ಒಮೆಗಾದಿಂದ ಉಚಿತ ತರಬೇತಿ ಕಾರ್ಯಾಗಾರ; ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಕುಟುಂಬದವರಿಗೆ ಹೊಲಿಗೆಯಂತ್ರ ವಿತರಣೆ

ಒಮೆಗಾದಿಂದ ಉಚಿತ ತರಬೇತಿ ಕಾರ್ಯಾಗಾರ; ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಕುಟುಂಬದವರಿಗೆ ಹೊಲಿಗೆಯಂತ್ರ ವಿತರಣೆ


ಬೆಂಗಳೂರು, ಡಿಸೆಂಬರ್ 7: ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಅಭ್ಯಾಸ, ಸಮಯಪಾಲನೆ ನಿಯಮಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸುವ ವಿಸ್ತೃತ ಕಾರ್ಯಾಗಾರ ಬೆಂಗಳೂರಿನ ಹಲಸೂರಿನಲ್ಲಿ ಇತ್ತೀಚೆಗೆ (ನ. 29). ಚರ್ಚೆ, ಚಿಂತನೆ, ಸಂವಾದ ರೂಪದ ಉಚಿತ ತರಬೇತಿ ಕಾರ್ಯಾಗಾರ (ಒಮೆಗಾ ಕ್ಯಾಬ್ಸ್’ ಉಚಿತ ಕಾರ್ಯಾಗಾರ) ಜೊತೆಗೆ ಉತ್ತಮ ಚಾಲಕರನ್ನು ಪುರಸ್ಕರಿಸಲಾಯಿತು.

ಕಾರ್ಪೋರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆ ಮಾಡುತ್ತಿರುವ ಒಮೆಗಾ ಕಂಪನಿಯು ಈ ತರಬೇತಿ ಕಾರ್ಯಾಗಾರದ ನಂತರ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಕ್ಯಾಬ್ ಚಾಲಕರ ಮಕ್ಕಳಾದ ಲಿಷಿತಾ ಮುದ್ದುರಾಜ್ (SSLC 97%), ಡಿಂಪಲ್ ಸುರೇಶ ಮಾನೆ (SSLC 93%), ಉನ್ನತಿ ರವೀಂದ್ರ (SSLC 89%), ನಿವೇದಿತಾ ರಾಮಕೃಷ್ಣ (SSLC 80%), ಧ್ರ89% ಪೃಥ್ವಿ ರಾಜೇಶ್ (PUC 82%), ಶ್ವೇತಾ ರಾಘಣ್ಣ (B.Com 91%), ಮಹಿಮಾ ಶ್ಯಾಮ್ (B.Com 89%), ಧಿಯಾ ಸುರೇಶ ಮಾನೆ (MBBS 2 ನೇ ವರ್ಷ 71%) ವಿದ್ಯಾರ್ಥಿವೇತನವನ್ನು ಪಡೆದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಂತರ ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಿಸಲಾಯಿತು. ಪ್ರಯೋಜನಗಳು ಈ ಸೌಲಭ್ಯದ ಪ್ರಯೋಜನವನ್ನು ಪಡೆದು ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ಸಹಾಯವಾಗಲಿ ಎಂಬ ಆಶಯ ಈ ಉಚಿತ ಹೊಲಿಗೆಯಂತ್ರ ವಿತರಣಾ ಯೋಜನೆಯಾಗಿದೆ. ಮಹಿಳಾ ಸಬಲೀಕರಣಕ್ಕೆ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡುವ ಸದುದ್ಧೇಶದಿಯೋದ ಈ ಯೋಜನೆ ಜಾರಿಗೆ ಬಂದಿದೆ. ಬಸವಣ್ಣ, ರವೀಶ್, ಮಲ್ಲೇಶ್, ನಿರಂಜನ್, ಸಂತೋಷ್ ಕುಟುಂಬದವರು ಉಚಿತ ಹೊಲಿಗೆಯಾತ್ರೆ ಪಡೆದರು.

ಕಳೆದ ಕೆಲವು ವರ್ಷಗಳಿಂದ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಹೊಲಿಗೆಯಂತ್ರ ನೀಡಿದ್ದ ಒಮೆಗಾ ಸಂಸ್ಥೆ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರಿಸುತ್ತಾ ಉದ್ಯಮ ನಡೆಸುತ್ತಿದೆ.

ಕಾರ್ಯಕ್ರಮದಲ್ಲಿ ಅನುಭವಿ ತರಬೇತುದಾರ್ತಿ ಡಾ. ಉಷಾ ಮೋಹನ್, ಹಲಸೂರು ಟ್ರಾಫಿಕ್ ಎ.ಎಸ್.ಐ ಆಗಿರುವ ಶ್ರೀನಾಥ್ ಎನ್., ಮತ್ತು ಟ್ರಾಫಿಕ್ ಪೊಲೀಸ್ ರಮೇಶ್, ಒಮೆಗಾ ಸಂಸ್ಥೆಯ ಸಿಬ್ಬಂದಿಗಳಾದ ಗಣಪತಿ, ನವೀನ, ಚೇತನ್, ಲವೇಶ, ಕಾಸಿಫ್, ರಘುರಾಜ್, ಪ್ರಜ್ವಲ್ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಚಾಲಕರಿಗೆ ಮೊಬೈಲ್ ಹೋಲ್ಡರ್ ನೀಡಲಾಯಿತು.

ಒಮೇಗಾ ಕ್ಯಾಬ್ಸ್ನ ವೆಬ್ ಸೈಟ್ ವಿಳಾಸ: www.omegacabs.in

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *