Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 8ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 8ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 8ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ದಿನದ ಕೆಲಸಗಳಿಂದ ತುಂಬಿ ಹೋಗಲಿದೆ. ಜಾಣ್ಮೆಯ ಮತ್ತು ಮಿತವಾದ ಮಾತು ಗೌರವ ತರುತ್ತದೆ. ಇನ್ನು ಕೆಲವು ಕಡೆ ಮಾತನಾಡಲು ನಿಮ್ಮ ಕಾರ್ಯವೇ ಮುಖ್ಯವೆನ್ನಿಸುತ್ತದೆ. ಅಂದುಕೊಂಡಂತೆ ನಿಮಗೆ ಬರಬೇಕಾದ ಆದಾಯ ಬಾರದೆ ತಡ ದಿನ. ಅನಗತ್ಯಗಳನ್ನು ತಪ್ಪಿಸಿ, ವೆಚ್ಚವನ್ನು ಮಾತ್ರ ಖರ್ಚು ಮಾಡಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮಗೆ ಬೆಂಬಲವಾಗಿ ಇರುತ್ತದೆ. ಪ್ರೀತಿಯಲ್ಲಿ ನಂಬಿಕೆ ಅತ್ಯಂತ ಮುಖ್ಯ, ಅನುಮಾನದಿಂದ ನೆಮ್ಮದಿ ಹಾಳಾಗುತ್ತದೆ. ತಲೆನೋವು ಅಥವಾ ಮಾನಸಿಕ ದಣಿವು ಕಾಣಲಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಳ್ಳಿ. ಏಕಾಗ್ರತೆ ಸಾಧಿಸುವುದಕ್ಕೆ ಹರಸಾಹಸ ಪಡುತ್ತಿದ್ದಲ್ಲಿ ಮನಸ್ಸನ್ನು ನಿಯಂತ್ರಿಸಿ. ವಿಶೇಷವಾಗಿ ಹೆಚ್ಚಾಗಿ ಬೇಡ, ನೀವು ಹೇಳಬೇಕಾದ ವಿಷಯಗಳನ್ನು ಸರಳವಾಗಿ ತಿಳಿಸಿ. ದೈವಸ್ಮರಣೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ನೆಮ್ಮದಿಯೂ ಸಿಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಹೊಸ ಅವಕಾಶಗಳೊಂದಿಗೆ ನಿಮಗೆ ಈ ದಿನ ಪ್ರಾರಂಭವಾಗಲಿದೆ. ಕೆಲಸದಲ್ಲಿ ನಿಮಗೆ ಸಿಗುವಂಥ ಅವಕಾಶಗಳು ನಿಮ್ಮ ಕೌಶಲಕ್ಕೆ ಸರಿಯಾಗಿ ಹೊಂದಾಣಿಕೆ ಆಗಲಿವೆ. ಅನಗತ್ಯವಾಗಿ ಯಾವುದರಲ್ಲಿಯೂ ತಡ ಆಗುವುದನ್ನು ತಪ್ಪಿಸಿ, ಕೆಸ್ಪಷ್ಟ ಯೋಜನೆಯನ್ನು ಇರಿಸಿಕೊಳ್ಳಿ. ಹೊಸದಾಗಿ ಹೂಡಿಕೆ ಮಾಡುವವರಿಗೆ ಜಾಗ್ರತೆ ಅಗತ್ಯ. ಇನ್ನು ಇತರರ ಬಲವಂತಕ್ಕೋ ಅಥವಾ ಒತ್ತಡಕ್ಕೋ ಹಣದ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪ ಉಂಟಾದಾಗ ಮೃದುವಾದ ಮಾತುಗಳನ್ನಾಡಿ, ಅದನ್ನು ಪರಿಹರಿಸುವ ಕಡೆಗೆ ಗಮನ ನೀಡಿ. ಇನ್ನು ಪ್ರೀತಿಯಲ್ಲಿ ಇರುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಜಠಕ್ಕೆ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳಬಹುದು. ನಿಯಮಿತ ಆಹಾರ ಸೇವನೆ ಮತ್ತು ವಿಶ್ರಾಂತಿಗೆ ಪ್ರಾಮುಖ್ಯ ನೀಡಿ. ಸ್ನೇಹಿತರ ಜೊತೆ ಒಳ್ಳೆಯ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಸರಳತೆ ಮತ್ತು ಸಮಾಧಾನ ಇಂದು ನಿಮ್ಮ ಶಕ್ತಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಬಗೆಗಿನ ವಿಶ್ವಾಸಾರ್ಹವು ಹೆಚ್ಚಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಆಲೋಚನೆ ಮತ್ತು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ರೀತಿ ಮೆಚ್ಚುಗೆ ಪಡೆಯುತ್ತದೆ. ಒತ್ತಡವನ್ನು ಗೆಲ್ಲಲಾಗಿದೆ. ಈ ಹಿಂದೆ ನೀವು ಮಾಡಿದ ದೊಡ್ಡ ಖರ್ಚುಗಳಿಗೆ ಹಣ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದರೆ ಪರಿಹಾರ ದೊರೆಯಲಿದೆ. ನಿಮ್ಮ ಮಾತಿನಿಂದ ಕುಟುಂಬದಲ್ಲಿ ಸಾಮರಸ್ಯ, ಒಗ್ಗಟ್ಟು ತರುವಲ್ಲಿ ಯಶಸ್ಸು ಕಾಣುವಿರಿ. ಪ್ರೀತಿಯಲ್ಲಿ ಇರುವವರು- ದಂಪತಿ ಮಧ್ಯೆ ಪರಸ್ಪರ ಗೌರವ ಹೆಚ್ಚಾಗಿ, ಸಂಭಂದದ ಸಮಾರಂಭ. ಹೆಚ್ಚು ಖಾರದ ಪದಾರ್ಥಗಳ ಆಹಾರ ಸೇವನೆಯಿಂದ ದೂರವಿರುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸಿ, ಕೋರ್ಸ್‌ಗಳಿಗೆ ಸೇರುವ ಸಾಧ್ಯತೆಯಿದೆ. ಇನ್ನು ಓದಿನ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿರ್ದಿಷ್ಟ ಅನವಶ್ಯಕ ಚರ್ಚೆಗಳಿಂದ ದೂರವಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮ ಕೆಲಸಗಳಲ್ಲಿ ಶಿಸ್ತು ಮತ್ತು ವೇಗ ಎರಡೂ ಈ ದಿನದ ಅಗತ್ಯ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದರಿಂದ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ತೀರ್ಮಾನಗಳಿಗೆ ಸಹೋದ್ಯೋಗಿಗಳ ಬೆಂಬಲವು ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವಾಗ ಅಳೆದು ತೂಗಿ ಬಳಸಿ. ಹಣಕಾಸಿನಲ್ಲಿ ಬಾಕಿ ಉಳಿದ ವಿಷಯಗಳ ಪರಿಹಾರವನ್ನು ಕೇಳುವುದು. ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸುವಾಗ- ಮಾತುಕತೆಯಾಡುವಾಗ ಅತಿಯಾದ ಭಾವುಕತೆ ಬೇಡ. ಇನ್ನು ಸಂವಹನ ಕೂಡ ಸರಿಯಾದ ರೀತಿಯಲ್ಲಿ ಇರಲಿ. ಪ್ರೀತಿಯಲ್ಲಿ ಇರುವವರು ನೀವು ಮಾತನಾಡುವಾಗ ಆಯ್ಕೆ ಮಾಡಿಕೊಳ್ಳುವ ಪದಗಳ ಬಗ್ಗೆ ಗಮನ ಕೊಡಿ. ಸ್ತ್ರೀರೋಗಗಳು ಅಥವಾ ತೂಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು, ನಿಯಮಿತ ವ್ಯಾಯಾಮ ಸಹಾಯಕವಾಗುತ್ತದೆ. ಕಲಿಕೆಗೆ ಉತ್ಸಾಹ ಮೂಡುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುವ ದಿನ ಇದಿರಲಿದೆ, ಆದರೆ ಅತಿಯಾದ ಅವಲಂಬನೆ ಬೇಡ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಆಲೋಚನೆ- ಚಿಂತನೆಗಳು ಸ್ಪಷ್ಟವಾಗಿ ಇರುತ್ತವೆ. ಅದೇ ರೀತಿ ಗಟ್ಟಿಯಾದ ನಿರ್ಣಯ ಸಹ ತೆಗೆದುಕೊಳ್ಳುತ್ತೀರಿ. ಉದ್ಯೋಗದಲ್ಲಿ ನಿಮ್ಮ ನಾಯಕತ್ವ ಗುಣ ಮೆಚ್ಚುಗೆಗೆ ಪಾತ್ರವಾಗುತ್ತದೆ. ನೀವು ಅಂದುಕೊಂಡ ಯೋಜನೆ ಕಾರ್ಯರೂಪಕ್ಕೆ ತರಲು ಸೂಕ್ತ ದಿನವಿದು. ಹೊಸ ಸಂಪಾದನೆ ಮಾರ್ಗೋಪಾಯ ಗೋಚರಿಸುತ್ತದೆ ಅಥವಾ ಬಾಕಿ ಬರಬೇಕಾದ ಹಣ ಸಿಗುತ್ತದೆ. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ- ಗೌರವ. ಪ್ರೀತಿಸುವವರು ಮೂರನೇ ವ್ಯಕ್ತಿಗಳ ಮಾತಿಗೆ ಪ್ರಾಮುಖ್ಯ ನೀಡಬೇಡಿ. ಕೈ-ಕಾಲು ನೋವು ಅಥವಾ ದೈಹಿಕ ದಣಿವು ಕಂಡುಬರುತ್ತದೆ, ವಿಶ್ರಾಂತಿಗೆ ಹೆಚ್ಚಿನ ಸಮಯವನ್ನು ಇರಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಚುರುಕುಗೊಳ್ಳುತ್ತದೆ. ಲಾಭದಾಯಕ ಚರ್ಚೆಯಲ್ಲಿದೆ. ಗುರುಪೂಜೆ ಅಥವಾ ಹಿರಿಯರ ಆಶೀರ್ವಾದ ಒಳಿತನ್ನು ಆಯ್ಕೆ. ಆತ್ಮವಿಶ್ವಾಸ ನಿಮ್ಮ ದೊಡ್ಡ ಶಕ್ತಿಯಾಗಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಈ ದಿನ ನಿಮ್ಮ ನೆಮ್ಮದಿ ಮತ್ತು ಮನಶ್ಶಾಂತಿ ಹೆಚ್ಚುವುದು. ಉದ್ಯೋಗಕ್ಕೆ ನಿರೀಕ್ಷೆಗಿಂತ ಕಡಿಮೆ ಒತ್ತಡ ಇರಲಿದೆ, ಖಚಿತವಾದ ಗುರಿಯನ್ನು ಮುಂದಕ್ಕೆ ಹೆಜ್ಜೆ ಇಡುವುದು ಮುಖ್ಯ. ಆಸ್ತಿ-ಪಾಸ್ತಿ, ಭೂಮಿ, ಮನೆ, ವಾಹನದ ಖರೀದಿ ಬಗ್ಗೆ ಆಲೋಚಿಸುವುದಕ್ಕೆ ಹೆಚ್ಚು ಸಮಯ ಮೀಸಲಿಡುತ್ತೀರಿ. ನಿಮ್ಮ ಆಪ್ತರ ಬಗ್ಗೆ ಕಾಳಜಿ ಇದೆ. ಪ್ರೀತಿಯಲ್ಲಿ ವೈಯಕ್ತಿಕವಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದರಿಂದ ಸಂಬಂಧ ಬಲಗೊಳ್ಳುತ್ತದೆ. ಹೆಚ್ಚಿನ ಎಣ್ಣೆ-ಮಸಾಲೆ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆ ದೊರೆಯಲಿದೆ. ನಿಮಗೆ ಈ ಹಿಂದೆ ಇದ್ದ ಮನಸ್ತಾಪಗಳ ಪ್ರಸ್ತಾವ ಮಾಡಬೇಡಿ. ಪ್ರವೇಶವಾದ ಸ್ನೇಹಕ್ಕೆ ಗೌರವ ಮುಖ್ಯವಾದ ಅಡಿಗಲ್ಲು. ಇನ್ನು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಸಹಾನುಭೂತಿ ಮತ್ತು ಸಂಯಮ ನಿಮಗೆ ಯಶಸ್ವಿಯಾದ ಒಯ್ಯುವ ಶಕ್ತಿ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ನಿಖರವಾದ ಯೋಜನೆ ಮತ್ತು ಪರಿಶ್ರಮದಿಂದಾಗಿ ಎಲ್ಲವೂ ಸಲೀಸಾಗಿ ಸಾಗುತ್ತದೆ. ಕೆಲಸದಲ್ಲಿ ನಿಧಾನ ಅಂತಾದರೂ ದೃಢವಾದ ಬೆಳವಣಿಗೆ ಕಂಡುಬರುತ್ತದೆ. ಪರಿಣಾಮಗಳ ಅರಿವಿಲ್ಲದೆ ಕೊಡುವಂಥ ಮಾತುಗಳನ್ನು ತಪ್ಪಿಸಿ. ಶಾಂತ ಸ್ವಭಾವದಿಂದ ಕೆಲಸದಲ್ಲಿ ತೊಡಗಿಕೊಂಡಾಗ ಲಾಭದ ಬಗ್ಗೆ ಸ್ಪಷ್ಟ ಚಿತ್ರಣ ಇರುತ್ತದೆ. ಈ ದಿನ ಅನಿವಾರ್ಯ ಅಲ್ಲ ಅಂತಾ ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಒಂದಕ್ಕೆ ನಾಲ್ಕು ಬಾರಿ ಯೋಚಿಸಿ. ಕುಟುಂಬದಲ್ಲಿ ನಿಮ್ಮ ಮಾತಿನ ತೂಕ, ಆದರೆ ಅಹಂಕಾರ ತೋರಿಸಬೇಡಿ. ಪ್ರೀತಿಯಲ್ಲಿ ಇರುವವರು ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾವ ಮಾಡುವ ಆಲೋಚನೆ ಮಾಡಲಿದ್ದೀರಿ. ನಿದ್ರೆ ಕೊರತೆಯಿಂದ ಅಲಸ್ಯ ಕಾಣುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಪ್ರಾರ್ಥನೆಯಿಂದ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಬಹುದು. ಸತತ ಶ್ರಮ ಯಶಸ್ಸಿಗೆ ದಾರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಇಂದು ನಿಮ್ಮಲ್ಲಿ ಇರುವಂಥ ಸಂಕಲ್ಪಶಕ್ತಿ ಮತ್ತು ಇತರರಿಂದ ದೊರೆತ ಸಹಾಯಕ್ಕೆ ತೋರುವಂಥ ಕೃತಜ್ಞತೆಯು ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ಆದರೆ ಸನ್ನಿವೇಶವನ್ನು ಸಮಾಧಾನದಿಂದ ಅವಲೋಕಿಸಿದಳು. ಹಣಕಾಸಿಗೆ ನೀವು ಕೇಳದೆಯೂ ಬರುವಂಥ ಪ್ರಯೋಜನಗಳ ಬಗ್ಗೆ ಸ್ಪಷ್ಟ ಯೋಚನೆ ಇರಿಸಿಕೊಳ್ಳುವುದು ಮುಖ್ಯ. ಇನ್ನು ನಿಮ್ಮ ಎಲ್ಲ ಕೆಲಸಗಳು ಹಾಗೂ ತೀರ್ಮಾನಕ್ಕೆ ಕುಟುಂಬ ಸದಸ್ಯರಿಂದ ಒಳ್ಳೆ ಬೆಂಬಲ ದೊರೆಯಲಿದೆ. ಸಂಬಂಧಗಳಿಂದ ಅಪೇಕ್ಷೆ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಶರೀರದಲ್ಲಿ ಸುಸ್ತು ಹೆಚ್ಚಾದಂತೆ, ಮೊದಲಿನ ಉತ್ಸಾಹದಲ್ಲಿ ಕೆಲಸ- ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಉತ್ಸಾಹ ಇರುವುದಿಲ್ಲ. ಲಘು ವ್ಯಾಯಾಮದಿಂದ ದೇಹದ ಚೈತನ್ಯವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಸಮಯ ಕಳೆಯುವುದರಿಂದ ಮನಸ್ಸು ಹಗುರವಾಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಬುದ್ಧಿವಂತಿಕೆ ಮತ್ತು ಮಾತಿನ ಶೈಲಿ ಹಲವು ರೀತಿಯಲ್ಲಿ ಅನುಕೂಲ. ಉದ್ಯೋಗ- ವೃತ್ತಿ- ವ್ಯವಹಾರಗಳಿಗೆ ಸಂಬಂಧಿಸಿದ ಚರ್ಚೆಗಳು, ಒಪ್ಪಂದಗಳು ನಿಮ್ಮ ಮೂಲಕ ಯಶಸ್ವಿಯಾಗಲಿದೆ. ನೀವು ನೀಡುವ ಸಲಹೆಯಲ್ಲಿ ಸ್ಪಷ್ಟತೆ ಇರಲಿದೆ. ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸುಧಾರಿಸಲು ಹೊಸ ಅವಕಾಶ ಸಿಗಲಿದೆ, ವ್ಯಾಪಾರಿಗಳಿಗೆ ಲಾಭದ ಸೂಚನೆ ಸಿಗಲಿದೆ. ಕುಟುಂಬದಲ್ಲಿ ಹಬ್ಬದ ವಾತಾವರಣ ಇರಲಿದೆ. ಸಂಭ್ರಮದ ಹಂಚಿಕೊಳ್ಳುವ ದಿನ ಇದಾಗಿರಲಿದೆ. ನಿಮ್ಮಲ್ಲಿ ಕೆಲವರಿಗೆ ಬೆನ್ನು ನೋವು ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಔಟ್ ಆಫ್ ದಿ ಬಾಕ್ಸ್ ಆಲೋಚನೆಯಿಂದ ಎಲ್ಲರ ಗಮನವನ್ನು ನಿಮ್ಮೆಡೆ ಸೆಳೆದುಕೊಳ್ಳುತ್ತಾರೆ. ಇತರೆ ಮೋಜಿನ ಸಮಯ ಕಳೆಯುವಿರಿ. ನಿಮ್ಮ ಮಾತೇ ನಿಮಗೆ ಗೌರವವನ್ನು ತಂದುಕೊಡಲಿದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *