ಇನ್ನೇನು ಕೆಲವೇ ದಿನಗಳಲ್ಲಿ ‘ಮಾರ್ಕ್’ ಸಿನಿಮಾ (ಮಾರ್ಕ್ ಕನ್ನಡ ಚಲನಚಿತ್ರ) ಬಿಡುಗಡೆ ಆಗಲಿದೆ. ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ತಯಾರಿ ನಡೆದಿದೆ. ಈಗ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಟ್ರೇಲರ್ (ಮಾರ್ಕ್ ಟ್ರೈಲರ್) ನೋಡಿ ಎಲ್ಲರೂ ಮೆಚ್ಚಿಗೆ ಸೂಚಿಸಿದ್ದಾರೆ. ‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಆ್ಯಕ್ಷನ್ ಅಬ್ಬರ ಇರಲಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶನ ಮಾಡಿದ್ದಾರೆ.
‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮಾರ್ಕ್’ ಸಿನಿಮಾ ನಿರ್ಮಾಣವಾಗಿದೆ. ಈ ಮೊದಲು ಇದೇ ಕಾಂಬಿನೇಷನ್ ನಲ್ಲಿ ನಿರ್ಮಾಣ ಆಗಿದ್ದ ‘ಮ್ಯಾಕ್ಸ್’ ಸಿನಿಮಾ ಕೂಡ ಡಿಸೆಂಬರ್ 25 ರಂದು ಬಿಡುಗಡೆ ಆಗಿ ಧೂಳೆಬ್ಬಿಸಿತ್ತು. ಈ ವರ್ಷ ಡಿಸೆಂಬರ್ 25ಕ್ಕೆ ‘ಮಾರ್ಕ್’ ಸಿನಿಮಾ ಎಲ್ಲ ಕಡೆ ಅಬ್ಬರಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.
‘ಮಾರ್ಕ್’ ಸಿನಿಮಾದ ಟ್ರೇಲರ್:
ಅಜನೀಶ್ ಲೋಕನಾಥ್ ಅವರು ‘ಮಾರ್ಕ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಕಥೆ ಏನು ಬಗ್ಗೆ ಟ್ರೇಲರ್ ಮೂಲಕ ಸುಳಿವು ನೀಡುತ್ತದೆ. ಮಕ್ಕಳ ಅಪಹರಣದ ಕಹಾನಿಯನ್ನು ಈ ಸಿನಿಮಾ ಹೊಂದಿದೆ. ಮಕ್ಕಳನ್ನು ಕಿಡ್ನಾಪ್ ಮಾಡುವ ಖಳರಿಗೆ ಮಾರ್ಕ್ ತಕ್ಕ ಪಾಠ ಕಲಿಸುತ್ತಾನೆ. ಅದು ಹೇಗೆ ಚಿತ್ರಮಂದಿರದಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.