ಬರುತ್ತಿದೆ ‘ಮ್ಯಾಕ್ಸ್’ ಟ್ರೈಲರ್: ದಿನಾಂಕ ಘೋಷಿಸಿದ ಚಿತ್ರತಂಡ

ಬರುತ್ತಿದೆ ‘ಮ್ಯಾಕ್ಸ್’ ಟ್ರೈಲರ್: ದಿನಾಂಕ ಘೋಷಿಸಿದ ಚಿತ್ರತಂಡ


ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಟ್ರೈಲರ್ ಕುತೂಹಲ ಮೂಡಿಸಲು ಯಶಸ್ವಿಯಾಗಿದ್ದು, ಇದೇ ತಿಂಗಳು ಸಿನಿಮಾ ಬಿಡುಗಡೆ ಆಗಲಿದೆ. ದರ್ಶನ್ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೇ ಸುದೀಪ್ (ಸುದೀಪ್) ಅವರ ಹೊಸ ಸಿನಿಮಾದ ಟ್ರೈಲರ್ ಸಹ ಬಿಡುಗಡೆಯಾಗುತ್ತಿದೆ. ಸುದೀಪ್ ಅವರ ‘ಮಾರ್ಕ್’ ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದರೆ, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

‘ಮಾರ್ಕ್’ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 07 ರಂದು ಬೆಳಿಗ್ಗೆ 11:58ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿದ್ದು, ‘ನಿರೀಕ್ಷೆಯ ಅವಧಿ ಕಿರಿದಾಗಿದೆ, ಇನ್ನೊಂದು ಸೂರ್ಯೋದಯಕ್ಕೆ ನಿರೀಕ್ಷೆಗಳು ಅಂತ್ಯವಾಗಲಿವೆ. ಮಾರ್ಕ್’ ಸಿನಿಮಾದ ಟ್ರೈಲರ್, ಆಕ್ಷನ್ ಮತ್ತು ಭಾವನೆಗಳ ಸ್ಪೋಟಕ ಅಲೆಯನ್ನೇ ತರಲಿದೆ ಎಂದಿದೆ. ಸುದೀಪ್ ಅವರು ಕಪ್ಪು ಬಣ್ಣದ ಹುಡಿ ಧರಿಸಿ ಸಿಗರೇಟು ಹಿಡಿದಿರುವ ಪೋಸ್ಟರ್ ಅನ್ನು ಪೋಸ್ಟ್‌ನ ಜೊತೆಗೆ ಹಂಚಿಕೊಂಡಿದ್ದಾರೆ ಚಿತ್ರತಂಡ.

ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಮ್ಯಾಕ್ಸ್’ನ ತಂಡವೇ ‘ಮಾರ್ಕ್’ ಸಿನಿಮಾಕ್ಕೂ ಕೆಲಸ ಮಾಡಿದೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ‘ಮ್ಯಾಕ್ಸ್’ ಸಿನಿಮಾವನ್ನು ತಮಿಳಿನ ಕಲೈಪುಲಿ ಎಸ್ ತನು ಹಾಗೂ ಸುದೀಪ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಆದರೆ ‘ಮಾರ್ಕ್’ ಸಿನಿಮಾವನ್ನು ಸತ್ಯಜ್ಯೋತಿ ಫಿಲಂಸ್ ಮತ್ತು ಸುದೀಪ್ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಫೋಟೋಸ್

ಪಾತ್ರವರ್ಗವು ಬದಲಾಗಿದೆ ಹೊರತಾಗಿ ತಂತ್ರಜ್ಞರು ‘ಮ್ಯಾಕ್ಸ್’ ಗೆ ಕೆಲಸ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎಸ್ ಆರ್ ಗಣೇಶ್ ಬಾಬು ಸಂಕಲನ ಮಾಡಿದ್ದಾರೆ. ಸಿನಿಮಾಟೊಗ್ರಫಿ ಶೇಖರ್ ಚಂದ್ರ ಅವರದ್ದಾಗಿದೆ. ‘ಮ್ಯಾಕ್ಸ್’ಗೂ ಇವರೇ ಸಿನಿಮಾಟೋಗ್ರಫಿ ಮಾಡಿದ್ದರು. ‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಜೊತೆಗೆ ನಿಶ್ವಿಕಾ ನಾಯ್ಡು, ರೋಹಿಣಿ ಪ್ರಕಾಶ್ ನಟಿಸಿದ್ದಾರೆ. ಇನ್ನೇನು ಕಲಾವಿದರು ಯಾರ್ಯಾರು ಎಂಬುದು ನಾಳೆ (ಡಿಸೆಂಬರ್ 07) ತಿಳಿಯಲಿದೆ. ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *