ಹೊರಟ್ಟಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಕಾಂಗ್ರೆಸ್​ ಎಂಎಲ್​​​ಸಿ, ಅವಿಶ್ವಾಸ ನಿರ್ಣಯದ ತಂತ್ರವೇ?

ಹೊರಟ್ಟಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಕಾಂಗ್ರೆಸ್​ ಎಂಎಲ್​​​ಸಿ, ಅವಿಶ್ವಾಸ ನಿರ್ಣಯದ ತಂತ್ರವೇ?


ಬೆಳಗಾವಿ, (ಡಿಸೆಂಬರ್ 08): ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ಬಸವರಾಜ ಹೊರಟ್ಟಿ) ವಿರುದ್ಧ ಕಾಂಗ್ರೆಸ್ ಎಂಎಲ್ ಸಿ ನಾಗರಾಜ್ ಯಾದವ್ (ನಾಗರಾಜ್ ಯಾದವ್) ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭ್ರಷ್ಟಾಚಾರ, ಅಕ್ರಮ ನೋಂದಣಿ, ಫೋನ್ ಆರೋಪಗಳು ಸೇರಿದಂತೆ ಹಲವು ಹೀಗೆ ಹಲವು ಆರೋಪ ಎದುರಿಸುತ್ತಿರುವ ಹೊರಟ್ಟಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂದು ಯಾದವ್ ಕಂಡಿದ್ದಾರೆ.

ಬಸವರಾಜ್ ಹೊರಟ್ಟಿ ಹಾಗೂ ನಾಗರಾಜ್ ಯಾದವ್ ಮುನಿಸು ಅಷ್ಟಕ್ಕೇ ನಿಂತಿಲ್ಲ. ವಿಧಾನ ಪರಿಷತ್ ಕಲಾಪದ ವೇಳೆಯೂ ಪರೋಕ್ಷವಾಗಿ ನಾಗರಾಜ್ ಯಾದವ್ ಅವರು ಹೊರಟ್ಟಿ ವಿರುದ್ಧ ಆಕ್ಷೇಪ ಎತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ನಾಗರಾಜ್ ಯಾದವ್ ಮತ್ತು ಸಭಾಪತಿ ಹೊರಟ್ಟಿ ನಡುವೆ ಮಾತು ತಾರಕಕ್ಕೇರಿದೆ. ಇದರ ತೀವ್ರತೆ ಅರಿತುಕೊಂಡ ಕಾಂಗ್ರೆಸ್ ಹಿರಿಯ ನಾಯಕರು ನಾಗರಾಜ್ ಯಾದವರನ್ನೇ ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ: ಪರಿಷತ್ ಸದಸ್ಯ ನಾಗರಾಜ್ ಯಾದವ್ ಗೆ ಸಭಾಪತಿ ಹೊರಟ್ಟಿ ಸವಾಲು: ಕಾರಣ ಏನು ಗೊತ್ತಾ?

ನಾಗರಾಜ್ ಯಾದವ್ ಗೆ ಹೊರಟ್ಟಿ ಸವಾಲ್

ಇನ್ನು ನಾಗರಾಜ್ ಯಾದವ್ ಅವರ ಸಾಲು ಸಾಲು ಆರೋಪಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಹೊರಟ್ಟಿ, ದಾಖಲೆ ಬಿಡುಗಡೆ ಮಾಡದೆಯೇ ಕೇವಲ ಆರೋಪ ಮಾಡುವವರು ಹೇಡಿಗಳು ಎಂದು ಚಾಟಿ ಬೀಸಿದ್ದಾರೆ.

ಸಭಾಪತಿ ಕುರ್ಚಿಯಿಂದ ಕೆಳಗಿಳಿಸುವ ತಂತ್ರವೇ?

ಹೌದು…ನಾಗರಾಜ್ ಯಾದವ್ ಅವರು ಸದನ ಆರಂಭದಿಂದಲೇ ಹೊರಟ್ಟಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಸಭಾಪತಿ ಎಲ್ಲ ಪಕ್ಷದ ಪರ ಇರಬೇಕು. ಆದರೆ ಬಸವರಾಜ್ ಹೊರಟ್ಟಿ ಅವರು ಆಡಳಿತ ಪಕ್ಷಕ್ಕೆ ಒಂದು, ವಿಪಕ್ಷಗಳಿಗೆ ಮತ್ತೊಂದು ರೀತಿ ಮಾಡುತ್ತಿದ್ದಾರೆ. ಬಿಜೆಪಿಯವರನ್ನು ಓಲೈಕೆ ಮಾಡಲು ನಮಗೆ ಮಾತನಾಡಲು ಅವಕಾಶ ಕೊಡ್ತಿಲ್ಲ. ಆ ಮೂಲಕ ಹೊರಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸದನದಲ್ಲಿ ಗುಡುಗಿದರು.

ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ಯಾದವ್, ತಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರ ಫೋನ್‌ಕಾಲ್ ಲಿಸ್ಟ್‌ಗಳನ್ನು ಅವರು ತೆಗೆದುಕೊಂಡಿದ್ದಾರೆ, ಈ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರಲಿದೆ. ಜೊತೆಗೆ ನೇಮಕಾತಿಗಳಲ್ಲಿಯೂ ಹೊರಟ್ಟಿ ಅವ್ಯವಹಾರ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಿ.ಟಿ. ರವಿ ಅವಾಚ್ಯ ಶಬ್ದ ಬಳಕೆಯ ಬಗ್ಗೆ ದೂರು ಕೊಟ್ಟಾಗ ನಾನು ಆ ಮಾತು ಕೇಳಿಸಿಕೊಂಡಿಲ್ಲ ಅಂದಿದ್ದರು. ನೈತಿಕತೆ ಕಳೆದುಕೊಂಡ ಮೇಲೆ ಅವರು ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದ್ದರು. ಹೀಗೆ ನಾಗರಾಜ್ ಯಾದವ್ ಸಾಲು ಸಾಲು ಆರೋಪ ಮಾಡುವ ಮೂಲಕ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ತಂತ್ರವೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಅವಿಶ್ವಾಸ ನಿರ್ಣಯ ಮಂಡನೆ?

ಸದ್ಯ ಹೊರಟ್ಟಿ ವಿರುದ್ಧ ಕಲಹಕ್ಕೆ ಬಿದ್ದಿರೋ ಯಾದವ್ ಪಕ್ಷದ ಅಂಗಳದಲ್ಲೂ ವಿಷಯ ಚರ್ಚೆ ಮಾಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವಾಗ ಪರಿಷತ್ ನಲ್ಲಿ ಸಂಖ್ಯಾಬಲ ಹೆಚ್ಚಿರುವಾಗ ಬಿಜೆಪಿ ಪಕ್ಷದ ಸಭಾಪತಿ ಮುಂದುವರಿಯುವುದು ಬೇಡ ಎಂದು ಯಾದವ್ ತಿಳಿಸಿದ್ದಾರೆ. ಇದೇ ಕಾರಣಕ್ಕೋಸ್ಕರ ಮುಂದಿನ ದಿನಗಳಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದರೂ ಆಶ್ಚರ್ಯವಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *