ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್​​ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು

ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್​​ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು


ಬೀದರ್, ಡಿಸೆಂಬರ್ 08: ರೈತರ ಜಮೀನು ಹಸಿರಾಗಿಸುವ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ (ಸೇತುವೆ ಕಮ್ ಬ್ಯಾರೇಜ್) ನಿರ್ಮಿಸಲಾಗಿದೆ. ಪ್ರಾರಂಭವಾಗಿ 12 ವರ್ಷ ಉರಳಿದರೂ ಬ್ಯಾರೇಜ್‌ನಲ್ಲಿ ನೀರು ನಿಲ್ಲುತ್ತಿಲ್ಲ. ಇದು ಬೃಹತ್ ನೀರಾವರಿಯ ಕನಸು ಕಂಡಿದ್ದ ರೈತರಿಗೆ (ರೈತರು) ಬಿಗ್ ಶಾಕ್ ನೀಡಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಫಲವಾಗಿದೆ.

60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಗೆ ನೀರಾವರಿ ಕಲ್ಪಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ 60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಈ ಬ್ಯಾರೇಜ್ ನಿರ್ಮಾಣವಾಗಿ, ಲೋಕಾರ್ಪಣೆಗೊಂಡು 12 ವರ್ಷಗಳು ಉರುಳಿದರೂ ಬ್ಯಾರೇಜ್ ರೈತರು ಒಮ್ಮೆ ಈ ಬಾರಿಯಷ್ಟು ನೀರಾವರಿ ಮಾಡಿಕೊಂಡಿಲ್ಲ. ಇದು ಖಂಡಿತವಾಗಿಯೂ ಚಂದಾಪುರ, ಬಾಬಲಿ, ಮಣಿಗೆಂಪುರ, ಗೋರನಾಳದ ರೈತರ ನೀರಾವರಿ ಕನಸು ನುಚ್ಚು ನೂರಾ ನೀರು.

ಇದನ್ನೂ ಓದಿ: ಭೀಮಾ ನದಿ ಪ್ರವಾಹಕ್ಕೆ ಹೆಕ್ಟೇರ್ ಬೆಳೆ ನಾಶ: ತೀವ್ರ ಸಂಕಷ್ಟದಲ್ಲಿ ಕಲಬುರಗಿಯ 117 ಗ್ರಾಮಗಳ ಜನ

ಬ್ಯಾರೇಜ್ ನಿರ್ಮಾಣವಾಗುತ್ತಿದಂತೆ ನೀರು ನಿಲ್ಲುತ್ತದೆ ಎಂದು ನೂರಾರು ರೈತರು ತಮ್ಮ ಹೊಲಗಳಲ್ಲಿ ಸಾಲ ಮಾಡಿ ಪೈಪ್ ಲೈನ್ ಹಾಕಿಸಿಕೊಂಡು ಕುಳಿತಿದ್ದಾರೆ. ಆದರೆ ಬ್ಯಾರೇಜ್ ನಲ್ಲಿ ಮಾತ್ರ ನೀರು ನಿಲ್ಲುತ್ತಿಲ್ಲ. ಇದು ಖಂಡಿತವಾಗಿಯೂ ಸರ್ಕಾರದ ವಿರುದ್ಧ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಇಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವುದಕ್ಕೆ ಶುರುಮಾಡಿದರೆ ರೈತರು ಖುಷಿಪಡುತ್ತಾರೆ, ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಬೇಕು ಎಂದುಕೊಂಡಿದ್ದರು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ, ಉದ್ಘಾಟನೆಯಾಗಿ 12 ವರ್ಷ ಕಳೆದರೂ ಈ ಡ್ಯಾಂನಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಮಳೆಯಾಶ್ರಿತ ಬೆಳೆ ಬೆಳೆದು ರೈತರು ಏನು ಬದುಕು ಕಟ್ಟಿಕೊಳ್ಳಬೇಕಿದ್ದರೆ, ಈ ಬ್ಯಾರೇಜ್‌ನಿಂದ ಪ್ರಯೋಜನವಾಗಿಲ್ಲ ಎಂದು ರೈತ ಮನ್ಮತಪ್ಪ ಹೇಳುತ್ತಾರೆ.

