
ಮಡಿಕೇರಿ, ಡಿಸೆಂಬರ್ 07: ಕೊಡಗಿನಲ್ಲಿ ಕೂರ್ಗ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಬರಿಗಾಲಿನ ಮ್ಯಾರಥಾನ್. ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಡೆದ ಓಟವನ್ನು ಬಾಲಿವುಡ್ ನಟ ಮಿಲಿಂದ್ ಸುಮನ್ ಉದ್ಘಾಟಿಸಿದರು. 42K, 15K, 10K, ಮತ್ತು 5K ವಿಭಾಗಗಳಲ್ಲಿ ದೇಶದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಚಿಕ್ಕ ಮಕ್ಕಳೂ ಸೇರಿದಂತೆ ಎಲ್ಲಾ ವಯೋಮಾನದವರೂ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.