ಏಳನೇ ದಿನಕ್ಕೆ ಕಾಲಿಟ್ಟ ವಿಮಾನ ಹಾರಾಟ ವ್ಯತ್ಯಯ
ಬೆಂಗಳೂರು, ಡಿಸೆಂಬರ್ 08: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 6 ದಿನಗಳಿಂದ ಇಂಡಿಗೋ ವಿಮಾನಗಳು (ಇಂಡಿಗೋ ವಿಮಾನ) ಹಾರಾಟದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಇಂದಿಗೆ ಈ ಸಮಸ್ಯೆ ಏಳನೇ ದಿನಕ್ಕೆ ತಲುಪಿದೆ. ಡಿ. 5 ರ ಒಂದೇ ದಿನದಂದು 1,000 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ಇದುವರೆಗೆ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದೂ ಸಹ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ಹಾರಾಟ ರದ್ದಾಗಿವೆ. ಬೆಂಗಳೂರು ದೇಶದಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳು ವ್ಯಾಪಕ ರದ್ದತಿಯಿಂದಾಗಿ ಭಾರತದಾದ್ಯಂತ ವಿಮಾನ ಪ್ರಯಾಣ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.
7ನೇ ದಿನ 126 ವಿಮಾನ ರದ್ದತಿ
ಬೆಳಗ್ಗೆಯಿಂದ ಮಧ್ಯರಾತ್ರಿಗೆ ಕರೆದುಕೊಂಡು ಹೋಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 64 ಮತ್ತು ಆಗಮಿಸಬೇಕಿದ್ದ 62 ವಿಮಾನಗಳು ಸೇರಿ ಒಟ್ಟು 126 ವಿಮಾನಗಳು ರದ್ದಾಗಿವೆ. ರದ್ದತಿ ಕುರಿತು ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರಿಗೆ 5 ಗಂಟೆ ಮುಂಚಿತವಾಗಿ ಸಂದೇಶ ಕಳುಹಿಸಲು ಕಾರಣ ಪ್ರಯಾಣಿಕರು ಏರ್ಪೋರ್ಟ್ಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಒಟ್ಟು 77 ಇಂಡಿಗೋಗಳ ಹಾರಾಟ ವ್ಯತ್ಯಯವಾಗಿದೆ, ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಾಗಿತ್ತು39 ಮತ್ತು ಆಗಮಿಸಬೇಕಾಗಿತ್ತು 38 ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಂಜು ಕವಿದ ಕಾರಣಕ್ಕೆ ವಿಮಾನ ಹಾರಾಟ ವ್ಯತ್ಯಯ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳ್ಳಂ ಬೆಳಗ್ಗೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ದಟ್ಟ ಮಂಜು ಕವಿದ ಹಿನ್ನೆಲೆ ಸ್ವಷ್ಟವಾಗಿ ರನ್ ವೇ ಕಾಣಿಸದ ಕಾರಣಕ್ಕೆ 20ಕ್ಕೂ ಅಧಿಕ ವಿಮಾನಗಳು ಹಾರಾಟದಲ್ಲಿ ವಿಳಂಬವಾಗಿದೆ.
ಇದನ್ನೂ ಓದಿ ಮುಂದುವರಿದ ವಿಮಾನಗಳ ಹಾರಾಟ ವ್ಯತ್ಯಯ: KIAB ಯಿಂದ 61 ಇಂಡಿಗೋ ವಿಮಾನಗಳು ರದ್ದು
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುತ್ತದೆ. ಇಂಡಿಗೋ ವಿಮಾನಗಳು ಹಾರಾಟದಲ್ಲಿನ ವ್ಯತ್ಯಯ ಸ್ವಲ್ಪ ಸುಧಾರಿಸಿದ ನಂತರ, ವಾರಾಂತ್ಯದ ನಂತರ ಮತ್ತು ಅಂತರರಾಜ್ಯಗಳಿಗೆ ತೆರಳಲು ಹೆಚ್ಚಿನ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಟರ್ಮಿನಲ್ ಒಂದರ ಮುಂಭಾಗದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಡಿಜಿ ಯಾತ್ರೆಯ ಮೂಲಕ ಸಾಗುವವರ ಸಾಲುಗಳಲ್ಲಿ ಭಾರೀ ದಟ್ಟಣೆ ಇದೆ.
ಡಿಪಾರ್ಚರ್ ಗೇಟ್ನಿಂದ ಅರೈವಲ್ ಗೇಟ್ವರೆಗಿನ ಸಾಲುಗಳು ವಿಸ್ತರಿಸಿದ್ದು, ಪ್ರಯಾಣಿಕರು ಕಿಲೋಮೀಟರ್ಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ಎರಡು ಗಂಟೆ ಮುಂಚಿತವಾಗಿ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ, ಲಗೇಜ್ ಸಮೇತ ಪ್ರಯಾಣಿಕರು ದೀರ್ಘ ಕ್ಯೂನಲ್ಲಿ ನಿಂತು ಪರದಾಟ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಇರುವ ಸಂಖ್ಯೆಗಿಂತ ದುಪ್ಪಟ್ಟು ಪ್ರಯಾಣಿಕರು ಇಂದು ವಿಮಾನ ನಿಲ್ದಾಣದಲ್ಲಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:31 am, ಸೋಮ, 8 ಡಿಸೆಂಬರ್ 25