕಾಸ್ಮೆಟಿಕ್ಸ್ ಬ್ರ್ಯಾಂಡ್ ಆದರೆ, ವೆಸ್ಟ್ ಸೈಡ್ ಫ್ಯಾಷನ್ ಉಡುಪುಗಳ ಬ್ರ್ಯಾಂಡ್ ಆಗಿದೆ.

ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣದ ರೂಪರೇಖೆಯನ್ನು ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ

2006 ರವರೆಗೂ ಸೈಮನ್ ಅವರು ಟ್ರೆಂಟ್ ಕಂಪನಿಯನ್ನು ಮುನ್ನಡೆಸಿದರು. ಅದಾದ ಬಳಿಕ ನಿವೃತ್ತರಾದರು. ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ರತನ್ ಟಾಟಾ ನಿಧನದ ಬಳಿಕ ಅವರ ಅಂತಿಮ ವಿಧಿವಿಧಾನ ಕಾರ್ಯಕ್ರಮದಲ್ಲಿ ಸಿಮೋನ್ ಅವರು ನಟಿಸಿದ್ದರು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *