ವನ್ಯ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ‘ಸೀರೆ’ ಐಡಿಯಾ! ಬೀದರ್ ರೈತರ ವಿನೂತನ ಯತ್ನಕ್ಕೆ ಸಿಕ್ಕಿದೆ ಯಶಸ್ಸು

ವನ್ಯ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ‘ಸೀರೆ’ ಐಡಿಯಾ! ಬೀದರ್ ರೈತರ ವಿನೂತನ ಯತ್ನಕ್ಕೆ ಸಿಕ್ಕಿದೆ ಯಶಸ್ಸು


ಬೀದರ್, ಡಿಸೆಂಬರ್ 8: ಕಾಡು ಪ್ರಾಣಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ಬೀದರ್ ರೈತರು ವಿನೂತನ ವಿಧಾನವನ್ನು ಅಳವಡಿಸಲಾಗಿದೆ. ಹಳೆಯ ಸೀರೆಗಳನ್ನು ಬಳಸಿ ಜಿಂಕೆ, ಮೊಲ ಮತ್ತು ಕಾಡುಹಂದಿಗಳಿಂದ ಬೆಳೆಗಳನ್ನು ಕಾಪಾಡುವುದು. ಚಳಿಗಾಲದಲ್ಲಿ ರಾತ್ರಿ ಹೊತ್ತು ಹೊಲಗಳಿಗೆ ನುಗ್ಗಿ ಕಡಲೆ, ಕುಸುಬಿ, ಜೋಳದಂತಹ ಬೆಳೆಗಳನ್ನು ಹಾಳು ಮಾಡುವ ಪ್ರಾಣಿಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು, ಸೀರೆಗಳನ್ನು ಹೊಲದ ಅಂಚು ಮತ್ತು ಬೆಳೆಗಳ ಸುತ್ತಲೂ ಕಟ್ಟುತ್ತಾರೆ. ಇದರಿಂದ ಪ್ರಾಣಿಗಳು ಹೊಲದ ಹತ್ತಿರ ಬರುವುದಿಲ್ಲ. ಗಾಳಿಗೆ ಸೀರೆಗಳು ಹಾರಾಡುವುದರಿಂದ ಮತ್ತು ಗೋಡೆಗಳಂತೆ ಕಾಣುವುದರಿಂದ ಪ್ರಾಣಿಗಳು ಹೆದರಿ ದೂರ ಉಳಿಯುತ್ತವೆ. ಈ ಹಿಂದೆ ರೈತರು ಬೆದರು ಬೊಂಬೆಗಳನ್ನು ಬಳಸುತ್ತಿದ್ದರೂ, ಅವು ಪ್ರಾಣಿಗಳಿಗೆ ಅಷ್ಟೊಂದು ಸಂಖ್ಯೆಯಲ್ಲಿರಲಿಲ್ಲ. ಸುಮಾರು 100 ರೂಪಾಯಿಗಳಲ್ಲಿ ದೊರೆಯುವ ಸೀರೆಗಳು ರೈತರಿಗೆ ಕಡಿಮೆ ವೆಚ್ಚದಲ್ಲಿ ಪರಿಹಾರ ನೀಡಿವೆ. ಇದರಿಂದ ರೈತರಿಗೆ ರಾತ್ರಿ ಪ್ರಾಣಿಗಳನ್ನು ಹೊತ್ತು ಕಾಯುವ ಶ್ರಮವೂ ತಪ್ಪಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *