Headlines

‘ದಿ ಡೆವಿಲ್’ ಸಿನಿಮಾದಲ್ಲೂ ಗಿಲ್ಲಿ ಹವಾ: ಕಾಕ್ರೋಚ್ ಸುಧಿ ಹೇಳೋದೇನು?

‘ದಿ ಡೆವಿಲ್’ ಸಿನಿಮಾದಲ್ಲೂ ಗಿಲ್ಲಿ ಹವಾ: ಕಾಕ್ರೋಚ್ ಸುಧಿ ಹೇಳೋದೇನು?


‘ದಿ ಡೆವಿಲ್’ ಸಿನಿಮಾದಲ್ಲೂ ಗಿಲ್ಲಿ ಹವಾ: ಕಾಕ್ರೋಚ್ ಸುಧಿ ಹೇಳೋದೇನು?

ನಟ ಕಾಕ್ರೋಚ್ ಸುಧಿ (ಜಿರಳೆ ಸುಧಿ) ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಹಲವು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಈ ನಡುವೆ ಅವರು ಟಿವಿ9 ಜೊತೆ ಮಾತಿಗೆ ಸಿಕ್ಕಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ (ಗಿಲ್ಲಿ ನಟ) ಬಗ್ಗೆ ಸುಧಿ ಮಾತಾಡಿದ್ದಾರೆ. ದರ್ಶನ್ ಅಭಿನಯದ ‘ದಿ ಡೆವಿಲ್’ (ದೆವ್ವದ ಚಲನಚಿತ್ರ) ಸಿನಿಮಾದಲ್ಲಿ ಗಿಲ್ಲಿ ನಟ ಒಂದು ಪಾತ್ರ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ನಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ತಮಗೆ ಬಹಳ ಸಂತೋಷವಾಗಿದೆ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ. ‘ಗಿಲ್ಲಿ ಗೆದ್ದರೆ ನನಗೆ ಖುಷಿ. ಅವನು ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದು ಖುಷಿ. ನಮಗೆ ನಮ್ಮ ಸ್ನೇಹಿತ ಎಲ್ಲೋ ಒಂದು ಕಡೆ ಬರುತ್ತಾನೆ ಎಂದಾಗ ಸಂತೋಷವಾಗುತ್ತದೆ. ನಮಗೂ ಕೂಡ ನಮ್ಮ ಪೋಸ್ಟರ್ ಎಲ್ಲೋ ಮೂಲೆಯಲ್ಲಿ ಬಂದಾಗ ಅಷ್ಟೇ ಖುಷಿ ಆಗುತ್ತಿದೆ’ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *