ರಾಮನಗರ, ಡಿಸೆಂಬರ್ 08: ಪ್ರೀತಿ ಹೆಸರಲ್ಲಿ ನಂಬಿಸಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ವರ್ಷಿಣಿ (22) ಆತ್ಮಹತ್ಯೆಗೆ ಶರಣಾದ ಯುವತಿ, ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಮೈಸೂರಿನ ಖಾಸಗಿ ಕಾಲೇಜಿನಲ್ಲಿ MSC ವ್ಯಾಸಂಗ ಮಾಡುತ್ತಿರುವ ವರ್ಷಿಣಿ ಮನೆಯಲ್ಲಿಯೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಅವರು ಆರೋಪಿ ಅಭಿವಿರುದ್ಧ ಸಾಲು ಸಾಲು ಆರೋಪ ಮಾಡಿದ್ದು, ಇಂತವರನ್ನು ನಂಬಿ ಯಾರೂ ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ತಾಯಿ ಮತ್ತು ಶಿಕ್ಷಕರ ಬಳಿ ಕ್ಷಮೆ ಕೇಳುವುದಾಗಿಯೂ ಡೆಟ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ
ಇದನ್ನೂ ಓದಿ: ಕೌಟುಂಬಿಕ ನ್ಯಾಯಾಲಯದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ವರ್ಷಿಣಿ ಡೆತ್ ನೋಟ್ ನಲ್ಲಿ ಏನಿದೆ?
ನನ್ನ ಸಾವಿಗೆ ಅಭಿ ದೇವರದೊಡ್ಡಿ ಕಾರಣ. ಅಮ್ಮ, ಸಾಧ್ಯವಾದರೆ ನನ್ನನ್ನು ಕ್ಷಮಿಸು. ಆತ ನನ್ನನ್ನು ನಂಬಿಸಿ, ಬ್ಲ್ಯಾಕ್ ಮೇಲ್ ಮಾಡಿ ಉಂಗುರ, ಹಣ ಎಲ್ಲವನ್ನೂ ಪಡೆದಿದ್ದಾನೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ನನಗೆ ಸಹಕರಿಸಿದ್ದಾರೆ ಮಾತ್ರ ಅವನನ್ನು ಡಿಲೀಟ್ ಮಾಡೋದಾಗಿ ಹೇಳಿದರು. ಹೀಗಾಗಿ ಭಯಕ್ಕೆ ಕೊನೆಗೆ ಅದನ್ನೂ ಮಾಡಿದ್ದೆ. ಪ್ರೀತಿ ಹೆಸರಲ್ಲಿ ನನಗೆ ಮೋಸ ಮಾಡಿದ್ದು, ನಾನು ಗರ್ಭಿಣಿ ಆದ ಹಿನ್ನಲೆಯಲ್ಲಿ ಆತ ಗರ್ಭಪಾತವನ್ನೂ ಮಾಡಿದ್ದಾನೆ ಎಂದು ವರ್ಷಿಣಿ ಆರೋಪಿಸಿದ್ದಾರೆ.
ಅಮ್ಮ ನನಗೆ ಗೊತ್ತು ನಾನು ನಿನ್ನ ನಂಬಿಕೆಗೆ ಮೋಸ ಮಾಡಿದ್ದೇನೆ. ಸಾಯೋಕೂ ನನಗೆ ಭಯ ಆಗುತ್ತಿದೆ. ಆದರೆ ನನಗೆ ಬೇರೆ ದಾರಿ ಇಲ್ಲ. ನಾನು ಈತನನ್ನು ನಂಬಬಾರದಿತ್ತು. ಆದರೆ ಅದೊಂದು ತಪ್ಪು ಮಾಡಿ ಎಲ್ಲ ಹಾಳುಮಾಡಿಕೊಂಡುಬಿಟ್ಟೆ. ಆತನನ್ನು ಸುಮ್ಮನೆ ಬಿಡಬೇಡಿ. ನನ್ನ ಹಾಗೇ ಇಂತವರನ್ನು ನಂಬಿ ಯಾರೂ ಜೀವನ ಹಾಳುಮಾಡಿಕೊಳ್ಳಬೇಡಿ. ನನ್ನ ಶಿಕ್ಷಕರಲ್ಲೂ ನಾನು ಕ್ಷಮೆ ಕೇಳುತ್ತೇನೆ ಎಂದು ವರ್ಷಿಣಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.