17

Image Credit : Social Media
ಅಭಿಷೇಕ್ ಎಲಿಮಿನೇಷನ್
ಫೈನಲ್ ಸ್ಪರ್ಧಿಯೆಂದೇ ಬಿಂಬಿತವಾಗಿದ್ದ ಅಭಿಷೇಕ್ ಶ್ರೀಕಾಂತ್ (Bigg Boss Abhishek shrikanth) ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್ಷಿಪ್ ಕೊಡಲಾಗಿತ್ತು, ಎರಡನೆಯ ಬಾರಿ ಇವರು ಕ್ಯಾಪ್ಟನ್ ಆಗಿದ್ದರು. ಆದರೆ ಇದೀಗ ಕುತೂಹಲದ ಸನ್ನಿವೇಶದಲ್ಲಿ ಹೊರಕ್ಕೆ ಬಂದಿದ್ದಾರೆ.
27
Image Credit : Social Media
ಕ್ಯಾಪ್ಟನ್ ಆಗಿರುವಾಗಲೇ ಹೊರಕ್ಕೆ
ಈ ಮೂಲಕ ಕ್ಯಾಪ್ಟನ್ ಆಗಿರುವಾಗಲೇ ಹೊರಕ್ಕೆ ಬಂದಿದ್ದಾರೆ. ಈ ವಾರ ಎಲಿಮಿನೇಷನ್ ಪಟ್ಟಿಯಲ್ಲಿ ಅಭಿಷೇಕ್ ಜೊತೆ, ಸೂರಜ್ ಮತ್ತು ಮಾಳು ಅವರು ಇದ್ದರು. ಈ ಮೂವರೂ ಸಹ ಪ್ರಬಲ ಸ್ಪರ್ಧಿಗಳಾಗಿದ್ದರು. ಅಭಿಷೇಕ್ ಜರ್ನಿ ಮುಗಿದಿದೆ.
37
Image Credit : Social Media
ಸೂಟ್ಕೇಸ್ನಲ್ಲಿ ರಹಸ್ಯ
ಅಷ್ಟಕ್ಕೂ ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆ ಎಲ್ಲಕ್ಕಿಂತಲೂ ಡಿಫರೆಂಟ್ ಆಗಿತ್ತು. ಎಲಿಮಿನೇಟ್ ಆಗಿದ್ದ ಈ ಮೂವರನ್ನು ‘ಆಕ್ಟಿವಿಟಿ ರೂಮ್’ಗೆ ಕಳುಹಿಸಿದರು. ಅಲ್ಲಿ ಒಂದು ಸೂಟ್ಕೇಸ್ ಇತ್ತು. ಅದರಲ್ಲಿ ಹೊರಬೀಳುವವರ ಸಂದೇಶವಿತ್ತು. ಸೂಟ್ಕೇಸ್ಗಳನ್ನು ತೆರೆದಾಗ, ಅಭಿಷೇಕ್ ಅವರ ಸೂಟ್ಕೇಸ್ನಲ್ಲಿ ‘The End’ ಎಂದು ಬರೆಯಲಾಗಿತ್ತು.
47
Image Credit : Social Media
ಸೆಲೆಬ್ರಿಟಿಯಾದ ಅಭಿಷೇಕ್
ಸಹಜವಾಗಿ ಇದೀಗ ಅಭಿಷೇಕ್ ಅವರು ಸೆಲೆಬ್ರಿಟಿಯಾಗಿದ್ದಾರೆ. ಹಾಗೆ ನೋಡಿದರೆ, ಅವರು ಇದಾಗಲೇ ಹಲವು ಸೀರಿಯಲ್ಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದವರೇ. ಆದರೆ ಇದೀಗ ಬಿಗ್ಬಾಸ್ನಿಂದಾಗಿ ಇನ್ನು ಒಂದು ಹಂ ಮೇಲಕ್ಕೆ ಹೋಗಿದ್ದಾರೆ.
57
Image Credit : colors kannada instagram
ಗಿಲ್ಲಿ ನಟನಲ್ಲ!
ಈ ಸಂದರ್ಭದಲ್ಲಿ, ಅವರಿಗೆ ಟಾಪ್ 5 ಮತ್ತು ವಿನ್ನರ್ ಬಗ್ಗೆ ಕೇಳಲಾಗಿದೆ. ಸಾಮಾನ್ಯವಾಗಿ ಎಲಿಮಿನೇಟ್ ಆಗಿ ಬಂದ ಎಲ್ಲರ ಬಾಯಲ್ಲೂ ಇರುವುದು ಗಿಲ್ಲಿ ನಟ (Bigg Boss Gilli Nata) ಹೆಸರು. ಆದರೆ, ಅಭಿಷೇಕ್ ಮಾತ್ರ ಬೇರೆಯವರ ಹೆಸರು ಹೇಳಿದ್ದಾರೆ.
67
Image Credit : Colors Kannada
ವಿನ್ನರ್ ಯಾರು?
ಅವರ ದೃಷ್ಟಿಯಲ್ಲಿ ಧನುಷ್ ಅವರೇ ವಿನ್ನರ್. ಇವನು ಚೆನ್ನಾಗಿ ಆಡುತ್ತಾನೆ. ನನಗೆ ಅವನು ಮ್ಯಾಚ್ ಆಗುತ್ತಿದ್ದ. ಸೆನ್ಸಿಬಲ್ ಆಗಿದ್ದಾನೆ. ಅವನೇ ವಿನ್ ಆಗಬೇಕು ಎಂದಿದ್ದಾರೆ.
77
Image Credit : colors kannada
ಟಾಪ್ 5 ಯಾರು?
ಟಾಪ್ 5 ಯಾರು ಎಂಬ ಪ್ರಶ್ನೆಗೆ, ಸಹಜವಾಗಿ ಎಲ್ಲರಂತೆಯೇ ಧನುಷ್ ಜೊತೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ಹೆಸರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.