Headlines

‘ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್

‘ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್


ಡಿಸೆಂಬರ್ ತಿಂಗಳಿನಲ್ಲಿ ಕನ್ನಡ ಸಿನಿಮಾ ಪ್ರೇಮಿಗಳಿಗೆ (Movie Lovers) ಹಬ್ಬವೇ ಆಗಲಿದೆ. ಈ ತಿಂಗಳ ಸಾಲು-ಸಾಲಾಗಿ ಮೂರು ದೊಡ್ಡ ಸಿನಿಮಾಗಳು ತೆರೆಗೆ ಬರಲಿದೆ, ಭರ್ಜರಿ ಪೈಪೋಟಿ ಶುರುವಾಗಿದೆ. ಮೊದಲು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ ’45’ ಬಿಡುಗಡೆ ಆಗಲಿದೆ. ಅದೇ ದಿನ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಸಹ ತೆರೆಗೆ ಬರಲಿದೆ. ಇಂದಷ್ಟೇ ‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾ ರಿಚ್ ಆಗಿ ಕಾಣುತ್ತಿದೆ. ಸಿನಿಮಾದ ಚಿತ್ರೀಕರಣದ ಬಗ್ಗೆ ಸುದೀಪ್ ವಿವರಿಸಿದ್ದು ಅವರ ಮಾತುಗಳಿಂದ ‘ಮಾರ್ಕ್’ ಎಷ್ಟು ಬೃಹತ್ ಆದ ಸಿನಿಮಾ ಎಂಬುದು ತಿಳಿದು ಬರುತ್ತಿದೆ.

‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಇಂದು (ಡಿಸೆಂಬರ್ 07) ಸುದ್ದಿಗೋಷ್ಠಿ ನಡೆಸಲಾಯಿತು. ಸುದೀಪ್, ರಾಕ್‌ಲೈನ್ ವೆಂಕಟೇಶ್, ಪ್ರೇಮ್, ಸುದೀಪ್ ಪತ್ನಿ ಪ್ರಿಯಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಅವರು ‘ಮಾರ್ಕ್’ ಸಿನಿಮಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರ.

‘ಮಾರ್ಕ್’ ಸಿನಿಮಾದ ಚಿತ್ರೀಕರಣದ ಬಗ್ಗೆ ಮಾತನಾಡಿದ ಸುದೀಪ್, ‘ಈ ಸಿನಿಮಾಕ್ಕೆ ಒಟ್ಟು 107 ದಿನಗಳ ಚಿತ್ರೀಕರಣವನ್ನು ನಾವು ಮಾಡಿದ್ದೇವೆ, 166 ಕಾಲ್ ಶೀಟ್‌ಗಳನ್ನು ನಾವು ಮಾಡಿದ್ದೇವೆ. ಸುಮಾರು 80-90 ಲೊಕೇಶನ್‌ಗಳಲ್ಲಿ ಚಿತ್ರಗಳು ಮಾಡಿದ್ದೀವಿ, ಸುಮಾರು 18 ರಿಂದ 20 ಸೆಟ್‌ಗಳನ್ನು ನಾವು ನಿರ್ಮಿಸಿದ್ದೀವಿ. ಈ ಸಿನಿಮಾ ಪ್ರಾರಂಭವಾಗಿ ಅಂತ್ಯ ಆಗುವವರೆಗೆ ಒಂದು ಲಕ್ಷ ಜನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ’ ಎಂದು ಲೆಕ್ಕ ಕೊಟ್ಟರು ಸುದೀಪ್.

ಇದನ್ನೂ ಓದಿ:ಮಾರ್ಕ್ ಟ್ರೈಲರ್: ‘ಮಾರ್ಕ್’ ಕಥೆಯ ಬಗ್ಗೆ ಸುಳಿವು ನೀಡಿದ ಟ್ರೇಲರ್: ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಮಾಸ್

‘ಸಿನಿಮಾದ ಸಂಖ್ಯೆಗಳು ಎಲ್ಲವೂ ದೊಡ್ಡದಾಗಿಯೇ ಆದರೆ ಚಿಕ್ಕದಾಗಿರುವುದು ನಿದ್ದೆ ಮಾಡಿದ ಸಮಯ, ವಿಶ್ರಾಂತಿ ಪಡೆದ ಸಮಯ. ಇದೇ ಸಿನಿಮಾದ ಚಿತ್ರೀಕರಣಕ್ಕೆ ನಾನು ಶಾಲೆಗೆ ಹೋಗಿದ್ದೆ. ಅಲ್ಲಿ ರಾತ್ರಿ ಮೂರು ಗಂಟೆಯವರೆಗೆ ಚಿತ್ರೀಕರಣ ಮಾಡಿದೆವು. ನಾನು ಮೂರು ಗಂಟೆಗೆ ಚಿತ್ರೀಕರಣ ಮುಗಿಸಿಕೊಂಡು ಹೊರಗೆ ಬರುತ್ತಿತ್ತು ಆಗ ಇನ್ನೊಂದು ಬ್ಯಾಚ್ ಒಳಗೆ ಹೋಗುತ್ತಿದ್ದೆ. ಹೀಗೆ ಬಿಡುವಿಲ್ಲದೆ ಚಿತ್ರಗಳನ್ನು ನಾವು ಮಾಡಿದ್ದೇವೆ’ ಎಂದು ಸುದೀಪ್.

‘ಅಸಲಿಗೆ ಈ ಸಿನಿಮಾಕ್ಕೆ ನಿಜವಾದ ಇಬ್ಬರು ನಾಯಕರೆಂದರೆ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್. ಇಬ್ಬರೂ ಸಹ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಹಗಲು ರಾತ್ರಿಗಳನ್ನು ಒಂದು ಮಾಡಿ ಕೆಲಸ ಮಾಡಿದೆ’ ಎಂದು ಕೊಂಡಾಡಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ‘ನನಗೆ ಕೆಲಸ ಮಾಡುವುದು ಇಷ್ಟ, ಕೆಲಸ ಮಾಡಿ ದಣಿಯುವುದು ಇಷ್ಟ. ನನಗೆ ಅಂತಿಮವಾಗಿ ಖುಷಿ ಸಿಗುವುದು ಕೆಲಸದಲ್ಲಿ, ನನ್ನ ನಿರ್ಮಾಪಕರ ಖುಷಿಯಲ್ಲಿ. ನನ್ನ ನಿರ್ಮಾಪಕರ ಜೇಬು ತುಂಬಿದರೆ ನನಗೆ ಖುಷಿ’ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:20 pm, ಭಾನುವಾರ, 7 ಡಿಸೆಂಬರ್ 25



Source link

Leave a Reply

Your email address will not be published. Required fields are marked *