ಹಾವೇರಿ, ಡಿಸೆಂಬರ್ 07: ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ಕಠಿಣ ನಿಯಮಾವಳಿಗಳೊಂದಿಗೆ ನಡೆದ ಪರಿಣಾಮ ಪರೀಕ್ಷಾರ್ಥಿಗಳು ತೀವ್ರ ಗೊಂದಲ ಮತ್ತು ತೊಂದರೆ ಅನುಭವಿಸಿದರು. ಹಾವೇರಿಯ ಪಿಯು ಮಹಿಳಾ ಕಾಲೇಜಿನಲ್ಲಿ ಪರೀಕ್ಷಾರ್ಥಿಗಳು ಧರಿಸಿರುವ ಗಾಜಿನ ಬಳೆಗಳು, ಕಿವಿ ಓಲೆಗಳು ಮತ್ತು ಚಪ್ಪಲಿಗಳ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಸಿಬ್ಬಂದಿ ತೆಗೆಸಿದ ಪ್ರಸಂಗ ನಡೆದಿದೆ. ಪರೀಕ್ಷಾರ್ಥಿಗಳು ತಾವು ಧರಿಸಿದ್ದ ಆಭರಣಗಳನ್ನು ತೆಗೆದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಅನೇಕ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರೂ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಮಾತ್ರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರೋದು ಕಂಡುಬಂತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.