ಬೆಂಗಳೂರು ನಿರಂತರವಾಗಿ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ದಾಖಲೆ ಪ್ರಮಾಣದಲ್ಲಿ ಸೀಜ್ ಮಾಡಿ ಪೆಡ್ಲರ್ ಜೈಲಿಗಟ್ಟಿದ್ದಾರೆ. ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿರುವ ಪೊಲೀಸರು ಡಿ.07 ರಂದು ವಿಂಟೇಜ್ ಕಾರುಗಳ ರ್ಯಾಲಿ ಮೂಲಕ ಯುವಕರಿಗೆ ಜಾಗೃತಿ ಮೂಡಿಸಿದರು.ಈ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರದರ್ಶನ.
ಮಾದಕ ವಸ್ತುಗಳ ಬಳಕೆ ಯುವ ಸಮೂಹದಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಾದಕ ವ್ಯಸನದಿಂದ ಆಗುವ ಪರಿಣಾಮಗಳ ಕುರಿತು ವೆರೈಟಿ ವೆರೈಟಿ ವಿಂಟೇಜ್ ಕಾರುಗಳು ರ್ಯಾಲಿ ಮಾಡಿದ್ದು, ಆಂಬ್ಯಾಸಿಡರ್, ಆಸ್ಟಿನ್, ಬೀಟಲ್, ಫಿಯೆಟ್, ಮರ್ಸಿಡಿಸ್ ಬೆಂಜ್, ಮಿನಿಕೂಪರ್, ಫ್ಲೀಟ್ ಮಾಸ್ಟರ್, ಫೋರ್ಡ್, ರೋಡ್ ರೋಸ್ಟರ್, ಜಾವಾ ಮೋಟಾರ್ ಬೈಕ್, ರಾಯಲ್ ಎನ್ಫೀಲ್ಡ್ ಸೇರಿದಂತೆ 75ಕ್ಕೂ ಹೆಚ್ಚು ಗಾಲಿಗಳನ್ನು ಓಡಿಸಲಾಗಿದೆ.
ಮಾದಕ ವಸ್ತು ಮುಕ್ತ ಕರ್ನಾಟಕ (ಡ್ರಗ್ ಫ್ರೀ ಕರ್ನಾಟಕ) ಅನ್ನೋ ಟ್ಯಾಗ್ ಲೈನ್ ಮೂಲಕ ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತು ಫೆಡರೇಶನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ನಿನ್ನೆ ಬೆಳಗ್ಗೆ ವಿಂಟೇಜ್ ಕಾರ್ ರ್ಯಾಲಿ ಅಭಿಯಾನದಲ್ಲಿ ಸೇ ನೋ ಟು ಡ್ರಗ್ ಜಾಗೃತಿ ಮೂಡಿಸಲಾಯಿತು.
ಮಾದಕ ದ್ರವ್ಯ ಜಾಲದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಪೊಲೀಸ್ ಇಲಾಖೆ ಕಳೆದ 2 ವರ್ಷದಿಂದ 300 ಕೋಟಿ ಅಧಿಕ ಮೌಲ್ಯದ ಡ್ರಗ್ ವಶಪಡಿಸಿಕೊಂಡು ನಾಶಪಡಿಸಿದೆ. ಸಾವಿರಾರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಯುವ ಸಮುದಾಯ, ಟೆಕ್ಕಿಗಳು ವ್ಯೂಹದಲ್ಲಿ ಸಿಲುಕಬಾರದು ಎಂದು ಹೋಮ್ ಮಿನಿಸ್ಟರ್ ಹೇಳಿದ್ದಾರೆ.
ವಿಂಟೇಜ್ ರ್ಯಾಲಿಯಲ್ಲಿ 70 ಅಧಿಕ ವಿಂಟೇಜ್ ಕಾರುಗಳು, ಬೈಕ್ಗಳ ಪ್ರಾಜೆಕ್ಟ್ಗೂ ಸಹ ಇದ್ದರು. ವಿಧಾನಸೌಧದಿಂದ ಹೊರಟ ವಿಂಟೇಜ್ ಕಾರುಗಳ ಆಕರ್ಷಕ ರ್ಯಾಲಿ ಎಂಜಿ ರೋಡ್, ಬ್ರಿಗೇಡ್ ರೋಡ್, ವಿಟಲ್ ಮಲ್ಯ ರಸ್ತೆ, ಮೈಸೂರು ರಸ್ತೆ ಮೂಲಕ, ಬಿಗ್ ಬನಿಯನ್ ವೈನ್ಯಾರ್ಡ್ ಅಂಡ್ ರೆಸಾರ್ಟ್ ತನಕ ಸಾಗಿತು. ಒಟ್ಟಾರೆ ಎಲ್ಲರೂ ಡ್ರಗ್ ಮಾಫಿಯಾ ಬಗ್ಗೆ ಎಚ್ಚರವಹಿಸುವ ಕೆಲಸವನ್ನ ಪೊಲೀಸ್ ಇಲಾಖೆ ನಿರತವಾಗಿದೆ.




