Headlines

7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ: ಈಗ ತಾನೇ ಕಣ್ಬಿಟ್ಟು ನೋಡುತ್ತಿರುವಾಗಲೇ ಅನಾಥವಾದ ಮಗು

7 ದಿನದ ಮಗು ಬಿಟ್ಟು  ದಂಪತಿ ಆತ್ಮಹತ್ಯೆ: ಈಗ ತಾನೇ ಕಣ್ಬಿಟ್ಟು ನೋಡುತ್ತಿರುವಾಗಲೇ ಅನಾಥವಾದ ಮಗು


ಕೋಲಾರ, ಡಿಸೆಂಬರ್ 07):ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ (ದಂಪತಿ) ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ (ಕೋಲಾರ) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಫರಿಜಾ(22), ರೆಹಮಾನ್(28) ಆತ್ಮಹತ್ಯೆಗೆ ಶರಣಾದ ದಂಪತಿ. ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ರಾಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಫರಿಜಾ ಹಾಗೂ ರೆಹಮಾನ್ ವಿಷ ಸೇವಿಸಿ ಮನೆಯಲ್ಲಿ ಅಕ್ಕಪಕ್ಕದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಪ್ರಸ್ತುತ ತಂದೆ ತಾಯಿಯ ಮಧ್ಯೆ ಏನು ಅರಿಯದ ಮಗು ಅಳುತ್ತಿದೆ, ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ತಾಯಿಯ ಹೊಟ್ಟೆಯಿಂದ ಹೊರಬಂದು ಏಳು ದಿನವಾಗಿರುವ ಪುಟ್ಟ ಕಂದಮ್ಮ ಈಗ ತಾನೆ ಕಣ್ಣು ಬಿಟ್ಟು ನೋಡಲು ಪ್ರಾರಂಭಿಸಿದೆ. ಆದರೆ, ಇದೀಗ ಪುಟ್ಟ ಮಗುವಿಗೆ ಹಾರೈಕೆ ಮಾಡುವವರೇ ಇಲ್ಲದಂತಾಗಿದ್ದರೆ, ಚಿಕ್ಕಂದಿನಲ್ಲೇ ಕಣ್ಣು ಬಿಟ್ಟು ನೋಡುವವರಷ್ಟರಲ್ಲೇ ಮಗು ತನ್ನ ತಂದೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿದೆ.



Source link

Leave a Reply

Your email address will not be published. Required fields are marked *