ಚಂದಾಪುರ ಗ್ರಾಮದ ಬಳಿ ಮಾಂಜ್ರಾ ನದಿಯು ಹರಿದು ಹೋಗುತ್ತದೆ. ಈ ನದಿಯೂ ಮಳೆಗಾಲದಲ್ಲಿ ಮೈದುಂಬಿಕೊಂಡು ಹರಿದು ಪಕ್ಕದ ರಾಜ್ಯ ತೆಲಂಗಾಣಕ್ಕೆ ನೀರು ಹರಿದು ಹೋಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ಮಳೆಗಾಲದಲ್ಲಿ ನೀರು ಸಂಗ್ರಹಿಸಿದ ಬೆಸಿಗೆಯಲ್ಲಿ ನೀರನ್ನ ಸುತ್ತಮುತ್ತಲಿನ ಹತ್ತಾರು ಗ್ರಾಮಕ್ಕೆ ಕುಡಿಯಲು ಹಾಗೂ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ 12 ವರ್ಷಗಳು ಉರುಳುತ್ತಾ ಬಂದರೂ ಇಲ್ಲಿ ನೀರು ನಿಲ್ಲುತ್ತಿಲ್ಲ.

ಕಳಪೆ ಗುಣಮಟ್ಟದ ಗೇಟ್‌ಗಳು ಅಳವಡಿಕೆ

ಮಳೆಗಾಲದಲ್ಲಿಯೂ ನೀರು ವ್ಯರ್ಥವಾಗಿ ಹರಿದು ತೆಲಂಗಾಣ ಸೇರುತ್ತಿದೆಯೇ ವಿನಹ ಬ್ಯಾರೇಜ್ ಇಲ್ಲದೇ ಇರುವುದರಿಂದ ಈ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷದಿಂದ ಈ ಬ್ಯಾರೇಜ್‌ಗೆ ಅಳವಡಿಸಲಾಗಿದ್ದ ಗೇಟ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ನೀರು ಸೋರಿಕೆಯಾಗಿ ನೀರಿನ ರಭಸಕ್ಕೆ ಗೇಟ್‌ಗಳು ಕಿತ್ತುಕೊಂಡು ಹೋಗಿವೆ.

ಈ ಬ್ಯಾರೇಜ್ ನಿರ್ಮಾಣದ ಸಮಯದಲ್ಲಿ ನೂರಾರು ಜಮೀನು ಕೂಡ ಹೋಗಿದೆ. ಆದರೆ ಈವರೆಗೂ ರೈತರಿಗೆ ಸಿಗಬೇಕಾಗಿದ್ದ ಪರಿಹಾರ ಸಿಕ್ಕಿಲ್ಲ. ಇತ್ತ ಜಮೀನು ಇಲ್ಲ, ಮೊತ್ತೊಂದು ಕಡೆಗೆ ಜಮೀನಿಗೆ ನೀರು ಇಲ್ಲ. ಹೀಗಾಗಿ ರೈತರು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರೈತರಿಗೆ ಅನೂಕೂಲವಾಗಲಿ ಎಂದು ಸರಕಾರ ಕೋಟ್ಯಂತರ ರೂ. ಸುರಿದು ಬ್ಯಾರೇಜ್ ನಿರ್ಮಾಣ ಮಾಡಿದೆ. ಆದರೆ ನೀರು ನಿಲ್ಲದ ರೈತರು ನೀರಾವರಿ ಕನಸು ಕಾಣುವುದನ್ನೇ ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರವಾಹ: ದಸರಾ, ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಜನಜೀವನ ತತ್ತರ

ರೈತರ ಜಮೀನಿಗೆ ನೀರು ಕೊಡಬೇಕು, ಭೂಮಿಯಲ್ಲಿ ನೀರಿನ ಮೂಲ ಜಾಸ್ತಿಯಾಗಬೇಕು ಎಂಬ ಉದ್ದೇಶದಿಂದ ನಿರ್ಮಾಣ ಮಾಡಿದ ಬ್ಯಾರೇಜ್, ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಈ ಬ್ಯಾರೇಜ್ ನಿರ್ಮಾಣಕ್ಕೆ 60.94 ಕೋಟಿ ರೂ ವೆಚ್ಚಮಾಡಿದರೆ, ಇದರ ಪ್ರಯೋಜನ ಮಾತ್ರ ಯಾರಿಗೂ ಆಗಿಲ್ಲ. ಬ್ಯಾರೇಜ್ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂ ಹಣ ಅಧಿಕಾರಿಗಳು ಕೊಳ್ಳೆಹೊಡೆದಿರುವುದು ಮೇಲ್ನೇಟಕ್ಕೆ ಕಂಡುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *