Headlines

ನನ್ನನ್ನು ಗಂಭೀರವಾಗಿ ಸ್ವೀಕರಿಸಿ; ಕೋರಿಕೊಂಡ ಪಂಕಜ್ ತ್ರಿಪಾಠಿ

ನನ್ನನ್ನು ಗಂಭೀರವಾಗಿ ಸ್ವೀಕರಿಸಿ; ಕೋರಿಕೊಂಡ ಪಂಕಜ್ ತ್ರಿಪಾಠಿ


ಪಂಕಜ್ ತ್ರಿಪಾಠಿ (ಪಂಕಜ್ ತ್ರಿಪಾಠಿ) ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಪಟ್ಟಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಟಿಟಿಯಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಾಸ್ಯದ ರೀತಿಯಲ್ಲಿ ಒಂದು ಗಂಭೀರ ವಿಷಯ ಹೇಳಿದ್ದಾರೆ. ‘ನನ್ನನ್ನು ಗಂಭೀರವಾಗಿ ಸ್ವೀಕರಿಸಿ’ ಎಂದು ಅವರು ಕೋರಿದ್ದಾರೆ. ಅಷ್ಟಕ್ಕೂ ಈ ಸ್ಥಿತಿ ಬಂದಿದ್ದು ಏಕೆ? ಆ ಬಗ್ಗೆ ಇಲ್ಲಿದೆ ವಿವರ.

ಇಂದು ಒಟಿಟಿಯಲ್ಲಿ ಸಾಕಷ್ಟು ಕ್ರಾಂತಿ ಆಗಿದೆ. ಅನೇಕ ನಾಯಕರು ನಿರ್ದೇಶಕರು ಹುಟ್ಟಿದ್ದಾರೆ. ಅವರೆಲ್ಲರೂ ಸಾಕಷ್ಟು ಆದ ರೀತಿಯಲ್ಲಿ ಒಟಿಟಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಒಟಿಟಿ ಕ್ರಾಂತಿ ಆಗಿದ್ದು ಕೋವಿಡ್ ಬಳಿಕ. ಭಾರತದಲ್ಲಿ ಒಟಿಟಿ ಜನಕ ತಾವು ಎಂಬುದು ಪಂಕಜ್ ಅವರ ಅಭಿಪ್ರಾಯ.

‘ಅಮೇಜಾನ್ ಪ್ರೇಮ್ ನಲ್ಲಿ ಬಂದ ಮೊದಲ ವೆಬ್ ಸೀರಿಸ್ ಮಿರ್ಜಾಪುರ್ ನನ್ನದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಂದ ಇಂಡಿಯಾದ ಸೀರಿಸ್‌ಗಳಲ್ಲಿ ಸೆಕ್ರೆಡ್ ಗೇಮ್ಸ್, ಅದು ಕೂಡ ನನ್ನದೇ. ಹಾಟ್‌ಸ್ಟಾರ್‌ನಲ್ಲಿ ಬಂದ ಕ್ರಿಮಿನಲ್ ಜಸ್ಟಿಸ್ ಕೂಡ ನನ್ನದೇ’ ಎಂದು ಪಂಕಜ್ ತ್ರಿಪಾಠಿ ಅವರು ಹೇಳಿದರು. ಈ ವೇಳೆ ಅವರು ಸರಿಯಾಗಿ ಸ್ವೀಕರಿಸಬೇಕು ಎಂದು ಮನವಿ ಮಾಡಿಕೊಂಡರು. ಅನೇಕರು ಇದನ್ನು ಫನ್ ಆಗಿಯೇ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಸಾಕಷ್ಟು ವೆಬ್ ಸೀರಿಸ್‌ಗಳು ಬರುತ್ತಿವೆ. ಹಲವು ಸೀರಿಸ್‌ಗಳು ಬಂದು ಹಿಟ್ ಕೂಡ ಆಗಿವೆ. ಆ ಬಳಿಕ ಆ ನಿರ್ದೇಶಕರು ಹಾಗೂ ಹೀರೋಗಳನ್ನು ಹಿಡಿಯೋಕೆ ಸಾಧ್ಯವಿಲ್ಲ ಎಂಬಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಅವರು ಈ ರೀತಿ ಹೇಳಬಹುದೆಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಇದ್ದಿದ್ದರೆ ರೈತನಾಗುತ್ತಿದ್ದ ಪಂಕಜ್ ತ್ರಿಪಾಠಿ; ಆದರೆ ಅಲ್ಲಾಗಿದ್ದೇ ಬೇರೆ

ಪಂಕಜ್ ತ್ರಿಪಾಠಿ ಅವರು ಕನ್ನಡದಲ್ಲೂ ನಟಿಸಿದ್ದರು. ಶಿವರಾಜ್ ಕುಮಾರ್ ನಟನೆಯ ‘ಚಿಗುರಿದ ಕನಸು’ ಸಿನಿಮಾದಲ್ಲಿ ಪಂಕಜ್ ನಟಿಸಿದ್ದರು. ಪಂಕಜ್ ಅವರು ನಟನೆ ಕಲಿತಿದ್ದು ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ದಲ್ಲಿ. ಅವರು ಇದರಲ್ಲಿ ನಟನಾ ಶಿಕ್ಷಣ ಪಡೆಯುತ್ತಿರುವಾಗ ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರ ಮಾಡಿದರು. ಅದರಲ್ಲಿ ‘ಚಿಗುರಿದ ಕನಸು’ ಕೂಡ ಒಂದು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆಳೆಯನ ಪಾತ್ರದಲ್ಲಿ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:11 am, ಮಂಗಳವಾರ, 9 ಡಿಸೆಂಬರ್ 25



Source link

Leave a Reply

Your email address will not be published. Required fields are marked *