ರಾಜಕಾರಣಿಗಳು (ರಾಜಕಾರಣಿಗಳು) ಎದುರಾಳಿಗಳನ್ನು ಮೂದಲಿಸುವುದು, ಹೀಗೆ ಮಾಡುವುದು, ಅವಕಾಶ ಸಿಕ್ಕಾಗೆಲ್ಲ ವ್ಯಂಗ್ಯ ಮಾಡುವುದು ಈಗಿನ ರಾಜಕೀಯದಲ್ಲಿ ಸಾಮಾನ್ಯ. ಆದರೆ ಈ ಮೂದಲಿಕೆ, ವಿರೋಧ ಎಲ್ಲವೂ ಚುನಾವಣೆಯ ಸಮಯದಲ್ಲಿ, ಮಾಧ್ಯಮದ ಮೈಕ್ಗಳು ಎದುರಾದಾಗ ಮತ್ತು ಶಾಸನ ಸಭೆಯಲ್ಲಿ ಮಾತ್ರ. ಮಾಧ್ಯಮಗಳ ಮುಂದೆ ಹಾವು-ಮುಂಗುಸಿಯಂತೆ ಕಿತ್ತಾಡುವ ರಾಜಕೀಯ ನಾಯಕರು ತೆರೆ ಮರೆಯಲ್ಲಿ ಗಳಸ್ಯ-ಕಂಠಸ್ಯ ಎಂಬಂತಿರುತ್ತಾರೆ. ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್, ಫೈರ್ ಬ್ರ್ಯಾಂಡ್ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ವಿಪಕ್ಷದವರನ್ನು ಕಟು ಶಬ್ದಗಳನ್ನು ಬಳಸಿ ಟೀಕಿಸುತ್ತಾರೆ. ಆದರೆ ಈಗ ‘ವಿರೋಧಿ’ಗಳೊಟ್ಟಿಗೆ ವೇದಿಕೆ ಏರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಟಿಎಂಸಿ, ಎನ್ ಸಿಪಿ ಮತ್ತು ಬಿಜೆಪಿ ಪರಸ್ಪರ ಎದುರಾಳಿ ಪಕ್ಷ. ಟಿಎಂಸಿಯ ಸಂಸದೆ ಮಹುವಾ ಮೋಯಿತ್ರಾ ಮತ್ತು ಎನ್ ಪಿಪಿಯ ಸುಪ್ರಿಯಾ ಸುಳ್ಯಕ್ಕೆ ಅವಕಾಶ ಸಿಕ್ಕಾಗೆಲ್ಲ ಆಡಳಿತಾರೂಢ ಬಿಜೆಪಿಯ ಟೀಕೆ ಮಾಡುತ್ತಲೇ ಇರುತ್ತಾರೆ. ಲೋಕಸಭೆಯಲ್ಲಿ ಹಲವು ಬಾರಿ ಈ ಇಬ್ಬರು ಆಡಳಿತ ಪಕ್ಷದ ವಿರುದ್ಧ ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ನಟಿ, ಸಂಸದೆ ಕಂಗನಾ ರನೌತ್ ಸಹ ವಿಪಕ್ಷಗಳ ಬಗ್ಗೆ ವಿಪಕ್ಷದ ನಾಯಕರ ಬಗ್ಗೆ ಕಟು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಈಗ ಈ ಮೂವರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಡ್ಯಾನ್ಸ್ ಪ್ರದರ್ಶನವನ್ನು ರಂಜಿಸಿದ್ದಾರೆ.
ನವೀನ್ ಜಿಂದಾಲ್ ಅವರ ಮಗಳ ಮದುವೆಯಲ್ಲಿ ಕಂಗನಾ ರನೌತ್, ಮಹುವಾ ಮೊಯಿತ್ರಾ, ಸುಪ್ರಿಯಾ ಸುಲೆ pic.twitter.com/lARD6SVRuU
— ಅಂಗೂರಿ (@Rodrigo60776560) ಡಿಸೆಂಬರ್ 6, 2025
ಬಿಜೆಪಿ ಸಂಸದ ಹಾಗೂ ಖ್ಯಾತ ಉದ್ಯಮಿಯೂ ಆಗಿರುವ ನವೀನ್ ಜಿಂದಾಲ್ ಅವರ ಪುತ್ರಿಯ ವಿವಾಹ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಟಿಎಂಸಿಯ ಸಂಸದೆ ಮಹುವಾ ಮೋಯಿತ್ರಾ, ಪಿಪಿಯ ಸುಪ್ರಿಯಾ ಸುಳೆ ಮತ್ತು ಕಂಗನಾ ರನೌತ್ ಅವರು ವೇದಿಕೆಯ ಮೇಲೆ ಹತ್ತಿ ಬಾಲಿವುಡ್ ಹಾಡಿಗೆ ಸಖತ್ ಆಗಿ ನೃತ್ಯ ಮಾಡಿದ್ದಾರೆ. ಇದೀಗ ಇವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.
ಇದನ್ನೂ ಓದಿ:’ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್
ನವೀನ್ ಜಿಂದಾಲ್ ಅವರ ಪುತ್ರಿ ಯಶಸ್ವಿನಿ ಅವರು ಶಾಶ್ವತ್ ಅವರೊಟ್ಟಿಗೆ ವಿವಾಹವಾಗಿದ್ದು ವಿವಾಹ ಸಮಾರಂಭ ಬಲು ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ ಪ್ರಮುಖರು ಭಾಗಿ ಆಗಿದ್ದಾರೆ. ಮಹುವಾ ಮೋಯಿತ್ರಾ, ಎನ್ ಪಿಪಿಯ ಸುಪ್ರಿಯಾ ಸುಳೆ ಮತ್ತು ಕಂಗನಾ ರನೌತ್ ಅವರು ವಿವಾಹದ ಮೆಹಂದಿ ಕಾರ್ಯಕ್ರಮದ ವೇದಿಕೆಯಲ್ಲಿ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಮ್’ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಕಮೆಂಟುಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