Video: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ

Video: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ


ತಂದೆ ತಾಯಿಯರೇ (ಪೋಷಕರು) ಹಾಗೆ, ತಮಗೆಷ್ಟೇ ನೋವು ಕಷ್ಟ ಇರಲಿ, ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ತಾರೆ. ಹೀಗಿರುವಾಗ ಮಕ್ಕಳು ತಮ್ಮ ವಿಶೇಷ ದಿನಗಳಲ್ಲಿ ಮರೆಯಲಾಗದ ಉಡುಗೊರೆ (ಉಡುಗೊರೆ) ನೀಡಿದ್ರೆ ಆ ಕ್ಷಣವನ್ನು ವಿವರಿಸಲು ಅಸಾಧ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗಳೊಬ್ಬಳು ತನ್ನ ತಾಯಿ ಹುಟ್ಟುಹಬ್ಬದ ದಿನ ಚಿನ್ನದ ಓಲೆಯನ್ನು ಉಡುಗೊರೆಯಾಗಿ ನೀಡಿ ಸಂತೋಷ ಪಡಿಸಿದ್ದಾಳೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪರ್ಣಾ ದೇವ್ಯಾಲ್ (aparna_devyal) ಹೆಸರಿನ ಖಾತೆಯಲ್ಲಿ ಈ ಹೃದಯ ಸ್ಪರ್ಶಿ ವಿಡಿಯೋ ಹಂಚಿಕೊಂಡು, ನಿಮಗೆ ಪ್ರಪಂಚದ ಎಲ್ಲಾ ಸಂತೋಷವನ್ನು ನಾನು ಬಯಸುತ್ತೇನೆ ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೋದಲ್ಲಿ ಯುವತಿಯು ಮನೆಗೆ ಹಿಂದಿರುಗುವ ಮೊದಲು ಆಭರಣದ ಅಂಗಡಿಗೆ ಹೋಗಿ ಚಿನ್ನದ ಕಿವಿಯೋಲೆ ಖರೀದಿಸಿ ಗಿಫ್ಟ್ ಪ್ಯಾಕ್ ಮಾಡಿದ್ದಾಳೆ. ಮನೆಗೆ ಬಂದು ಬರ್ತ್ಡೇಗೆ ಸ್ಪೆಷಲ್ ಉಡುಗೊರೆಯನ್ನು ತನ್ನ ತಾಯಿಗೆ ನೀಡಿದ್ದಾಳೆ. ಮಗಳು ನೀಡಿದ ಗಿಫ್ಟ್ ನೋಡಿ ಒಂದು ಕ್ಷಣ ಶಾಕ್ ಆಗುತ್ತಿದೆ. ಆ ಕಿವಿಯೋಲೆ ತೊಟ್ಟು ಮಗಳನ್ನು ಅಪ್ಪಿ ಮುದ್ದಾಡುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ

ಈ ವಿಡಿಯೋ 5.3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಈ ವಿಡಿಯೋ ತಾಯಿ ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಅಧಿಕಾರಿಗಳು, ಈ ನನ್ನ ಕಣ್ಣಲ್ಲಿ ನೀರು ತರಿಸಿತು. ಮತ್ತೊಬ್ಬರು, ತಾಯಂದಿರು ಯಾವುದೇ ಉಡುಗೊರೆಗಳನ್ನು ಬಯಸುವುದಿಲ್ಲ, ಸರ್ಪ್ರೈಸ್ ಗಿಫ್ಟ್ ನೋಡಿ ಭಾವುಕರಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:53 pm, ಭಾನುವಾರ, 7 ಡಿಸೆಂಬರ್ 25





Source link

Leave a Reply

Your email address will not be published. Required fields are marked *